ಒಕೇ ಒಕ್ಕಡು ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಅವರು ಸೂಕ್ತ ಆಯ್ಕೆಯಾಗಿದ್ದರು. ಸಂದರ್ಶನ ದೃಶ್ಯದಲ್ಲಿ ರಘುವರನ್ ನಿಜವಾಗಿಯೂ ನಟ ಅರ್ಜುನ್ ಸರ್ಜಾಗೆ ಬೆವರಿಳಿಸಿದ್ದರಂತೆ. ತೆಲುಗಿನಲ್ಲಿ ನಾಗಾರ್ಜುನ ಜೊತೆ ಶಿವ, ಮಾಸ್ ಚಿತ್ರಗಳಲ್ಲಿ ರಘುವರನ್ ನಟಿಸಿದ್ದಾರೆ. ಚಿರಂಜೀವಿ ಜೊತೆ ಪಸಿವಾಡಿ ಪ್ರಾಣಂ ನಂತಹ ಹಿಟ್ ಚಿತ್ರದಲ್ಲಿ ನಟಿಸಿದ್ದಾರೆ.
ತಮ್ಮ ವಿಭಿನ್ನವಾದ ಸ್ಟೈಲ್ ಹಾಗೂ ಧ್ವನಿಯ ಏರಿಳಿತಗಳಿಂದ ತಮ್ಮದೇ ಹವಾ ಸೃಷ್ಟಿಸಿದ್ದ ರಘುವರನ್ ಆ ಕಾಲದಲ್ಲಿ ಬಹುಬೇಡಿಕೆಯ ವಿಲನ್ ಆಗಿದ್ದರು. ಆದರೆ ಕುಡಿತ ಅವರನ್ನು ಸಂಪೂರ್ಣ ಹಾಳು ಮಾಡಿತ್ತು. ಕುಡಿತದ ಕಾರಣದಿಂದ ಬಹು ಅಂಗಾಂಗ ವೈಫಲ್ಯಕ್ಕೊಳಗಾದ ಅವರು ಕೇವಲ 49ನೇ ವಯಸ್ಸಿನಲ್ಲಿ 2008ರ ಮಾರ್ಚ್ 19ರಂದು ಇಹಲೋಕ ತ್ಯಜಿಸಿದ್ದರು. 1996ರಲ್ಲಿ ರೋಹಿಣಿ ಎಂಬುವವರ ಜೊತೆ ಮದುವೆಯಾಗಿದ್ದ ರಘುವರನ್ ಅವರಿಗೆ ರಿಷಿವರನ್ ಎಂಬ ಪುತ್ರನಿದ್ದಾನೆ. 2004ರಲ್ಲೇ ರಘುವರನ್ ಹಾಗೂ ರೋಹಿಣೆ ದೂರಾಗಿದ್ದರು.