ಬಿಜೆಪಿಯವರು ಮುಸ್ಲಿಂ ಬಯ್ಯೋದು ಬಿಟ್ಟರೆ ಬೇರೆ ಏನು ಮಾಡಿದಾರೆ? ಚುನಾವಣೆ ವೇಳೆ ಹಿಂದೂ ಹಿಂದೂ ಅಂತಾ ಹೇಳ್ತಾರೆ ಇವರ ಮಕ್ಕಳ ಮೇಲೆ ಯಾಕೆ ಕೇಸ್ ಇಲ್ಲ? ಹಿಂದೂ ಹೆಸರಲ್ಲಿ ಎಲ್ಲ ಶೋಷಿತ ವರ್ಗಗಳ ಮಕ್ಕಳ ಮೇಲೆ ಕೇಸ್‌ಗಳು ಇವೆ ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಹಾವೇರಿ (ಮೇ.5): ಈ ಚುನಾವಣೆ ನ್ಯಾಯ-ಅನ್ಯಾಯದ ನಡುವಿನ ಚುನಾವಣೆ, ಶೋಷಿತ ವರ್ಗಗಳ ಚುನಾವಣೆಯಾಗಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷ ಹಲವು ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ರಾಹುಲ್ ಗಾಂಧಿ(Rahul gandhi bhaat jodo yatra) ಪಾದಯಾತ್ರೆ ಮೂಲಕ ಮೋದಿ(PM Modi)ಯವರ ಸುಳ್ಳುಗಳನ್ನು ಜನರಿಗೆ ತಿಳಿಸಿಕೊಡುವ ಕೆಲಸ ಮಾಡಿದ್ದಾರೆ. ಮೋದಿಯವರ ಸುಳ್ಳುಗಳನ್ನೇ ಚುನಾವಣೆಯಲ್ಲಿ ಜನರಿಗೆ ತಿಳಿಸುವ ಮೂಲಕ ಚುನಾವಣೆ ಮಾಡುತ್ತಿದ್ದೇವೆ ಎಂದರು.
undefined
ಇನ್ನು ಕಾಂಗ್ರೆಸ್ ಪ್ರಣಾಳಿಕೆ(congress manifesto) ಮುಸ್ಲಿಂ ಲೀಗ್ ಪ್ರಣಾಳಿಕೆ ಎಂಬ ಪ್ರಹ್ಲಾದ್ ಜೋಶಿ(Pralhad joshi) ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ದುರ್ಬಿನು ಕೊಡಬೇಕು ಪ್ರಲ್ಹಾದ್ ಜೋಶಿಯವರಿಗೆ, ಮೋದಿಯವರಿಗೆ. ಪ್ರಣಾಳಿಕೆಯಲ್ಲಿ ಹಾಗೆ ಇದ್ದರೆ ಪ್ರಲ್ಹಾದ್ ಜೋಶಿ ರಾಜಕೀಯ ನಿವೃತ್ತಿ ತಗೊಳ್ತಾರಾ? ಎಂದು ಪ್ರಶ್ನಿಸಿದರು.
ಕೊಪ್ಪಳದಲ್ಲಿ ಹಿಟ್ನಾಳ್ ಬ್ರದರ್ಸ್ ಬೆಂಬಲಿಗರ ರೌಡಿಸಂ! ಕಾಂಗ್ರೆಸ್ ಮತ ಹಾಕುವಂತೆ ಬಿಜೆಪಿ ಮುಖಂಡನ ಮೇಲೆ ಹಲ್ಲೆ!
ಕಾಂಗ್ರೆಸ್ ಗೆ ಪ್ರಧಾನಿ ಅಭ್ಯರ್ಥಿ ಯಾರು(Who is PM Candidate of INDIA alliacne) ಅನ್ನೋದೇ ಗೊತ್ತಿಲ್ಲ ಎಂದಿದ್ದಾರೆ. ಪ್ರಧಾನಿ ಯಾರು ಅಂತ ಕ್ಲಿಯರ್ ಆಗಿ ಐಡೆಂಟಿ ಫೈ ಆಗಿಲ್ಲ ಅದನ್ನ ಒಪ್ಕೊತೇವೆ. ಆದರೆ ಇವರು ಪ್ರಧಾನಿ ಆಗಿದ್ರಲ್ಲ ಇವರು ಏನು ಮಾಡಿದಾರೆ? ಪ್ರಧಾನಿಯವರ ಮನ್ ಕಿ ಬಾತ್(mann ki baat) ಕೇಳಿ ಕಿವೀಲಿ ರಕ್ತ ಬಂದಿದೆ. ಡಿಗ್ರಿ ಓದೀರೋ ಮಕ್ಕಳಿಗೆ ಕೆಲಸ ಸಿಗ್ತಿಲ್ಲ. ಚರ್ಚೆ ಯಾವುದರ ಬಗ್ಗೆ ಆಗಬೇಕು? ಅದೇ ಮುಸಲ್ಮಾನ ಅದೇ ಪಾಕಿಸ್ತಾನ? 46 ಲಕ್ಷ ಮೆಟ್ರಿಕ್ ಟನ್ ಬೀಪ್ ರಪ್ತು ಮಾಡಿ ಭಾರತ ಎರಡನೇ ಸ್ಥಾನದಲ್ಲಿದೆ. ಇದನ್ನ ಪ್ರಧಾನಿ ಮೋದಿಯವರು, ಜೋಶಿಯವರು ಹೆಮ್ಮೆಯಿಂದ ಎದೆ ತಟ್ಟಿಕೊಂಡು ಹೇಳೋ ಕೆಲಸ ಅಂದ್ರೆ ಇದೊಂದೇ ಎಂದು ಲೇವಡಿ ಮಾಡಿದರು.
