ಬಿಜೆಪಿಯಲ್ಲಿ ಎಲ್ಲರಿಗೂ ಒಂದೇ ನ್ಯಾಯ: ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

By Kannadaprabha News  |  First Published Apr 27, 2024, 5:38 AM IST

ದೇಶದಲ್ಲಿ ಈ ಹಿಂದೆ ನಡೆಯುತ್ತಿರುವ ಜಾತಿ ಹಾಗೂ ಒಳ ಜಗಳದ ಸಂಸ್ಕೃತಿಯನ್ನು ನರೇಂದ್ರ ಮೋದಿ ಅಳಸಿ ವಿಕಾಸವಾದ ರಾಜಕೀಯ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನುಡಿದರು. 


ಹುಮನಾಬಾದ್ (ಏ.27): ದೇಶದಲ್ಲಿ ಈ ಹಿಂದೆ ನಡೆಯುತ್ತಿರುವ ಜಾತಿ ಹಾಗೂ ಒಳ ಜಗಳದ ಸಂಸ್ಕೃತಿಯನ್ನು ನರೇಂದ್ರ ಮೋದಿ ಅಳಸಿ ವಿಕಾಸವಾದ ರಾಜಕೀಯ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನುಡಿದರು. ನಗರದ ಥೇರ್‌ ಮೈದಾನದಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ಜೆಡಿಎಸ್ ಅಲೈಯನ್ಸ್ ದಿಂದ ಆಯೋಜಿಸಿದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರಿಗೂ ಒಂದೇ ನ್ಯಾಯ, ಒಂದೇ ಸೌಲಭ್ಯ ನೀಡಲಾಗುತ್ತಿದೆ. ಮೋದಿಯವರು ಹತ್ತು ವರ್ಷದಲ್ಲಿ ಹೊಸ ಯೋಜನೆಯೊಂದಿಗೆ ಮುಂದೆ ಸಾಗಿಸುತ್ತಿದ್ದಾರೆ. ಇಡಿ ವಿಶ್ವದ ಆರ್ಥಿಕ ವ್ಯವಸ್ಥೆ ಕುಸಿದರೆ ನಮ್ಮ ಆರ್ಥಿಕ ಪರಿಸ್ಥಿತಿ 5 ನೇ ಸ್ಥಾನದಲ್ಲಿದೆ. 

ಮೂರನೇ ಬಾರಿ ಮೋದಿ ಆಯ್ಕೆಯಾದರೆ ಮೂರನೇ ಆರ್ಥಿಕ ವ್ಯವಸ್ಥೆಗೆ ನಾವು ಬರಲಿದ್ದೇವೆ. ಅಟೋ ಮೋಬೈಲ್‌ನಲ್ಲಿ 3ನೇ ಸ್ಥಾನ, ಔಷಧಿಯಲ್ಲಿ 2ನೇ ಸ್ಥಾನ, ಪೆಟ್ರೋಲ್, ಸ್ಟೀಲ್ ಎರಡನೇ ಸ್ಥಾನದಲ್ಲಿದೆ. ಒಟ್ಟಾರೆ ದೇಶದಲ್ಲಿ ಮೇಡಿನ್ ಇಂಡಿಯಾ ಇದೀಗ ಬಂದಿದೆ. ಆಪಲ್ ಅಂತಹ ಮೊಬೈಲ್ ಭಾರತದಲ್ಲಿ ತಯಾರಿಸಲಾಗುತ್ತಿದೆ ಎಂದರು. ಕಾಂಗ್ರೆಸ್ ಸಮಯದಲ್ಲಿ ಪಾಕಿಸ್ಥಾನದಿಂದ ಗುಂಡು ಹಾರಿಸಿದರು. ನಮ್ಮ ಸೈನಿಕರಿಗೆ ಆದೇಶ ಸಿಗುತ್ತಿರಲಿಲ್ಲಾ. ಇದೀಗ ಪ್ರಧಾನಿ ಮೋದಿ ಪಾಕಿಸ್ಥಾನ ಗುಂಡು ಹಾರಿಸಿದರೆ ತಕ್ಷಣ ಉತ್ತರ ನೀಡುವಂತೆ ಸೈನಿಕರಿಗೆ ಸ್ವಾತಂತ್ರ್ಯತೆ ನೀಡಿದೆ. ಗಡಿ ಭಾಗದಲ್ಲಿ ಶೇ.30ರಷ್ಟು ರಸ್ತೆಗಳು ನಿರ್ಮಿಸಲಾಗಿದೆ. 

