ಸಿಂಗರ್ ಹನುಮಂತ ಬುದ್ದಿವಂತನಾ, ಮುಗ್ದತೆ ಮುಖವಾಡ ಹೊತ್ತ ಚಾಲಾಕಿನಾ?

ಸಿಂಗರ್ ಹನುಮಂತ ಬುದ್ದಿವಂತನಾ, ಮುಗ್ದತೆ ಮುಖವಾಡ ಹೊತ್ತ ಚಾಲಾಕಿನಾ?

Published : Oct 25, 2024, 12:22 PM IST

ನಾಮಿನೇಟ್ ಮಾಡಲು ಕರೆದರೇ, ಈತ ತನ್ನನ್ನ ತಾನೇ ನಾಮಿನೇಟ್ ಮಾಡಿಕೊಳ್ತಾನೇ. ಅಗತ್ಯಕ್ಕಿಂತ ತುಸು ಹೆಚ್ಚೇ ನಾಟಕೀಯವಾಗಿ ಆಡುವ ಈತ, ನಾಟಕ ಮಾಡ್ತಾ ಇದ್ದಾನೆ ಅನ್ನೋದು ವೀಕ್ಷಕರಿಗೆ ಹುಟ್ಟಿರೋ ಅನುಮಾನ..

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರೋ ಹನುಮಂತನ ಬಗ್ಗೆ ಮೊದಲು ಎಲ್ಲರೂ ಅನುಕಂಪ ವ್ಯಕ್ತಪಡಿಸ್ತಾ ಇದ್ರು. ದೊಡ್ಮನೆ ಗಲಾಟೆ ನಡುವೆ ಈ ಮುಗ್ದ ಹೇಗಿರ್ತಾನೆ ಅಂತ ಎಲ್ಲರೂ ಕಾಳಜಿ ವ್ಯಕ್ತಪಡಿಸಿದ್ರು. ಆದ್ರೆ ಈಗ ಹನುಮಂತನ ಬಗ್ಗೆ ಎಲ್ಲರೂ ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ. ಇವನು ನಿಜಕ್ಕೂ ಮುಗ್ದನಾ..? ಇಲ್ಲಾ ಚಾಲಾಕಿನಾ..? ಅಂತ ಡೌಟ್ ಪಡ್ತಾ ಇದ್ದಾರೆ. 

ಮುಗ್ದನಾ.. ಕಳ್ಳನಾ..? ಹನುಮಂತನ ಮೇಲೆ ಅನುಮಾನ..! ದೊಡ್ಮನೆಯಲ್ಲಿ ಸ್ಮಾರ್ಟ್​ಗೇಮ್ ಆಡ್ತಿದ್ದಾನಾ ಹನುಮಂತ..?
ಯೆಸ್ ಬಿಗ್ ಬಾಸ್ ಮನೆ ಎಲ್ಲರ ಮುಖವಾಡ ಕಳಚುತ್ತೆ ಅನ್ನೋ ಮಾತು ನಿಜವಾಗಿದೆ.. ಇಷ್ಟು ದಿನ ಹನುಮಂತನನ್ನ ಮುಗ್ದ ಮಾನವ ಅಂತ ಕರೀತಿದ್ದವರೆಲ್ಲಾ, ಈಗ ಆತನನ್ನ ಫೇಕ್ ವ್ಯಕ್ತಿ ಅಂತ ಟೀಕೆ ಮಾಡ್ತಾ ಇದ್ದಾರೆ. ಇವನು ಮಗ್ದ ಅಲ್ಲ ದೊಡ್ಡ ಕಳ್ಳ ಅಂತ ಟ್ರೋಲ್ ಮಾಡ್ತಾ ಇದ್ದಾರೆ.

ಈ ವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹನುಮಂತ ಎಂಟ್ರಿ ಕೊಟ್ಟಾಗ , ಅಯ್ಯೋ ಪಾಪ ಅಂತಿದ್ದವರೆಲ್ಲಾ ಈಗ ಭಲೇ ಹನುಮ ಅಂತಿದ್ದಾರೆ. ಹನುಮಂತ ಮುಗ್ದನಂತೆ ಕಾಣ್ತಾನೆ ಆದ್ರೆ ನಿಜಕ್ಕೂ ಇವನು ಮುಗ್ದನಲ್ಲ ಅಂತಿದ್ದಾರೆ.

ಬಿಗ್ ಬಾಸ್​​ ಮನೆಗೆ ಬಂದಿದ್ದ ಹನುಮಂತ ತನಗೆ ವೆಸ್ಟರ್ನ್ ಟಾಯ್ಲೆಟ್ ಗೊತ್ತಿಲ್ಲ. ಇದನ್ನ ಹೇಗೆ ಬಳದೋದು ಅಂತ ಮುಗ್ದ ಪ್ರಶ್ನೆ ಕೇಳಿದ್ದ. ಅರೇ ಈತ ಬೆಂಗಳೂರಿಗೆ ಬಂದು 6-7 ವರ್ಷಗಳಾಯ್ತು.. ದೊಡ್ಡ ದೊಡ್ಡ ಶೋಗಳಲ್ಲಿ ಭಾಗಿದ್ದಾನೆ. ಅನೇಕ ದೊಡ್ಡ ನಗರಗಳಿಗೆ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದಾನೆ. ಅಲ್ಲೆಲ್ಲೂ ಇವನು ಕಮೋಡ್​​ನ ನೋಡೇ ಇಲ್ವಾ ಅಂತ ಜನ ಕನ್ಪ್ಯೂಸ್ ಆಗಿದ್ದಾರೆ.

03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
04:36ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?
05:09ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ
Read more