ಚಳಿಯಿಂದ ಹೆಚ್ಚುತ್ತಿದ್ಯಾ ಹಾರ್ಟ್ ಅಟ್ಯಾಕ್‌, ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ ?

Jan 12, 2023, 2:26 PM IST

ದೇಶಾದ್ಯಂತ ಚಳಿಯ ಅಬ್ಬರ ಹೆಚ್ಚಾಗಿದೆ. ಉತ್ತರಭಾರತದಲ್ಲಿ ಜನರು ಥಂಡಿ ಗಾಳಿಯಿಂದ ತತ್ತರಿಸಿ ಹೋಗಿದ್ದಾರೆ. ದಕ್ಷಿಣಭಾರತದಲ್ಲೂ ಚಳಿಯ ಅಬ್ಬರ ಕಡಿಮೆಯೇನಿಲ್ಲ. ರಾಜ್ಯದಲ್ಲೂ ತಾಪಮಾನ ದಿಢೀರ್ ಕುಸಿದಿದೆ. ಎಲ್ಲಾ ಜಿಲ್ಲೆಗಳಲ್ಲಿ ಮೈ ನಡುಗಿಸೋ ಚಳಿ ಶುರುವಾಗಿದೆ. ಬೆಂಗಳೂರಲ್ಲೂ ಚಳಿಯ ಅಬ್ಬರಕ್ಕೆ ಜನರು ಕಂಗಾಲಾಗಿದ್ದಾರೆ. ಪತರಗುಟ್ಟಿಸೋ ಚಳಿಯಿಂದ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ತಿವೆ. ಶೀತ ಗಾಳಿ ಮನುಷ್ಯನ ಪ್ರಾಣ ತೆಗೆಯುತ್ತಾ ? ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ? ಈ ಬಗ್ಗೆ ತಜ್ಞರು ಏನ್ ಹೇಳ್ತಾರೆ ನೋಡೋಣ.

ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಮಂಜುನಾಥ್ ಮಾತನಾಡಿ, 'ಚಳಿಗಾಲ (Winter)ದಲ್ಲಿ ಹೃದಯಾಘಾತವಾಗುವವರ ಸಂಖ್ಯೆ ಮೂರರಿಂದ ಐದರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಚಳಿಗಾಲದಲ್ಲಿ ಹೃದಯಾಘಾತ (Heartattack) ಮತ್ತು ಹಾರ್ಟ್‌ ಫೈಲ್ಯೂರ್ ಸ್ಪಲ್ಪ ಮಟ್ಟಿಗೆ ಹೆಚ್ಚಾಗಬಹುದು. ಇದರರ್ಥ ಹಾರ್ಟ್‌ ಅಟ್ಯಾಕ್ ಕೇವಲ ಚಳಿಗಾಲದಲ್ಲಿ ಮಾತ್ರ ಆಗುತ್ತೆ ಬೇಸಿಗೆಯಲ್ಲಿ ಆಗಲ್ಲ ಅನ್ನೋದಲ್ಲ' ಎಂದಿದ್ದಾರೆ. ಮಾತ್ರವಲ್ಲ 'ದೇಹದ ಟೆಂಪರೇಚರ್ ಕಡಿಮೆಯಾದಾಗ ಚಳಿ ಹೆಚ್ಚಾಗುತ್ತೆ, ಬೆರಳುಗಳು ಕೊಳೆಯೋಕೆ ಶುರುವಾಗುತ್ತೆ, ಮಾತನಾಡೋಕೆ ಆಗೋದಿಲ್ಲ, ಅರೆ ಪ್ರಜ್ಞಾವಸ್ಥೆಯ ಸ್ಥಿತಿಯೂ ಬರಬಹುದು. ಇದರಿಂದ ಹೃದಯಾಘಾತ ಆಗುತ್ತೆ, ಉಸಿರಾಟ ನಿಲ್ಲುತ್ತೆ' ಎಂದು ತಿಳಿಸಿದ್ದಾರೆ.

ಚಳಿಯಿಂದ ಮಕ್ಕಳನ್ನು (Children) ರಕ್ಷಿಸುವುದು ಹೇಗೆ ಎಂಬುದರ ಬಗ್ಗೆ ಮಕ್ಕಳ ವೈದ್ಯರಾದ ಸಯ್ಯದ್ ಮುಜಾಹಿದ್ ಹುಸೇನ್ ಹೇಳಿದ್ದಾರೆ. 'ಚಳಿಗಾಲದಲ್ಲಿ ಮಕ್ಕಳಲ್ಲಿ ಶೀತ, ಕೆಮ್ಮಿನ ಸಮಸ್ಯೆ ಹೆಚ್ಚಾಗುತ್ತೆ. ಹೀಗಾಗಿ ಶಾಲೆಯಲ್ಲಿ ಮಕ್ಕಳು ನೈರ್ಮಲ್ಯವನ್ನು (Clean) ಪಾಲಿಸುವಂತೆ ಹೇಳಿಕೊಡಬೇಕು. ಸೀನುವಾಗ, ಕೆಮ್ಮುವಾಗ ಕೈ ಅಡ್ಡ ಹಿಡಿಯುವಂತೆ ತಿಳಿಸಬೇಕು' ಎಂದಿದ್ದಾರೆ.

Winter Health: ಚಳಿಗಾಲ ನಿಜ, ಆದ್ರೆ ನಂಗ್ಯಾಕೆ ಎಲ್ರಿಗಿಂತ ಜಾಸ್ತಿ ಚಳಿಯಾಗುತ್ತೆ ?