Oct 29, 2023, 2:32 PM IST
ಹಮಾಸ್ ಉಗ್ರ ಸುರಂಗದಲ್ಲಿ ಶುರುವಾಗಿದೆ ಇಸ್ರೇಲ್ ಯೋಧರ ರಣಾರ್ಭಟ. ಇಸ್ರೇಲ್ ಹಮಾಸ್ ಉಗ್ರರ ಮೇಲೆ ಪ್ರತಿದಾಳಿ ಆರಂಭಿಸಿ ಮೂರು ವಾರಗಳೇ ಕಳೆದಿವೆ.ಆದ್ರೆ ಈ ವಾರ್‌ನಲ್ಲಿ ಯಾರು ಮೇಲುಗೈ ಸಾಧಿಸಿದ್ರು ಅನ್ನೋದು ಹೇಳೊದೇ ಕಷ್ಟ. ಯಾಕಂದ್ರೆ, ಬಲಿಷ್ಠ ಸೇನಾಪಡೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಅಸಮಾನ್ಯ ಗುಪ್ತಚರ ಅಧಿಕಾರಿಗಳು, ಇದೆಲ್ಲವೂ ಇದ್ದು, ಇಸ್ರೇಲ್ ವಿಲವಿಲಗುಡುತ್ತಿದೆ. ಹಮಾಸ್(Hamas) ಉಗ್ರರು ನಡೆಸಿದ ದಾಳಿಗೆ ನಿಜಕ್ಕೂ ದೊಡ್ಡ ನಷ್ಟ ಅನುಭವಿಸಿದ್ದು, ಇಸ್ರೇಲಿಗಿಂತಾ ಹೆಚ್ಚಾಗಿ, ಗಾಜಾ.. ಗಾಜಾದ(Gaza)ಆಸ್ಪತ್ರೆಗಳು, ಶಾಲೆಗಳು, ಧಾರ್ಮಿಕ ತಾಣಗಳು, ಎಲ್ಲವೂ ಕೂಡ ಧ್ವಂಸವಾಗ್ತಾ ಇದಾವೆ. ಈ ಎರಡೂ ದೃಶ್ಯಗಳನ್ನ ನೋಡಿದ ಮೇಲೆ ಒಂದಂತೂ ಸ್ಪಷ್ಟವಾಗುತ್ತೆ. ಆ ಮಾತನ್ನ ಇಸ್ರೇಲ್(Israel) ಕೂಡ ಒಪ್ಪಿಕೊಳ್ಳುತ್ತೆ. ಹಮಾಸ್ ಉಗ್ರರ ಉದ್ದೇಶ ಇದ್ದದ್ದು ಇಸ್ರೇಲಿನಲ್ಲಿ ವಿಧ್ವಂಸ ಸೃಷ್ಟಿಸಬೇಕು, ನೆಮ್ಮದಿಯಾಗಿರೋ ಇಸ್ರೇಲಿನ ಜನಕ್ಕೆ ಭಯ ಅಂದ್ರೇನು ಅಂತ ಇಂಟ್ರುಡ್ಯೂಸ್ ಮಾಡ್ಸೋದಾಗಿತ್ತು. ಆ ವಿಚಾರದಲ್ಲಿ ಹಮಾಸ್ ಸಂಪೂರ್ಣ ಗೆದ್ದಿದೆ. ನನ್ನ ಎರಡೂ ಕಣ್ ಹೋದ್ರೂ ಸರಿ, ಎದುರಾಳಿಯ ಒಂದ್ ಕಣ್ಣಾದ್ರೂ ಹಾಳಅಗ್ಬೇಕು ಅನ್ನೋದೇ, ಹಮಾಸ್ ಉಗ್ರರ ಉದ್ದೇಶವಾಗಿತ್ತು. ಇಸ್ರೇಲ್ ಹಮಾಸ್ ಉಗ್ರರ ತವರಿನಂತಿರೋ ಗಾಜಾ ಮೇಲೆ ಭೀಕರ ದಾಳಿ ಮಾಡ್ತಾ ಇದೆ. ಕಟ್ಟಡಗಳೆಲ್ಲಾ ನೆಲಕ್ಕುರುಳಿವೆ.ಸಹಸ್ರಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ಅದಷ್ಟೇ ಅಲ್ಲ, ಉಗ್ರರಿಗೆ ಶ್ವಾಸನಾಳದ ಹಾಗಿದ್ದ ಟನಲ್‌ಗಳೇ ಇಸ್ರೇಲಿನ ಮೇನ್ ಟಾರ್ಗೆಟ್ ಆಗಿದೆ.
ಇದನ್ನೂ ವೀಕ್ಷಿಸಿ: ವೇಣುಗೋಪಾಲ್ ಜಯಚಂದ್ರ 41ನೇ ವಯಸ್ಸಲ್ಲಿ ಪ್ಯಾರ ಅಥ್ಲೀಟ್ ಆಗಿದ್ದು ಹೇಗೆ ?