Jun 22, 2020, 4:05 PM IST
ಬೆಂಗಳೂರು (ಜೂ. 22): ಕೊರೊನಾ ನಿರ್ಲಕ್ಷ್ಯಕ್ಕೆ ವಿಕ್ಟೋರಿಯಾ ಆಸ್ಪತ್ರೆ ಕಾರಣವಾಗಿದೆ. ಕೊರೊನಾ ಬಂದ್ರೂ ವಿಕ್ಟೋರಿಯಾ ಆಸ್ಪತ್ರೆ ಡೋಂಟ್ ಕೇರ್ ಎನ್ನುತ್ತಿದೆ. ಇಲ್ಲಿ ಕೆಲಸ ಮಾಡುವ ಸ್ಟಾಫ್ ನರ್ಸ್ಗೂ ಕೊರೊನಾ ಸೋಂಕು ತಗುಲಿದೆ. ರಿಪೋರ್ಟ್ ಬಂದ ದಿನವೂ ಕರ್ತವ್ಯಕ್ಕೆ ನರ್ಸ್ ಹಾಜರಾಗಿದ್ದಾರೆ.
ಹೆಚ್ಚೆಚ್ಚು ಕೊರೋನಾ ಟೆಸ್ಟ್ ಮಾಡಬೇಕು: ಡಾ. ಸಿ.ಎನ್. ಮಂಜುನಾಥ್
ಸ್ಟಾಫ್ ನರ್ಸ್ ಒಬ್ಬರ ಸಹೋದರರಿಗೆ ಕೊರೊನಾ ಬಂದಿತ್ತು. ಡೆಂಟಲ್ ಡೀನ್ ಡಾ. ಗಿರೀಶ್ಗೆ ಸ್ಟಾಫ್ ನರ್ಸ್ ಮಾಹಿತಿ ಕೊಟ್ಟಿದ್ದರೂ ಕರ್ತವ್ಯಕ್ಕೆ ಹಾಜರಾಗಬೇಕೆಂದು ಟಾರ್ಚರ್ ಕೊಟ್ಟಿದ್ದರು ಎನ್ನಲಾಗಿದೆ. ಇದೀಗ ಡೆಂಟಲ್ ಕಾಲೇಜಿನ 150 ಮಂದಿಗೆ ಆತಂಕ ಎದುರಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!