ಮೈಸೂರಿನ ಮೋದಿ ಸಭೆಯಲ್ಲಿ ಸುಮಲತಾರನ್ನು ನಾನೇ ಕರೆದಿದ್ದೇನೆ, ಆರ್.ಅಶೋಕ್ ಅವರೇ ಸಾಕ್ಷಿ: ಎಚ್‌ಡಿಕೆ

First Published Apr 27, 2024, 5:23 AM IST

ಮೈಸೂರಿಗೆ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಬಂದ ಸಮಯದಲ್ಲೇ ಸುಮಲತಾ ಅವರನ್ನು ನನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೆ ಎಂದು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಮದ್ದೂರು (ಏ.27): ಮೈಸೂರಿಗೆ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಬಂದ ಸಮಯದಲ್ಲೇ ಸುಮಲತಾ ಅವರನ್ನು ನನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೆ ಎಂದು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
 

ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮಕ್ಕೆ ಆಗಮಿಸಿದ್ದ ಅವರು ಮತಗಟ್ಟೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನ ಮೋದಿಯವರ ಸಭೆಯಲ್ಲಿ ನಾನೇ ಕರೆದಿದ್ದೇನೆ. ಆರ್.ಅಶೋಕ್ ಕೂಡ ನಮ್ಮ ಜೊತೆಯಲ್ಲೇ ಇದ್ದರು. 

ವೇದಿಕೆ ಮೇಲೆಯೇ ಎರಡು ದಿನ ಬಿಡುವು ಮಾಡಿಕೊಂಡು ಬನ್ನಿ ಎಂದು ಸುಮಲತಾ ಅವರನ್ನು ಕರೆದಿದ್ದೆ. ಈಗ ಅದನ್ನೆಲ್ಲ ಚರ್ಚೆ ಮಾಡಿ ಪ್ರಯೋಜನ ಏನು. ನಾನು ಯಾವ ಕಾರಣಕ್ಕೂ, ಯಾರಿಗೂ ತೊಂದರೆ ಕೊಡಲು ಹೋಗುವುದಿಲ್ಲ ಎಂದು ನಯವಾಗಿಯೇ ಉತ್ತರಿಸಿದರು.

ಜನ ಪ್ರೀತಿಯಿಂದ ಕರೆದಿದ್ದಾರೆ, ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದವರು ನನಗೆ ಸಹಕರಿಸಿದ್ದಾರೆ. ಯಾರ ಬಗ್ಗೆಯೂ ನಾನು ಮಾತಾಡಲು ಹೋಗುವುದಿಲ್ಲ ಎಂದರು.

ಪ್ರಣಾಳಿಕೆ ಕೇವಲ ಡೂಪ್‌ ಅಷ್ಟೇ: ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್‌ನವರು ನೀಡುತ್ತಿರುವ ಸುಳ್ಳು ಭರವಸೆಗಳನ್ನು ನಂಬಬೇಡಿ ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್‌ನವರು ಜಿಲ್ಲೆಗೊಂದು, ತಾಲೂಕಿಗೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅವೆಲ್ಲವೂ ಡೂಪ್‌ ಅಷ್ಟೇ. ಕೇಂದ್ರ ಸರ್ಕಾರದೊಂದಿಗೆ ಜಗಳ ಮಾಡಿಕೊಂಡಿರುವ ಇವರು, ಪ್ರಣಾಳಿಕೆಯಲ್ಲಿರುವ ಯೋಜನೆಗಳ ಜಾರಿಗೆ ಹಣವನ್ನು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು.

click me!