ವಾಟ್ಸಾಪ್‌ನಲ್ಲಿ ರೈತರು 'Hi' ಅಂದ್ರೆ ಸಾಕು, ಧಾನ್ಯ ಖರೀದಿ ಚಕಚಕ

First Published | Nov 18, 2024, 10:58 AM IST

ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ನೇತೃತ್ವದ ಟಿಡಿಪಿ ಜನಸೇನಾ ಸರ್ಕಾರವೂ  ರೈತರಿಗೆ ಧಾನ್ಯ ಮಾರಾಟ ಮಾಡೋಕೆ ವಾಟ್ಸಾಪ್‌ ಸೇವೆಯನ್ನು ಜಾರಿಗೆ ತಂದಿದೆ. ವಾಟ್ಸಾಪ್ ಮೂಲಕ ರೈತರು ಎಷ್ಟು ಧಾನ್ಯವನ್ನು ಬೇಕಾದರೂ ಸುಲಭವಾಗಿ ಮಾರಾಟ ಮಾಡಬಹುದಾಗಿದೆ.

ಆಂಧ್ರ ಸರ್ಕಾರ ಧಾನ್ಯ ಖರೀದಿ ಪ್ರಕ್ರಿಯೆಯನ್ನ ಸುಲಭಗೊಳಿಸಿದೆ. ರೈತರ ಸಮಯ ವ್ಯರ್ಥ ಆಗದ ಹಾಗೆ ವಾಟ್ಸಾಪ್ ಮೂಲಕ ಸೇವೆಗಳನ್ನ ನೀಡ್ತಿದ್ದೇವೆ ಅಂತ ಆಂಧ್ರದ ನಾಗರಿಕ ಪೂರೈಕೆ ಸಚಿವ ನಾದೆಂಡ್ಲ ಮನೋಹರ್ ಹೇಳಿದ್ದಾರೆ. 73373 59375 ನಂಬರ್‌ಗೆ ರೈತರು 'Hi' ಅಂತ ಮೆಸೇಜ್ ಕಳಿಸಿದ್ರೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ರೈತರ ಜೊತೆ ಮಾತಾಡುತ್ತೆ. ಈ ವಾಯ್ಸ್ ತೆಲುಗಲ್ಲಿ ಇರುತ್ತೆ, ಧಾನ್ಯ ಮಾರಾಟಕ್ಕೆ ಸಂಬಂಧಿಸಿದ ಎಲ್ಲಾ ಮಾರ್ಗದರ್ಶನವನ್ನು ಅದು  ನೀಡುತ್ತೆ.

ಈ ಬಗ್ಗೆ ವಿವರಗಳನ್ನು ಸಚಿವ ನಾದೆಂಡ್ಲ ಮನೋಹರ್ ನೀಡಿದ್ದಾರೆ. ಈ ಸೌಲಭ್ಯ ಬಳಸಿಕೊಳ್ಳಲು ಮೊದಲು ರೈತರು ತಮ್ಮ ಆಧಾರ್ ನಂಬರ್ ನಮೂದಿಸಿ, ಹೆಸರು ಖಚಿತಪಡಿಸಬೇಕು. ಖರೀದಿ ಕೇಂದ್ರದ ಹೆಸರು ಆಯ್ಕೆ ಮಾಡಿಕೊಳ್ಳಬೇಕು. ಮೂರು ದಿನಾಂಕಗಳ ಆಯ್ಕೆ ಇರುತ್ತೆ, ಅದ್ರಲ್ಲಿ ಒಂದನ್ನು ಆಯ್ಕೆ ಮಾಡ್ಕೊಬೇಕು. ಜೊತೆಗೆ ಸಮಯ ಕೂಡ ಆಯ್ಕೆ ಮಾಡ್ಕೊಬೇಕು. ಹಾಗೆಯೇ ಯಾವ ರೀತಿಯ ಧಾನ್ಯ ಮಾರಾಟ ಮಾಡ್ತಿದ್ದಾರೆ. ಎಷ್ಟು ಚೀಲ ಧಾನ್ಯ ಮಾರಾಟ ಮಾಡ್ತಿದ್ದಾರೆ ಅಂತ ತಿಳಿಸಬೇಕು. ಇದಾದ ನಂತರ ಸ್ಲಾಟ್ ಬುಕ್ ಆಗುತ್ತೆ. ಅದಾದ ಕೂಡಲೇ ಕೂಪನ್ ಕೋಡ್ ಬರುತ್ತೆ.

Latest Videos


ಹೀಗೆ ರೈತರು ಸುಲಭವಾಗಿ ಧಾನ್ಯ ಮಾರಾಟ ಮಾಡಬಹುದು. ಯಾವುದೇ ತೊಂದರೆ ಇರಲ್ಲ. ಪ್ರತಿ ಆಯ್ಕೆಯನ್ನು  ಕೂಡ ಒಂದೇ ಟಚ್‌ನಲ್ಲಿ ಮಾಡಬಹುದು. ಹೀಗಾಗಿ ರೈತರು ಇನ್ಮೇಲೆ ಖರೀದಿ ಕೇಂದ್ರಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ. 

ಸುಲಭ ರೈತ ಸೇವೆ

ತಂತ್ರಜ್ಞಾನ ಬಳಸಿ ಸುಲಭ ವ್ಯಾಪಾರದ ಮಾದರಿಯಲ್ಲಿ ಸೇವೆ ನೀಡ್ತಿದೆ ನಮ್ಮ ಸರ್ಕಾರ. ರೈತರಿಗೆ ಅನುಕೂಲ ಆಗುವ ಸರ್ಕಾರ ಇದು. ತಂತ್ರಜ್ಞಾನ ಬಳಸಿ ಧಾನ್ಯ ಖರೀದಿ ಸುಲಭಗೊಳಿಸಿದ್ದೀವಿ. ಸುಲಭ ರೈತ ಸೇವೆಯಿಂದ ರೈತರಿಗೆ ಅನುಕೂಲ" ಅಂತ ಸಚಿವ ಮನೋಹರ್ ಹೇಳಿದ್ದಾರೆ.

ಪ್ರತಿ ಬಾರಿಯೂ ಬೆಳೆ ಬೆಳೆದಾಗಲೆಲ್ಲಾ ರೈತರು ಸರಿಯಾದ ಬೆಲೆ ಸಿಗದೇ ಮಾರಲು ಸಾಧ್ಯವಾಗದೇ ಖರೀದಿ ಕೇಂದ್ರವಿಲ್ಲದೇ ಎಲ್ಲ ರೈತರು ಸಂಕಷ್ಟಪಡುತ್ತಾರೆ. ಆದರೆ ಆಂಧ್ರ ಪ್ರದೇಶ ಜಾರಿಗೆ ತಂದ ಈ ಯೋಜನೆ ಯಶಸ್ವಿಯಾದಲ್ಲಿ ಕರ್ನಾಟಕ ರಾಜ್ಯದಲ್ಲೂ ಇಂತಹ ಯೋಜನೆಯ ಮೂಲಕ ರೈತರಿಗೆ ಸರ್ಕಾರ ನೆರವಾಗಬೇಕಿದೆ. ಇದರಿಂದ ರೈತರಿಗೆ ಸರಿಯಾದ ಬೆಲೆಯೂ ಸಿಗವುದು ಹಾಗೂ ಖರೀದಿ ಕೇಂದ್ರದಲ್ಲಿ ಗಂಟೆಗಟ್ಟಲೇ ಕಾದು ಸಮಯ ವ್ಯರ್ಥ ಮಾಡುವ ಅಗತ್ಯವೂ ಇರುವುದಿಲ್ಲ, 

click me!