Sep 11, 2022, 6:59 PM IST
ಬೆಂಗಳೂರು (ಸೆ. 11): ವಿಶ್ವದ ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕವೇ ಆಘಾತ ಕಂಡ ದಿನ 2001ರ ಸೆಪ್ಟೆಂಬರ್ 11. ವಿಶ್ವದ ದೊಡ್ಡಣ್ಣ ಅಮೆರಿಕದ ಇತಿಹಾಸದ ಅತ್ಯಂತ ಕರಾಳ ದಿನ. ಅಮೆರಿಕದ ಎರಡು ಅವಳಿ ಕಟ್ಟಡಗಳ ಮೇಲೆ ಆಗಿದ್ದ ಭಯೋತ್ಪಾದಕ ದಾಳಿ ಅಮೆರಿಕ ಮಾತ್ರವಲ್ಲದೆ ಇಡೀ ವಿಶ್ವವನ್ನೇ ನಡುಗಿಸಿತ್ತು. ಸುಮಾರು 3 ಸಾವಿರ ಅಮಾಯಕ ಜನರು ಸಾವಿಗೀಡಾದರು. 9/11 ಅನ್ನು ವಿಶ್ವದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದು ಎಂದು ಹೇಳಲಾಗಿದೆ. ಈ ಘಟನೆ ನಡೆದ 21 ವರ್ಷಗಳ ಬಳಿಕ, ಏಷ್ಯಾನೆಟ್ ನ್ಯೂಸ್‌ನ ಸಂವಾದ ಕಾರ್ಯಕ್ರಮದಲ್ಲಿ ಈ ದಾಳಿಯನ್ನು ಕಣ್ಣಾರೆ ಕಂಡ ವ್ಯಕ್ತಿಯೊಂದಿಗೆ ಮಾತನಾಡಿದೆ.ಎರಡು ವಿಮಾನಗಳು ಅವಳಿ ಕಟ್ಟಡಕ್ಕೆ ಬಡಿದ ಶಬ್ದದೊಂದಿಗೆ ಜನರ ಸಾವು-ನೋವುಗಳು ಆರಂಭವಾದವು. 2001ರ ಸೆಪ್ಟೆಂಬರ್ 11 ರಂದು ಆಗಿದ್ದೇನು ಎನ್ನುವ ಮಾತನ್ನು ಸ್ಟ್ಯಾನ್ಲಿ ಪ್ರೇಮನಾಥ್ ಅವರಿಂದಲೇ ಕೇಳೋಣ..