Sea Plane in Udupi: ಶಾಂಭವಿ ನದಿಯಲ್ಲಿ ಹಾರಾಟ, ಉತ್ಸಾಹಿ ತಂಡಕ್ಕೆ ಬೇಕು ಸರ್ಕಾರದ ಸಹಾಯ

Nov 29, 2021, 10:58 AM IST

ಉಡುಪಿ (ನ.29):  ಶುದ್ಧ ದೇಸೀಯ ತಂತ್ರಜ್ಞಾನದ (Technology) ಮೂಲಕ ಉಡುಪಿಯಲ್ಲಿ (udupi) ಸೀ ಪ್ಲೇನ್ ತಯಾರಿಸಲಾಗಿದೆ.  ಎರೋನಾಟಿಕಲ್ ಎಂಜಿನಿಯರಿಂಗ್  ವಿದ್ಯಾರ್ಥಿ ಪುಷ್ಟರಾಜ್ ಅಮೀನ್ ಅವರ ತಂಡ  7 ಲಕ್ಷ ರು ವೆಚ್ಚದಲ್ಲಿ ಸತತ 15 ವರ್ಷಗಳ ಪರಿಶ್ರಮದೊಂದಿಗೆ ಸೀ ಪ್ಲೇನ್ (sea plane ) ತಯಾರಿ ಮಾಡಿದ್ದಾರೆ. ಈ ಸೀ ಪ್ಲೇನ್‌ಗೆ ಅಂದಿನ ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ  5 ಲಕ್ಷ ರು. ಸಹಾಯಧನ ಮಂಜೂರು ಮಾಡಿದ್ದರು. 

Floating city: ಸಿದ್ಧವಾಗುತ್ತಿದೆ ಜಗತ್ತಿನ ಮೊದಲ ತೇಲುವ ನಗರ

ಆದರೆ ಸರ್ಕಾರ ಘೋಷಿಸಿದ್ದ ಹಣದಲ್ಲಿ ನಯಾಪೈಸೆಯು ಕೂಡ ಇವರಿಗೆ ಸಿಗಲಿಲ್ಲ. ಕಳೆದ ಭಾರಿ ಕರಾವಳಿಯಲ್ಲಿ ಅಬ್ಬರಿಸಿದ ತೌಖ್ತೆ ಚಂಡಮಾರುತಕ್ಕೆ ಸಿಲು ವಿಮಾನ ಚಿಂದಿಯಾಗಿತ್ತು. ಆದರೆ  ಮತ್ತೆ ಅದನ್ನು ಪುನರ್ ನಿರ್ಮಿಸಲಾಯಿತು.   ಬಳಿಕ ಹೆಜಮಾಡಿಯ ಶಾಂಭವಿ ನದಿಯಲ್ಲಿಯೂ  ಯಶಸ್ವಿಯಾಗಿ ಹಾರಾಟ ನಡೆಸಿತ್ತು.  ಸದ್ಯ ಅದರಲ್ಲಿ ಒಬ್ಬರು ಮಾತ್ರ ಕುಳಿತುಕೊಳ್ಳಬಹುದಾಗಿತ್ತು. ಮುಂದೆ ಹೆಚ್ಚಿನ ಜನ ಕುಳಿತುಕೊಳ್ಳುವಂತೆ ನಿರ್ಮಿಸುವ ಯೋಜನೆ ಇದೆ.