ಸುತ್ತಲೂ ಶತ್ರುಕೋಟೆ.. ಮಧ್ಯದಲ್ಲಿ ಅಲುಗಾಡದೆ ನಿಂತಿದೆ ಒಂಟಿ ಇಸ್ರೇಲ್..!

Oct 10, 2023, 2:44 PM IST

ಸುತ್ತಲೂ ಶತ್ರುಕೋಟೆ ಒಬ್ಬರಿಗಿಂತ ಒಬ್ಬರು ಡೆಡ್ಲಿ ಡೇಂಜರಸ್ ವೈರಿಗಳು. ಮಧ್ಯದಲ್ಲಿ ಒಂಟಿ ಇಸ್ರೇಲ್. ಆದ್ರೆ ಶತ್ರುಗಳೆಲ್ಲಾ ಒಂದಾಗಿ ಎರಗಿದ್ರೂ ಇಸ್ರೇಲನ್ನು ಅಲುಗಾಡಿಸಲು ಸಾಧ್ಯವಾಗ್ತಿಲ್ಲ. ಕ್ಷಿಪಣಿಗಳ ಮೇಲೆ ಕ್ಷಿಪಣಿ ಉಡಾಯಿಸಿದ್ರೂ ಅಲುಗಾಡದೆ ನಿಂತಿದ್ದಾನೆ ಇಸ್ರೇಲ್ ಅನ್ನೋ ಒಂಟಿ ವೀರ. ಶತ್ರು ದಾಳಿಯಿಂದ ಇಸ್ರೇಲನ್ನು( Israel) ರಕ್ಷಿಸ್ತಾ ಇರೋದು ಆ ಆಪದ್ಭಾಂಧವ, ಆಪ್ತರಕ್ಷಕ. ಆ ರಾಷ್ಟ್ರದ ಜನಸಂಖ್ಯೆ ಕೇವಲ 93 ಲಕ್ಷ. ಇನ್ನು ವಿಸ್ತೀರ್ಣದಲ್ಲಿ ಇಸ್ರೇಲ್ ನಮ್ಮ ಕರ್ನಾಟಕಕ್ಕಿಂತ 9 ಪಟ್ಟು ಚಿಕ್ಕದು. ಆದ್ರೆ ಸೇನಾವ್ಯೂಹ, ರಕ್ಷಣಾ ವ್ಯವಸ್ಥೆಯ ವಿಚಾರಕ್ಕೆ ಬಂದ್ರೆ ಜಗತ್ತಿನ ದೊಡ್ಡ ದೊಡ್ಡ ದೇಶಗಳಿಗೇ ಸವಾಲ್ ಹಾಕಿ ನಿಲ್ಲದೆ ಸಣ್ಣ ದೇಶ ಇಸ್ರೇಲ್. ಅವ್ರ ಸೇನಾಶಕ್ತಿ ಎಂಥದ್ದು ಅನ್ನೋದು ಪ್ರಪಂಚದ ಮುಂದೆ ಮತ್ತೊಮ್ಮೆ ಅನಾವರಣವಾಗಿದೆ. ತನ್ನನ್ನು ಕೆಣಕಿದ ಪ್ಯಾಲೆಸ್ತೀನ್‌ನ(Palestine) ಹಮಾಸ್(Hamas) ಉಗ್ರರನ್ನು ಹೊಸಕಿ ಹಾಕಿದೆ ಇಸ್ರೇಲ್ ಸೇನಾ ಪಡೆ. ಇಸ್ರೇಲ್ ಸುತ್ತ ನಾಲ್ಕೂ ದಿಕ್ಕುಗಳಲ್ಲಿ ಇರೋದು ಬರೀ ಶತ್ರುಗಳೇ. ಪ್ಯಾಲೆಸ್ತೀನ್, ಈಜಿಪ್ಟ್, ಜೋರ್ಡನ್, ಸಿರಿಯಾ, ಲೆಬನಾನ್, ಇರಾನ್ ಮತ್ತು ಇರಾಕ್. ಸುತ್ತ ಮುತ್ತ ಚಕ್ರವ್ಯೂಹ ಹೆಣೆದಂತೆ ಇಸ್ರೇಲ್ ದೇಶವನ್ನು ವೈರಿಗಳೇ ಸುತ್ತುವರಿದು ಬಿಟ್ಟಿದ್ದಾರೆ. ಎಲ್ಲರಿಗೂ ಇಸ್ರೇಲನ್ನು ಪ್ರಪಂಚದ ಭೂಪಟದಿಂದ ಅಳಿಸಿ ಹಾಕುವಂಥಾ ಯುದ್ಧೋನ್ಮಾದ. ಆದ್ರೆ ಅಳಿಸಿ ಹಾಕೋದಿರ್ಲಿ.. ಇಲ್ಲಿವರೆಗೆ ಯಾರೂ ಕೂಡ ಇಸ್ರೇಲನ್ನು ಒಂದಿಂಚೂ ಅಲುಗಾಡಿಸಲೂ ಸಾಧ್ಯವಾಗಿಲ್ಲ. ಕಾರಣ ಇಸ್ರೇಲ್ ಎಂಬ ಸಣ್ಣ ದೇಶದ ದೊಡ್ಡ ರಕ್ಷಣಾ ಶಕ್ತಿ. ದಂಡೆತ್ತಿ ಬಂದ ಹಮಾಸ್ ಉಗ್ರರ ತಿಥಿ ಮಾಡೋ ಮೂಲಕ ತನ್ನ ಸೇನಾ ಶಕ್ತಿ ಎಂಥದ್ದು ಅನ್ನೋದನ್ನು ಜಗತ್ತಿಗೆ ಮತ್ತೊಮ್ಮೆ ಸಾರಿ ಸಾರಿ ಹೇಳಿದೆ ಇಸ್ರೇಲ್.

ಇದನ್ನೂ ವೀಕ್ಷಿಸಿ:  ವಿದೇಶಿಗರ ಪ್ರಾಣ ನುಂಗ್ತಿದ್ದಾರೆ ಹಮಾಸ್ ಉಗ್ರರು: ನಡುರಸ್ತೆಯಲ್ಲೇ ಕಿಡ್ನಾಪ್ ಮಾಡಿದ ರಾಕ್ಷಸರು!