Jul 5, 2023, 5:10 PM IST
ಅಲ್ಜೇರಿಯಾ ಮೂಲದ ನಿರಾಶ್ರಿತ 17 ವರ್ಷದ ಬಾಲಕನನ್ನು ಪೊಲೀಸರು ಯಾವುದೇ ಕಾರಣವಿಲ್ಲದೇ ಹತ್ಯೆ ಮಾಡಿದರು ಎಂಬ ಕಾರಣ ನೀಡಿ ಆರಂಭವಾದ ದಂಗೆಯೊಂದು ಫ್ರಾನ್ಸ್ ಅನ್ನು ಸುಡುತ್ತಿದೆ. ಒಂದು ಕಾಲದಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಿ ಎಂದು ಕೈ ಚಾಚಿ ಕರೆಸಿಕೊಂಡಿದ್ದ ಫ್ರಾನ್ಸ್ ಮೂಲ ನಿವಾಸಿಗಳು ಇಂದು ಅವರಿಂದಲೇ ಸಂಕಟಕ್ಕೀಡಾಗಿದ್ದಾರೆ. ಯುದ್ಧ ಪೀಡಿತ ಸಿರಿಯಾ ಇರಾನನ್‌ನಿಂದ ವಲಸೆ ಬಂದ ವಲಸಿಗ ಮುಸ್ಲಿಮರ ಸಂಖ್ಯೆ ಫ್ರಾನ್ಸ್‌ನ ಎಲ್ಲಿ ಹೆಚ್ಚಿದೆಯೋ ಅಲ್ಲೆಲ್ಲಾ ಹಿಂಸೆ ಗಲಭೆ ಹೆಚ್ಚಾಗಿದೆ. ಪ್ರಣಯಕ್ಕಂತಲೇ ಫೇಮಸ್ ಆಗಿದ್ದ ಆ ರಾಷ್ಟ್ರದಲ್ಲಿ ಈಗ ಅಕ್ಷರಶಃ ಅಗ್ನಿಪ್ರಳಯವೇ ಸಂಭವಿಸ್ತಾ ಇದೆ. ಎಲ್ಲೆಲ್ಲೂ ಸ್ಫೋಟ. ಎಲ್ಲೆಲ್ಲೂ ದಳ್ಳುರಿ.. ಎಲ್ಲೆಲ್ಲೂ ವಿಷಜ್ವಾಲೆ.. ಅವತ್ತು ಅಯ್ಯೋ ಪಾಪಾ ಅಂತ ಆಶ್ರಯ ಕೊಟ್ಟಿದ್ದಕ್ಕೆ, ಇವತ್ತು ಫ್ರಾನ್ಸಿಗೆ ಇಂಥಾ ದುಸ್ಥಿತಿ ಬಂತಾ..? ಮತ್ತೆ ಭಯ ಹುಟ್ಟಿಸ್ತಾ ಇರೋದೇಕೆ ಯುರೇಬಿಯಾ ಫೋಬಿಯಾ..? ಏನಿದು ಷಡ್ಯಂತ್ರ..? ಈ ವಿಧ್ವಂಸವೆಲ್ಲಾ ಯಾರಿಗೆ ಎಚ್ಚರಿಕೆ ಗಂಟೆ..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಯರೋಬಿಯಾ ರಹಸ್ಯ.. ಈ ವೀಡಿಯೋ ವೀಕ್ಷಿಸಿ
ಫ್ರಾನ್ಸ್‌ನಲ್ಲಿ ಸತತ 6ನೇ ದಿನವೂ ಭಾರಿ ಹಿಂಸಾಚಾರ: 300ಕ್ಕೂ ಹೆಚ್ಚು ವಾಹನ, 35ಕ್ಕೂ ಹೆಚ್ಚು ಕಟ್ಟಡಗಳಿಗೆ ಬೆಂಕಿ