ಮಹಿಳಾ ಕಾನೂನು ಹೇಗಿರಬೇಕು? ಕತಾರ್ ನೋಡಿ ಕಲಿಯಿರಿ: ತಾಲಿಬಾನ್‌ಗೆ ಕ್ಲಾಸ್‌!

Oct 4, 2021, 3:50 PM IST

ಕಾಬೂಲ್ (ಅ. 04): ತಾರ್ ವಿದೇಶಾಂಗ ಸಚಿವ ಶೇಖ ಮಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅವರು ಯುರೋಪಿಯನ್ ವಿದೇಶಾಂತ ನೀತಿ ಮುಖ್ಯಸ್ಥ ಜೋಸೆಫ್ ಬೋರೆಲ್ ಜೊತೆ ಸುದ್ದಿಗೋಷ್ಠಿಯಲ್ಲಿ ಫಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ, ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ವಿರೋಧಿಸಿರುವುದು ನಿರಾಶದಾಯಕವಾಗಿದೆ ಎಂದಿದ್ಧಾರೆ. ಜೊತೆಗೆ ತಾಲಿಬಾನಿಗಳ ಕೆಲವು ಕ್ರಮ ತಮಗೆ ನೋವುಂಟು ಮಾಡಿದೆ ಎಂದಿದ್ದಾರೆ. 

ತಾಲಿಬಾನ್‌ಗೆ ಎಲ್ಲಿಂದಲೂ ಸಿಕ್ಕಿಲ್ಲ ಆರ್ಥಿಕ ಸಹಾಯ, ನೆರವಿಗೆ ನಿಂತ ಚೀನಾ

ಒಂದು ಇಸ್ಲಾಮಿಕ್ ರಾಷ್ಟ್ರವಾಗಿ ಯಾವ ರೀತಿ ಕಾನೂನು ಮಾಡಬೇಕು, ಮಹಿಳೆಯರ ವಿಷಯದಲ್ಲಿ ಕಾನೂನು ಹೇಗೆ ಡೀಲ್ ಮಾಡುತ್ತೆ ಅನ್ನೋದು ಗೊತ್ತಿರಬೇಕು. ಇದನ್ನ ಕತಾರ್ ನ್ಯಾಯವ್ಯವಸ್ಥೆ ನೋಡಿ ತಾಲಿಬಾನ್ ಕಲಿಯಬೇಕು. ನಮ್ಮಲ್ಲಿ ಉದ್ಯೋಗ, ಶಿಕ್ಷಣದಲ್ಲಿ ಪುರುಷರಿಗಿಂತ, ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ' ಎಂದಿದ್ಧಾರೆ.