Tap to resize

Latest Videos

ಐಟಿಯಿಂದ ಡಿಕೆಸು ಚಾಲಕನ ಮಗ-ಸೊಸೆಗೆ ಕಿರುಕುಳ: ಡಿ.ಕೆ.ಶಿವಕುಮಾರ್‌

ಮಹಿಳೆಯರಿಗೆ 30 ವರ್ಷದಿಂದ ನಾರಿ‌ ಶಕ್ತಿ ವಂದನ ಯೋಜನೆ ಪ್ರಾರಂಭಿಸುವ ವಿಕಾಸವಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಧಾನ ಮಂತ್ರಿ ಸಡಕ್ ಯೋಜನೆ, ಇಂಟರ್‌ನೆಟ್ ಸೇರಿದಂತೆ ಗ್ರಾಮೀಣ ಭಾಗಕ್ಕೆ ಮೂರರಿಂದ ನಾಲ್ಕು ಕೋಟಿ‌ ಅನುದಾನ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆಯಲ್ಲಿ 4 ಕೋಟಿ ಮನೆಗಳು ನಿರ್ಮಾಣ ಮಾಡಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ. ಗರಿಬ್‌ ಕಲ್ಯಾಣ ಯೋಜನೆ ಮೂಲಕ ಅಕ್ಕಿ, ಗೋಧಿ, ಕಿಸಾನ ಸನ್ಮಾನ ಯೋಜನೆ ಅಡಿಯಲ್ಲಿ ಬೀದರ್‌ ಜಿಲ್ಲೆಯ ಎರಡುವರೆ ರೈತರ ಖಾತೆಗೆ ಹಣ ನೇರ ಜಮಾವಣೆ ಮಾಡಲಾಗುತ್ತಿದೆ.

ಮೂರು ಕೋಟಿ ಮಹಿಳೆಯರಿಗೆ ಲಕ್ಷಾಧಿಪತಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆರೋಗ್ಯ ದೃಷ್ಟಿಯಿಂದ 55 ಕೋಟಿ ಅನಾರೋಗ್ಯ ಬಡ ಜನರಿಗೆ 5 ಲಕ್ಷ ದ ಯೋಜನೆ ಎಲ್ಲಾ ಜನಾಂಗದವರಿಗೆ ಪ್ರಧಾನ ಮಂತ್ರಿ ಯೋಜನೆ ಮೂಲಕ ನೀಡಲಾಗಿದೆ ಎಂದರು. ಸಿದ್ದರಾಮಯ್ಯ ಸರ್ಕಾರ ಕರ್ನಾಟಕ ಅನುದಾನದಲ್ಲಿ ತೆರಿಗೆಯನ್ನು ನಾಲ್ಕು ಪ್ರತಿಶತ ಹೆಚ್ಚಿಸಿದೆ. ಹುಬ್ಬಳ್ಳಿ ಘಟನೆ ಅಂತಹ ಘಟನೆ ನಡೆಯಬೇಕಾ? ಪಿಎಫ್‌ಐ, ಎಸ್‌ಡಿಪಿಐ ಅಂತಹ‌ ಸಂಘಟನೆ ಇಲ್ಲಿ ಬೇಕಾ? ಎಂದು ಕಾಂಗ್ರೆಸ್‌ ವಿರುದ್ಧ ಗುಡುಗಿದರು.

ಹುಮನಾಬಾದ್‌ ಶಾಸಕ ಡಾ.‌ಸಿದ್ದಲಿಂಗಪ್ಪಾ ಪಾಟೀಲ್ ಮಾತನಾಡಿ, ಮೇ 7ರ ಚುನಾವಣೆ ಈ ಬಾರಿ‌ ಮಹತ್ವದ ಚುನಾವಣೆ. ರಾಷ್ಟ್ರ ಹಾಗೂ ನಮ್ಮ ಮಕ್ಕಳ ಭವಿಷ್ಯದ ಚುನಾವಣೆ ಇದಾಗಿದೆ. ಇತರೆ ಪಕ್ಷದವರು ಕೇವಲ ಆಶ್ವಾಸನೆ ನೀಡಿ ದಿಕ್ಕು ತಪ್ಪಿಸುವ ಕೆಲಸ‌ ಮಾಡುತ್ತಾರೆ. ಅಂತವರ ಕಡೆ ಗಮನಿಸಬೇಡಿ ಎಂದರು. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, ಮೂರು ಲಕ್ಷ ಅಂತರದಿಂದ ಪಕ್ಷ ಗೆಲ್ಲಿಸಬೇಕೆಂದು ಮತಯಾಚನೆ ಮಾಡಿದರು. ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರ ಮಾತನಾಡಿ, ರಾಜ್ಯದಲ್ಲಿನ 28 ಸ್ಥಾನಗಳ ಗೆಲವು ಖಚಿತವಾಗಿದೆ ಎಂದರು. ಹುಮನಾಬಾದ ಶಾಸಕ ಡಾ.‌ಸಿದ್ದಲಿಂಗಪ್ಪಾ ಪಾಟೀಲ್ ಮಾತನಾಡಿದರು.

ಒಬಿಸಿ ಮೀಸಲು ಕಸಿಯಲು ಬಿಡಲ್ಲ: ಪ್ರಧಾನಿ ಮೋದಿ ಗ್ಯಾರಂಟಿ

ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಸವಕಲ್ಯಾಣ ಶಾಸಕ ಶಾರಣು ಸಲಗರ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಎಂಜಿ ಮೂಳೆ, ಮಲ್ಲಿಕಾರ್ಜುನ ಖೂಬಾ, ವಿಭಾಗೀಯ ಪ್ರಮುಖ ಈಶ್ವರ ಸಿಂಗ್ ಠಾಕೂರ್, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ, ಬಸವರಾಜ ಆರ್ಯ, ಶಿವಾನಂದ ಮಂಠಾಳಕರ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶಕುಮಾರ ಪಾಟೀಲ್, ಜೈಯಕುಮಾರ ಕಾಂಗೆ, ಸುನಿಲ್ (ಡಿ.ಎನ್) ಪತ್ರಿ, ಮಲ್ಲಿಕಾರ್ಜುನ ಕುಂಬಾರ, ಅನೀಲ್ ಪರ್ಗಿ್ ಸೇರಿದಂತೆ ಅನೇಕರಿದ್ದರು.

click me!