ಮೈಸೂರಿನ ಪುಟಾಣಿಯ ಸ್ಪ್ಯಾನಿಶ್‌ ದಾಖಲೆ!

Mar 24, 2022, 10:18 AM IST

ಕೃಷ್ಣಮೋಹನ ತಲೆಂಗಳ, ಮಂಗಳೂರು

ನಾವು ಸಂವಹನ(communication)ದಲ್ಲಿ, ತಾಂತ್ರಿಕತೆಯಲ್ಲಿ ಜಾಗತಿಕ ದೃಷ್ಟಿಕೋನದಲ್ಲಿ ಯೋಚಿಸುವ ಈ ದಿನಗಳಲ್ಲಿ ವಿದೇಶಿ ಭಾಷೆಗಳನ್ನು ಕಲಿಯುವುದು ಹೊಸ ಸುದ್ದಿಯೇನಲ್ಲ. ಆದರೆ, ಇಲ್ಲೊಬ್ಬಳು ಪುಟಾಣಿ ಸ್ಪ್ಯಾನಿಶ್(Spanish) ಭಾಷೆ ಕಲಿತದ್ದು ಮಾತ್ರ ಅಲ್ಲ, ಅದರಲ್ಲಿ ರಾಷ್ಟ್ರೀಯ ದಾಖಲೆ(National record)ಯನ್ನೂ ಬರೆದಿದ್ದಾಳೆ. ಈಕೆಯ ಹೆಸರು ಚಿರಾಧ್ಯ, ಈಕೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ(Bantwal) ತಾಲೂಕು ಮೂಲದ ಆನೆಕಲ್ಲು ಸತ್ಯಗಣಪತಿ ಭಟ್ ಹಾಗೂ ಅನುಪ್ರಿಯ ದಂಪತಿಯ ಮಗಳು. ವಯಸ್ಸು 8. ಸದ್ಯ ಮೈಸೂರಿ(Mysore)ನ ಮಾನಸ ಸರೋವರ ಪುಷ್ಕರಣಿ ವಿದ್ಯಾಶ್ರಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ.

ತನ್ನ ಸಾಧನೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್(India book of records) ಹಾಗೂ ಕರ್ನಾಟಕ ಆಚಿವರ್ಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಈಕೆಯ ಹೆಸರು ದಾಖಲಾಗಿದೆ ಎಂಬುದೇ ಸಾಧನೆ. ಈಕೆ 1ರಿಂದ 100ರ ವರೆಗಿನ ಸಂಖ್ಯೆಗಳನ್ನು ಸ್ಪ್ಯಾನಿಶನಲ್ಲಿ 1 ನಿಮಿಷ 10 ಸೆಕೆಂಡ್ನಲ್ಲಿ ಹೇಳಿ ಈ ವಯಸ್ಸಿಗೇ ದಾಖಲೆ ನಿರ್ಮಿಸಿದ್ದಾಳೆ. ಬಾಲ್ಯದಲ್ಲಿ ಸ್ಪ್ಯಾನಿಶ್ ಭಾಷೆಯನ್ನು t.v ಕಾರ್ಟೂನ್ ಇಂದ ಕಲಿತ ಈಕೆ ನಂತರ ತನ್ನ ತಾಯಿಯ ಸಹಕಾರದಿಂದ youtube ನಿಂದ ಹೆಚ್ಚಿನ ಸಂಖ್ಯೆಗಳನ್ನು ಕಲಿತು ಅತ್ಯಂತ ವೇಗವಾಗಿ ಹೇಳುವ ಮುಖಾಂತರ ದಾಖಲೆ ನಿರ್ಮಸಿದ್ದಾಳೆ. ಟಿವಿ ಕಾರ್ಟೂನ್ ನಿಂದ ಈಕೆಯ ಸ್ಪ್ಯಾನಿಷ್ ಭಾಷೆಯ ಒಲವನ್ನು ಕಂಡ ಈಕೆಯ ಅಮ್ಮ ಅನುಪ್ರಿಯಾ ಲಾಕ್ಡೌನ್ ಸಮಯದಲ್ಲಿ ಯೂಟ್ಯೂಬ್(youtube)ನಿಂದ ಹೆಚ್ಚಿನ ಸಂಖ್ಯೆ, ಸ್ಪ್ಯಾನಿಶ್ ಭಾಷೆಯಲ್ಲಿ ದೇಹದ ಭಾಗಗಳ, ಬಣ್ಣಗಳ, ವಾರಗಳ, ತಿಂಗಳುಗಳ, ಸರಳ ಪದಗಳ, ಪ್ರಾಣಿಗಳ ಹೆಸರುಗಳನ್ನು ಅರ್ಥ ಮಾಡಿ ಅತ್ಯಂತ ವೇಗವಾಗಿ ಹೇಳುವಂತೆ ಪ್ರೋತ್ಸಾಹಿಸಿದ್ದಾರೆ.

