ಮಗನಿಗಾಗಿ 14 ವರ್ಷಗಳಿಂದ ಊಟ ಬಿಟ್ಟ ಮಹಾತಾಯಿ!

Jan 14, 2020, 11:34 AM IST

ವಿಜಯಪುರ (ಜ. 14): ತಾಯಿ ಪ್ರೀತಿಗೆ ಸರಿಸಾಟಿಯೇ ಇಲ್ಲ ಎನ್ನುವುದು ಇದಕ್ಕೆ! ತೀರಿಹೋದ ಮಗನಿಗಾಗಿ 14 ವರ್ಷದಿಂದ ಊಟಬಿಟ್ಟಿದ್ದಾಳೆ ಮಹಾತಾಯಿ.  ಕೇವಲ ಚಹಾ ಮಾತ್ರ ಈಕೆಗೆ ಆಧಾರ! ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಸಾಸನೂರ ಗ್ರಾಮದ 75 ವರ್ಷದ ವಯಸ್ಸಿನ ಶಾಂತಮ್ಮ ಬಿರಾದಾರ ಕಳೆದ 14 ವರ್ಷಗಳಿಂದ ಊಟಬಿಟ್ಟು ದಿನಕ್ಕೆ ಮೂರ್ನಾಲ್ಕು ಬಾರಿ ಚಹಾ ಸೇವಿಸಿ ಜೀವ ಸವೆಸುತ್ತಿದ್ದಾಳೆ. ಶಾಂತಮ್ಮ-ಬಸವಂತರಾಯ ದಂಪತಿಗಳಿಗೆ ಇದ್ದ ಒಬ್ಬ ಮಗ ಶಿವನಗೌಡ ಬಿರಾದಾರ ಅನಾರೋಗ್ಯದಿಂದ ತೀರಿ ಹೋಗಿದ್ದಾರೆ.  ಜೀವಕ್ಕೆ ಜೀವವಾಗಿದ್ದ ಮಗನೇ ಇಲ್ಲದ ಮೇಲೆ ನಾನ್ಯಾಕೆ ಬದುಕಬೇಕು ಎಂದುಕೊಂಡ ಶಾಂತಮ್ಮ ಪ್ರಾಣಹಾನಿ ಮಾಡಿಕೊಳ್ಳದೇ ಆತನ ನೆನಪಲ್ಲೇ ಊಟಬಿಟ್ಟು ಜೀವನ ಸವೆಸುತ್ತಿದ್ದಾಳೆ. 

ಸಂಕ್ರಾಂತಿ ಹಬ್ಬ: ಇಳಕಲ್ ಸೀರೆಯುಟ್ಟು ಹೆಂಗಳೆಯರಿಂದ ಸಖತ್‌ ಸ್ಟೆಪ್!

ಶಾಂತಮ್ಮ ಊಟಬಿಟ್ಟ ಸುದ್ದಿಕೇಳಿ ಸಂಬಂಧಿಕರು ಆಸ್ಪತ್ರೆಗೆ ತೋರಿಸಿದ್ದಾರೆ. ಶಾಂತಮ್ಮಳನ್ನು ಪರೀಕ್ಷಿಸಿದ ವೈದ್ಯರು ಎಲ್ಲ ಸರಿಯಾಗಿದೆ ಊಟ ಮಾಡು ಎಂದು ಹೇಳಿ ಕಳುಹಿಸಿದ್ದಾರೆ. ಆದ್ರೆ ಈ ತಾಯಿ ಮಾತ್ರ ಮಗನ ನೆನಪಲ್ಲೇ ಕೊರಗುತ್ತಿದ್ದಾರೆ. ಇನ್ನು ಈ ಊರಲ್ಲಿ ಶಾಂತಮ್ಮ ಎನ್ನುವುದಕ್ಕಿಂತಲೂ ಈ ತಾಯಿ ಫೇಮಸ್ ಆಗಿರೋದು ಚಹಾ ಅಮ್ಮ ಅಂತನೇ! ತಾಯಿ ಪ್ರೀತಿ ಅಂದ್ರೆ ಇದೆ ಅಲ್ವಾ?