Oct 26, 2023, 5:37 PM IST
ಪಿಸಿಓಡಿ ಮಹಿಳೆಯರನ್ನು ಕಾಡುವ ಬಹಳ ಸಾಮಾನ್ಯವಾದ ಕಾಯಿಲೆಗಳಲ್ಲಿ ಒಂದಾಗಿದೆ. ಪಿಸಿಓಡಿ ಸಮಸ್ಯೆಯಿಂದ ಮಹಿಳೆಯರು ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಶೇಕಡಾ 70ರಷ್ಟು ಮಹಿಳೆಯರಿಗೆ ತಾವು ಪಿಸಿಓಡಿಯಿಂದ ಬಳಲುತ್ತಿದ್ದೇವೆ ಎಂಬುದು ಮೊದಲು ತಿಳಿಯೋದೇ ಇಲ್ಲ. ಚಿಕಿತ್ಸೆ ನಂತ್ರ ಇದು ಪತ್ತೆಯಾಗುತ್ತದೆ. ಹಾಗೆಯೇ ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಮಾತ್ರ ಪಿಸಿಓಡಿಗೆ ಚಿಕಿತ್ಸೆ ಸಾಧ್ಯ. ಪಿಸಿಓಡಿಗೆ ಸಂಬಂಧಿಸಿದ ಕೆಲವು ವಿಷಯಗಳು ಇಲ್ಲಿವೆ. ಪಿಸಿಓಡಿ (PCOD) ಅಂದರೆ ಪಾಲಿಸಿಸ್ಟಿಕ್ ಓವರಿ ಡಿಸಾರ್ಡರ್ ಒಂದು ರೀತಿಯ ಹಾರ್ಮೋನ್ ಡಿಸಾರ್ಡರ್. ಸ್ತ್ರೀ ದೇಹದಲ್ಲಿ ಪುರುಷ ಹಾರ್ಮೋನು (Hormone) ಗಳ (ಆಂಡ್ರೋಜೆನ್) ಮಟ್ಟವು ಹೆಚ್ಚಾಗುತ್ತದೆ.
ಇಷ್ಟಕ್ಕೂ ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಕಾಣಸಿಗೋ ಈ ಸಮಸ್ಯೆಗೆ ಕಾರಣವೇನು? ದಿನನಿತ್ಯದ ಬದುಕಿನಲ್ಲಿ ಮಾಡೋ ಸಣ್ಣಪುಟ್ಟ ತಪ್ಪುಗಳೇ ಪಿಸಿಒಡಿಗೆ ಕಾರಣನಾ ? ಈ ಬಗ್ಗೆ ಡಾ.ವಿದ್ಯಾ ವಿ. ಭಟ್ ಮಾಹಿತಿ ನೀಡಿದ್ದಾರೆ.