ಚೀನಾದಲ್ಲಿದ್ದುಕೊಂಡೇ ಚೀನಾ ವಿರುದ್ಧ ತನಿಖಾ ವರದಿಗಾರಿಕೆ: ಡ್ರ್ಯಾಗನ್ ಮುಖವಾಡ ಬಯಲು!

Jun 14, 2021, 6:37 PM IST

ಬೀಜಿಂಗ್(ಜೂ.14): ಚೀನಾದಲ್ಲಿದ್ದುಕೊಂಡೇ ಡ್ರ್ಯಾಗನ್ ವಿರುದ್ಧ ತನಿಖಾ ವರದಿಗಾರಿಕೆ. ಚೀನಾ ಮುಖವಾಡ ಕಳಚಿಟ್ಟ ಭಾರತೀಯ ಮಹಿಳೆಗೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ. ಚೀನಾದ ಮುಸ್ಲಿಮರ ನರಕಕ್ಕೆ ಹೆಣ್ಣು ಹುಲಿಯಂತೆ ನುಗ್ಗಿದ ದಿಟ್ಟ ಲೇಡಿ. ಅಷ್ಟಕ್ಕೂ ಯಾರು ಈ ಮೇಘಾ ರಾಜಗೋಪಾಲನ್ ಹೇಗಿತ್ತು ಈಕೆಯ ದಿಟ್ಟ ವರದಿಗಾರಿಕೆ? 

ಜೀವದ ಹಂಗು ತೊರೆದು ಸಾಧನೆ: ಭಾರತ ಮೂಲದ ಮೇಘಾಗೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ!

ಚೀನಾ ಸರ್ಕಾರ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ 2017ರಲ್ಲಿ ಮುಸ್ಲಿಮರನ್ನು ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ಬಂಧನದಲ್ಲಿರಿಸಿತ್ತು. ಬಂಧಿತರ ಶಿಬಿರಕ್ಕೆ ಭೇಟಿ ನೀಡಿದ ಮೊದಲ ಪತ್ರಕರ್ತೆ ಮೇಘಾ. ಚೀನಾ ಆಕೆಯ ದನಿ ಅಡಗಿಸಲು ದೇಶದಿಂದಲೇ ಹೊರಹಾಕಿತು. ಆದರೆ ಶಿಬಿರದಿಂದ ತಪ್ಪಿಸಿಕೊಂಡವರನ್ನು ಕಜಕಸ್ತಾನದಲ್ಲಿ ಭೇಟಿ ಮಾಡಿ ಅಲ್ಲಿನ ಶೋಷಣೆಯನ್ನು ಈಕೆ ಜಗತ್ತಿಗೆ ತೋರಿಸಿದ್ದರು.