ಈ ಆಹಾರ ಅವಾಯ್ಡ್ ಮಾಡದೇ ಇದ್ದರೆ ಹೃದಯಾಘಾತ ಖಚಿತ
 
ಇಷ್ಟು ಮಾತ್ರ ಅಲ್ಲ, ಇತ್ತೀಚೆಗೆ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಕೀಬೋರ್ಡ್(keyboard) ನುಡಿಸುವಲ್ಲಿಯೂ ದಾಖಲೆ ನಿರ್ಮಿಸಿದ್ದಾಳೆ. ಈ ದಾಖಲೆಗಾಗಿ ಕಣ್ಣಿಗೆ ಪಟ್ಟಿ ಕಟ್ಟಿ 10 ಹಾಡುಗಳನ್ನು ಕೀಬೋರ್ಡ್ ನೋಡದೇ ನಿರರ್ಗಳವಾಗಿ ನುಡಿಸಿದ್ದು ಸಣ್ಣ ಸಾಧನೆ ಏನಲ್ಲ. ಈಕೆ ಮೈಸೂರಿನ  ಶ್ರೀ ಜೋಯೆಲ್ ಶಿರಿ ಅವರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾಳೆ.

ಓದು ಓದು ಅಂತಾ ಮಕ್ಕಳಿಗೆ ಒತ್ತಾಯ ಮಾಡೋ ಮುನ್ನ ಇದನ್ನೋದಿ

 ಚಿರಾಧ್ಯ ಬಹುಮುಖ ಪ್ರತಿಭೆ. ಈಕೆ ಚಿತ್ರ ರಚಿಸ್ತಾಳೆ, ಕವನ ರಚಿಸ್ತಾಳ, ಈಕೆಗೆ ಮುಂದೆ ಸ್ಪ್ಸಾನಿಶ್ ಹಾಡನ್ನು ಕೀಬೋರ್ಡಿನಲ್ಲಿ ನುಡಿಸುವ ಇರಾದೆ ಇದೆ.

ಒಟ್ಟಿನ್ಲಿ 8ರ ಕಿರಿಯ ವಯಸ್ಸಿಗೆ ಚಿರಾಧ್ಯಾಳಲ್ಲಿರುವ ಶ್ರದ್ಧೆ, ಗಾಂಭೀರ್ಯ, ಕಲಿತ ವಿದ್ಯೆಯಲ್ಲಿನ ತಲ್ಲೀನತೆ ಆಕೆಯೊಳಗೊಂದು ಪ್ರೌಢಿಮೆಯನ್ನು ಸೃಷ್ಟಿಸಿದೆ. ಆ ಪ್ರೌಢಿಮೆಯೇ ಆಕೆಗೊಂದು ಗುರುತಿಸುವಿಕೆ ನೀಡಿದೆ. ಈ ಪ್ರತಿಭೆ ಮತ್ತಷ್ಟು ಪಕ್ವವಾಗಲಿ, ಇನ್ನಷ್ಟು ಪುಟಾಣಿಗಳ ಕನಸುಗಳಿಗೆ ರೆಕ್ಕೆ ಕಟ್ಟಿ ಮತ್ತಷ್ಟು ಎತ್ತರಕ್ಕೆ ಹಾರಾಡಲು ಪ್ರೇರಣೆಯಾಗಲಿ...