ಪ್ರಜ್ವಲ್ ರೇವಣ್ಣ(Prajwal Revanna sex scandal) ಕೇಸಿನಲ್ಲಿ ಇಂಟಲಿಜೆನ್ಸಿ ಏನ್ ಮಾಡ್ತಿತ್ತು ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಪ್ಪು ಹೇಳಿದ್ದಾರೆ. ಕೇಸ್ ರಜಿಸ್ಟರ್ ಆಗೋವರೆಗೆ ಏನು ಮಾಡಲು ಆಗಿಲ್ಲ. ಬಹಿರಂಗವಾಗಿ ಎಲ್ಲಾ ಗೊತ್ತಾಗಿದೆ ಇಂಟಲಿಜೆನ್ಸಿ ಯಾಕೆ ಬೇಕು? ಪುಲ್ವಾಮಾದಲ್ಲಿ 300 kg ಆರ್ ಡಿ ಎಕ್ಸ್ ಬಂದಾಗ ಇವರ ಇಂಟಲಿಜೆನ್ಸ್ ಎಲ್ಲಿತ್ತು ಅದಾಗಿ ಎರಡು ವರ್ಷ ಆಯ್ತು ಯಾರ ಮೇಲೆ ಕ್ರಮ ತಗೊಂಡ್ರು? ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ 117 ಪ್ರೆಸ್ ಮೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಯಾಕೆ ಒಂದೂ ಪ್ರೆಸ್ ಮೀಟ್ ಮಾಡಿಲ್ಲ? ಕೇಳಿದರೆ ಬಂಡವಾಳ ಬಯಲಾಗುತ್ತೆ ಎಂದೇ? ಎಂದು ತಿರುಗೇಟು ನೀಡಿದರು.
ಇನ್ನು ನೇಹಾ ಹಿರೇಮಠ ಹತ್ಯೆ ಪ್ರಕರಣ ವಿಚಾರ ಪ್ರಸ್ತಾಪಿಸಿದ ಸಚಿವರು, ಎಲ್ಲರೂ ನೇಹಾ ಮನೆಗೆ ಹೋದ್ರು? ಬಿಜೆಪಿಯವರು ಬೇರೆ ಇನ್ಸಿಡೆಂಟ್ ಗಳಿಗೆ ಯಾಕೆ ಹೋಗಲಿಲ್ಲ? ಬರೋದು ಹೇಳೋದು ಓಡಿ ಹೋಗೋದು ಇಷ್ಟೇ ಇವತ್ ಕೆಲಸ ಮುಗೀತು. ನಾಳೆಯಿಂದ ನೋಡ್ತಾ ಇರಿ. ಪ್ರಲ್ಹಾದ್ ಜೋಶಿಯವರು ನಡ್ಡಾ, ಅಮಿತ್ ಶಾ ಎಲ್ಲರನ್ನೂ ಕರೆಸಿದ್ರು. ಇಷ್ಟೆಲ್ಲ ಜನರನ್ನು ಕರೆಸೋ ಅವಶ್ಯಕತೆ ಏನಿತ್ತು? ಅಭಿವೃದ್ಧಿ ಮಾಡಿದ್ರೆ ಇಷ್ಟು ಜನರನ್ನು ಯಾಕೆ ಕರೆಸ್ತಿದ್ರು? ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಗೆಲ್ತಾರೆ. ಹಾವೇರಿಯಲ್ಲಿಯೂ ಗೆಲ್ಲುವ ವಾತಾವರಣ ಇದೆ ಎಂದರು.
ಬಿಜೆಪಿಯವರು ಮುಸ್ಲಿಂ ಬಯ್ಯೋದು ಬಿಟ್ಟರೆ ಬೇರೆ ಏನು ಮಾಡಿದಾರೆ? ಹಿಂದೂ ಹಿಂದೂ ಅಂತಾರಲ್ಲ? ಹಿಂದೂ ಸಮಾಜದ ಸಣ್ಣ ಸಣ್ಣ ಸಮಾಜದವರನ್ನು ಕೊಡ -ತಗೊಳೋದು ಮಾಡಿ. ದೇಶದಲ್ಲಿ 19ಕ್ಕೂ ಹೆಚ್ಚು ಶಕ್ತಿ ಪೀಠಗಳಿದೆ, ಸಾವಿರಾರು ದೇವಸ್ಥಾನ ಇವೆ. ಇವರು ಮಾಡಿದ್ದು ಅರ್ಧ ಅರ್ಧ ದೇವಸ್ಥಾನ ಮಾಡಿದ್ದಾರೆ. ಚುನಾವಣೆ ವೇಳೆ ಹಿಂದೂ ಹಿಂದೂ ಅಂತಾ ಹೇಳ್ತಾರೆ ಇವರ ಮಕ್ಕಳ ಮೇಲೆ ಯಾಕೆ ಕೇಸ್ ಇಲ್ಲ? ಹಿಂದೂ ಹೆಸರಲ್ಲಿ ಎಲ್ಲ ಶೋಷಿತ ವರ್ಗಗಳ ಮಕ್ಕಳ ಮೇಲೆ ಕೇಸ್‌ಗಳು ಇವೆ. ನಿಮ್ಮ ಮಕ್ಕಳ ಮೇಲೆ ಯಾಕೆ ಕೇಸ್‌ಗಳು ಇಲ್ಲ. ಯಾಕೆ ಗಲಾಟೆಯಲ್ಲಿ ಸೇರೊಲ್ಲ? ಎಂದು ವಾಗ್ದಾಳಿ ನಡೆಸಿದರು.