ಕೊರೋನಾ ಎಕ್ಸ್‌ಪ್ರೆಸ್: ಕಬಿನಿ ಹಿನ್ನೀರಿನ ಬಳಿ ಕಾರ್ ವ್ಹೀಲಿಂಗ್..!

Jun 3, 2020, 6:17 PM IST

ಮೈಸೂರು(ಜೂ.03): ಕಬಿನಿ ಹಿನ್ನೀರಿನ ಪ್ರದೇಶವಿದೀಗ ಮೋಜು-ಮಸ್ತಿಯ ತಾಣವಾಗಿ ಬದಲಾಗಿದೆ. ಸದ್ಯ ನಿಷೇಧಿತ ಪ್ರದೇಶವಾಗಿರುವ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಪಡ್ಡೆ ಹುಡುಗರು ಕಾರ್ ವ್ಹೀಲಿಂಗ್ ನಡೆಸಿ ಹುಚ್ಚಾಟ ನಡೆಸಿದ್ದಾರೆ.

ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಪುಂಡು ಹುಡುಗರ ಕಾರ್ ಸ್ಟಂಟ್‌ಗೆ ಪ್ರಾಣಿ ಪಕ್ಷಿಗಳು ಹೈರಾಣಾಗಿದ್ದು, ಯುವಕರ ಕಾರ್ ವ್ಹೀಲಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನು ಸೀಲ್‌ಡೌನ್ ಉಲ್ಲಂಘಿಸಿ ಹೊರಬಂದಿರುವವರನ್ನು ಪ್ರಶ್ನಿಸಲು ಹೋಗಿ ಗಲಾಟೆಗೆ ಎಡೆ ಮಾಡಿಕೊಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಜುಲೈನಲ್ಲಿ ಶಾಲೆ ಪುನರಾರಂಭಕ್ಕೆ ಪೋಷಕರ ವಿರೋಧ..!

ಸೀಲ್‌ಡೌನ್ ಗ್ರಾಮದವರು ಪಕ್ಕದ ಊರಿಗೆ ಹೋಗಿ ಗಲಾಟೆ ಮಾಡಿದ್ದಾರೆ. ಹಕ್ಕಿಪಿಕ್ಕಿಗಳ ರಾದ್ಧಾಂತಕ್ಕೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡವರೆಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಷ್ಟು ಕೊರೋನಾ ಸಂಬಂಧಿತ ಸುದ್ದಿಗಳು ಇಲ್ಲಿವೆ ನೋಡಿ.