ತಾಲೀಬಾನ್ ರಕ್ತ ಬೀಜಾಸುರರು... ಕ್ರೂರತೆಗೆ ಕೊನೆ ಎಲ್ಲಿ?

Aug 23, 2021, 8:54 PM IST

ನವದೆಹಲಿ( ಆ. 23) ತಾಲೀಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಅಟ್ಟಹಾಸ ಮೆರೆಯುತ್ತಲೇ ಇದ್ದಾರೆ. ಅನೇಕ ದೇಶಗಳು ಹರಸಹಾಸ ಮಾಡಿ ತಮ್ಮ ದೇಶದ ನಾಗರಿಕರನ್ನು  ಕರೆಸಿಕೊಂಡಿವೆ.   ತಾಲೀಬಾನಿಗಳು ಕಾಲಿಟ್ಟಲ್ಲಿ ಒಂದು ಉಗ್ರ ಸಂಘಟನೆ ತಲೆ ಎತ್ತುತ್ತದೆ.

'ಮಹಿಳೆಯರನ್ನು ಗುಂಡಿಟ್ಟು ಕೊಂದು  ಶವದೊಂದಿಗೆ ತಾಲೀಬಾನಿಗಳ ಸೆಕ್ಸ್'

ತಾಲೀಬಾನಿಗಳು ಎಷ್ಟು ಕ್ರೂರಿಗಳು ಎನ್ನುವುದನ್ನು ಅವರ ಇತಿಹಾಸವೇ ಹೇಳುತ್ತದೆ. ಈಗ ಅಪ್ಘನ್ ನ ಪರಿಸ್ಥಿತಿಯ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು ಇಲ್ಲ. ಅಮೆರಿಕ ಸೇನೆ ಅಲ್ಲಿಂದ ತೆರಳಿದ ಮೇಲೆ ಅರಾಜಕತೆ ಸೃಷ್ಟಿಯಾಗಿದ್ದು ಅಲ್ಲಿನ ನಾಗರಿಕರಿಗೆ ಮುಂದಿನ ದಿನಗಳು ಇನ್ನಷ್ಟು ಕ್ರೂರವಾಗಲಿದೆ. ಪಂಜ್ ಶೀರ್ ಪ್ರಾಂತ್ಯದ ಸೇನೆಗೆ ನಾಗರಿಕರು ಬೆಂಬಲ ನೀಡಲು ಮುಂದಾಗಿದ್ದಾರೆ. ಅಭಿವ್ಯಕ್ತಿ ಸ್ವಾಂತಂತ್ರ್ಯಕ್ಕೆ ಬೆಲೆ ಇಲ್ಲದಂತಾಗಿದೆ.