ಬೈಡನ್ ಆಡಳಿತದಲ್ಲಿ ಕೊರೋನಾ ನಿಯಂತ್ರಣ; ಟ್ರಂಪ್‌ಗಿನ್ನು ಪದತ್ಯಾಗ ಮಾಡೋದು ಅನಿವಾರ್ಯ..!

Dec 9, 2020, 10:33 AM IST

ವಾಷಿಂಗ್‌ಟನ್ (ಡಿ. 09): ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಮೊದಲ 100 ದಿನಗಳ ಆಡಳಿತದಲ್ಲಿ ಕೊರೋನಾ ನಿಯಂತ್ರಿಸುವ ಕ್ರಮಗಳೇನು ಎಂಬುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಟ್ರಂಪ್ ಹಾಗೂ ಅವರ ಬೆಂಬಲಿಗರು ಮಾಡುತ್ತಿರುವ ಚುನಾವಣಾ ಅಕ್ರಮ ಆರೋಪಕ್ಕೆ ಹುರುಳಿಲ್ಲ ಎಂದಿದೆ ಕೋರ್ಟ್. ಇನ್ನಾದರೂ ಟ್ರಂಪ್ ಪದತ್ಯಾಗ ಮಾಡಲು ಮನಸ್ಸು ಮಾಡುತ್ತಾರಾ ನೋಡಬೇಕು.

ಬೇಡಿಕೆ ಈಡೇರುವವರೆಗೆ ಹೋರಾಟ, ತೀವ್ರಗೊಂಡ ರೈತರ ಪ್ರತಿಭಟನೆ ಕಿಚ್ಚು! 

ಫೈಝರ್‌ನ ಮೊದಲ ಡೋಸ್ ಕೊರೋನಾವನ್ನು ತಡೆಯುವಲ್ಲಿ ಪರಿಣಾಮಾಕಾರಿ. ಹಾಗಂಥ ನಿರ್ಲಕ್ಷ್ಯ ಬೇಡ. ಎರಡನೇ ಡೋಸ್ ಲಸಿಕೆಯನ್ನು ಪಡೆಯುವುದು ಅನಿವಾರ್ಯವೆಂದು ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಹೇಳಿದೆ.  ಎಲೋನ್ ಮಸ್ಕ್. ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಹೆಸರು. ಇವರು ವಿಶ್ವದ 2ನೇ ಶ್ರೀಮಂತ ಪಟ್ಟಕ್ಕೇರಿದ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ. ಇದೀಗ ಕ್ಯಾಲಿಫೋರ್ನಿಯಾ ಬಿಟ್ಟು ಟೆಕ್ಸಾಸ್‌ನಲ್ಲಿ ವಾಸಿಸುವುದಾಗಿ ಮಸ್ಕ್ ಘೋಷಿಸಿದ್ದಾರೆ. ಇನ್ನಷ್ಟು ಸುದ್ದಿಗಳ ಹೂರಣ ಟ್ರೆಂಡಿಂಗ್‌ ನ್ಯೂಸ್‌ನಲ್ಲಿ...!