Russia-Ukraine Crisis: ಇಂಡಿಯನ್ ಎಂಬಸಿ, ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳು

Feb 27, 2022, 2:44 PM IST

ಬೆಂಗಳೂರು (ಫೆ. 27): ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಏರ್‌ಲಿಫ್ಟ್ ಆರಂಭಿಸಿದೆ. ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ. ಬಂದ ವಿದ್ಯಾರ್ಥಿಗಳನ್ನು ಸಚಿವ ಆರ್ ಅಶೋಕ್ ಬರಮಾಡಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡಾ ವಾಪಸ್ಸಾಸ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸುರಕ್ಷತೆ ಬಗ್ಗೆ ವಿಚಾರಿಸಿದರು. ಇದುವರೆಗೂ 709 ವಿದ್ಯಾರ್ಥಿಗಳು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. 

Russia-Ukraine Crisis: ವಾಪಸ್ಸಾದ ವಿದ್ಯಾರ್ಥಿಗಳನ್ನು ಭೇಟಿಯಾದ ಪ್ರಹ್ಲಾದ್ ಜೋಶಿ

ಭಾರತಕ್ಕೆ ವಾಪಸ್ಸಾದ ವಿದ್ಯಾರ್ಥಿನಿ ಇಂಚರಾ, ಎಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 'ನಮ್ಮನ್ನು ಸುರಕ್ಷಿತವಾಗಿ ಕರೆತಂದ ಇಂಡಿಯನ್ ಎಂಬಸಿ, ಕೇಂದ್ರ, ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು. ನಾವಿದ್ದ ಜಾಗ ಪೀಸ್‌ಫುಲ್ ಆಗಿತ್ತು. ನಮಗೆ ಯುದ್ಧ ಆಗ್ತಾ ಇತ್ತು ಎನ್ನುವ ಫೀಲ್ ಬರಲಿಲ್ಲ. ನಮಗೆ ಇಂಡಿಯನ್ ಎಂಬಸಿಯಿಂದ ನಮಗೆ ಮೆಸೇಜ್ ಬಂತು. ನಾವು ಕೂಡಲೇ ಹೊರಟು ಬಂದೆವು' ಎಂದಿದ್ದಾರೆ.