ಹರ್ಷ, ಭುವಿ ಮದುವೆ ಆಗೋಕೆ ಬಿಡ್ತೀರಾ: ಕನ್ನಡತಿ ಅನುಭವಗಳನ್ನು ಬಿಚ್ಚಿಟ್ಟ 'ಸಾನಿಯ'

Jun 13, 2022, 9:35 PM IST

'ಕನ್ನಡತಿ' ಧಾರಾವಾಹಿಯಲ್ಲಿ ಸಾನಿಯ ಪಾತ್ರವನ್ನು ನಟಿ ಆರೋಹಿ ನಿರ್ವಹಿಸುತ್ತಿದ್ದು, ಈ ಹಿಂದೆ ಆರೋಹಿ 'ಹೂ ಮಳೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. 'ಹೂಮಳೆ' ಧಾರಾವಾಹಿಯಲ್ಲಿ ಆರೋಹಿ ಮಾಡಿದ ಪಾತ್ರಕ್ಕೂ 'ಕನ್ನಡತಿ' ಧಾರಾವಾಹಿಯಲ್ಲಿನ ಸಾನಿಯ ಪಾತ್ರಕ್ಕೂ ತುಂಬ ವ್ಯತ್ಯಾಸ ಇದೆ. ಈ ಕುರಿತು ಆರೋಹಿ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ. ಕನ್ನಡತಿ ಧಾರಾವಾಹಿಯ ವೈಶಿಷ್ಟ್ಯತೆ, ಈ ಧಾರಾವಾಹಿಯಲ್ಲಿನ ಸಂಭಾಷಣೆ, ಸಾನಿಯಾ ಪಾತ್ರದ ಬಗ್ಗೆ ನಟಿ ಆರೋಹಿ ಅವರು ಮಾತನಾಡಿದ್ದಾರೆ. ಹರ್ಷ, ಭುವಿ ಮದುವೆ ಆಗೋಕೆ ಬಿಡ್ತೀರಾ ಅಂತ ಸಾನಿಯ ಪಾತ್ರಧಾರಿಗೆ ಜನರು ಪ್ರಶ್ನೆ ಮಾಡುತ್ತಾರಂತೆ. ಮದುವೆ ಎಪಿಸೋಡ್ ಬಗ್ಗೆ ಆರೋಹಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡತಿ ಸೀರಿಯಲ್ ವೈಯಕ್ತಿಕವಾಗಿ ಆರೋಹಿಗೆ ಎಷ್ಟು ಜನಪ್ರಿಯತೆ ನೀಡಿದೆ? ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತಿದೆ? ಮುಂತಾದ ಪ್ರಶ್ನೆಗಳಿಗೆ ಆರೋಹಿ ಉತ್ತರ ನೀಡಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies