ಚೀನಾ ಆಕ್ರಮಣಕಾರಿ ನಡೆಗೆ ಅಮೆರಿಕ ಖಂಡನೆ

Jun 20, 2020, 11:23 AM IST

ನ್ಯೂಯಾರ್ಕ್(ಜೂ.20): ಚೀನಾ ಕಮ್ಯುನಿಷ್ಟ್ ಸರ್ಕಾರದಿಂದ ಗಡಿ ನಿಯಮ ಉಲ್ಲಂಘನೆಯಾಗುತ್ತಿದೆ. ನೆರೆ ರಾಷ್ಟ್ರಗಳೊಂದಿಗೆ ಚೀನಾ ಅಪ್ರಾಮಾಣಿಕವಾಗಿ ವರ್ತಿಸುತ್ತಿದೆ ಎಂದು ಅಮೆರಿಕ ಕಟುಶಬ್ಧಗಳಿಂದ ಚೀನಾ ನಡೆಯನ್ನು ಖಂಡಿಸಿದೆ.

ಹಾಂಕಾಂಗ್ ಜನರ ಸ್ವಾತಂತ್ರ್ಯ ಕಿತ್ತುಕೊಳ್ಳಲು ಚೀನಾ ಯತ್ನಿಸುತ್ತಿದೆ ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕೆಲ್ ಪೊಂಪೆ ಚೀನಾದ ಆಕ್ರಮಣಕಾರಿ ನೀತಿಯನ್ನು ಖಂಡಿಸಿದ್ದಾರೆ. 

ಚೀನಾಗೆ ಲಾಸಾ ಆಕ್ರಮಣ ತಯಾರಿಯಾದ್ರೆ, ನೆಹರೂಗೆ ಚೀನಾಗೆ ವಿಟೋ ಕೊಡಿಸುವ ತಯಾರಿ.!

ಜೂನ್ 15ರ ತಡರಾತ್ರಿ ಪೂರ್ವ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಚೀನಿ ಸೈನಿಕರು ಅಟ್ಟಹಾಸ ಮೆರೆದಿದ್ದರು. ಈ ವೇಳೆ ಭಾರತದ ಇಪ್ಪತ್ತು ವೀರ ಯೋಧರು ಪ್ರಾಣ ಕಳೆದುಕೊಂಡಿದ್ದರು. ಡ್ರ್ಯಾಗನ್ ನರಿಬುದ್ದಿಯ ವಿರುದ್ಧ ವಿಶ್ವದ ದೊಡ್ಡಣ್ಣ ತುಟಿಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.