ಗರ್ಬಾವಸ್ಥೆಯ ಕೊನೆ ತಿಂಗಳಲ್ಲಿ ನೇಹಾ ಗೌಡ…. ನವದುರ್ಗೆಯರ ಆಶೀರ್ವಾದ ಸಿಗಲೆಂದು ಹಾರೈಸಿದ ಅಭಿಮಾನಿಗಳು

Published : Oct 03, 2024, 02:02 PM ISTUpdated : Oct 03, 2024, 02:10 PM IST

ಕಿರುತೆರೆ ನಟಿ ನೇಹಾ ಗೌಡ ಇದೀಗ ಗರ್ಭಾವಸ್ಥೆಯ ಕೊನೆಯ ತಿಂಗಳು ತಲುಪಿದ್ದು, ಅಂದ್ರೆ ಒಂಭತ್ತನೇ ತಿಂಗಳಿಗೆ ಕಾಲಿಟ್ಟಿದ್ದು, ತಮ್ಮ ತಾಯ್ತನವನ್ನು ಸಂಭ್ರಮಿಸಲು ಹೊಸದಾಗಿ ಫೋಟೊ ಶೂಟ್ ಮಾಡಿಸಿದ್ದಾರೆ.   

PREV
15
ಗರ್ಬಾವಸ್ಥೆಯ ಕೊನೆ ತಿಂಗಳಲ್ಲಿ ನೇಹಾ ಗೌಡ…. ನವದುರ್ಗೆಯರ ಆಶೀರ್ವಾದ ಸಿಗಲೆಂದು ಹಾರೈಸಿದ ಅಭಿಮಾನಿಗಳು

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕನ್ನಡ ಕಿರುತೆರೆಯ ಮುದ್ದಾದ ಜೋಡಿಗಳಾದ ನೇಹಾ ಗೌಡ (Neha Gowda) ಮತ್ತು ಚಂದನ್ ಗೌಡ, ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿಕೊಂಡು, ತಮ್ಮ ತಾಯ್ತನವನ್ನು ಸಂಭ್ರಮಿಸಿದ್ದರು. ಇದರ ಜೊತೆಗೆ ನೇಹಾ ಗೌಡ ತಮ್ಮ ಪ್ರೆಗ್ನೆನ್ಸಿಯ ಪ್ರತಿಯೊಂದು ಸಂದರ್ಭಗಳನ್ನು ಫೋಟೊಶೂಟ್ ಮಾಡಿ ತಮ್ಮ ಸಂತಸವನ್ನ ಇಮ್ಮಡಿಗೊಳಿಸುತ್ತಿದ್ದಾರೆ. 
 

25

ಪ್ರೆಗ್ನೆನ್ಸಿಯಲ್ಲಿ ತಮಗೇನು ಇಷ್ಟವಾಗುತ್ತೆ ಅದನ್ನ ಮಾಡುವ ಮೂಲಕ ತಮ್ಮ ಗರ್ಭಾವಸ್ಥೆಯ ಪ್ರತಿ ಕ್ಷಣಗಳನ್ನು ಎಂಜಾಯ್ ಮಾಡ್ತಾ ಪಾಸಿಟಿವ್ ಆಗಿರುವ ನೇಹಾ ಗೌಡ, ಇತ್ತೀಚಿನದಿನಗಳಲ್ಲಿ ಹೆಚ್ಚಾಗಿ ವಿವಿಧ ರೀತಿಯಲ್ಲಿ ಮೆಟರ್ನಿಟಿ ಫೋಟೊ ಶೂಟ್ ಗಳನ್ನು (Maternity photoshoot) ಮಾಡಿ, ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೊಗಳನ್ನು ಅಭಿಮಾನಿಗಳು ಸಹ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. 
 

35

ನೇಹಾ ಗೌಡ ಇನ್’ಸ್ಟಾಗ್ರಾಂ ಹ್ಯಾಂಡಲ್ ತುಂಬೆಲ್ಲಾ ಪ್ರೆಗ್ನೆನ್ಸಿ ಫೊಟೊಗಳೇ ತುಂಬಿಕೊಂಡಿವೆ. ಪ್ರೆಗ್ನೆನ್ಸಿ ಅನೌನ್ಸ್ಮೆಂಟ್ ಶೂಟ್, ಪಿಂಕ್ ಸೀರೆ, ಹಳದಿ ಸೀರೆ, ಹಸಿರು ಸೀರೆ, ಕಪ್ಪು ಬಣ್ಣದ ಡ್ರೆಸ್ ಹೀಗೆ ಹಲವಾರು ರೀತಿಯಲ್ಲಿ ಫೋಟೊಸ್ ತೆಗೆಸಿಕೊಂಡಿದ್ದಾರೆ. ಅದರಲ್ಲೂ ಇತ್ತೀಚೆಗೆ ಶೂಟ್ ಮಾಡಿಸಿದಂತಹ ಬಿಳಿ ಸೀರೆಯುಟ್ಟು, ಕೆರೆ ಬಳಿ ಕುಳಿತ ಶಾಕುಂತಲೆಯ ಕಾನ್ಸೆಪ್ಟ್ ನ ಫೋಟೊ ಶೂಟ್ ಅದ್ಭುತವಾಗಿ ಮೂಡಿ ಬಂದಿತ್ತು. ಇದೀಗ ಮತ್ತೊಂದು ಹೊಸ ಫೋಟೊ ಶೂಟ್ ಮೂಲಕ ಕಾಣಿಸಿಕೊಂಡಿದ್ದಾರೆ ಕಿರುತೆರೆಯ ಮುದ್ದು ಗೊಂಬೆ. 
 

45

ನೇರಳೆ ಬಣ್ಣದ ಟ್ರಾನ್ಸ್ಪರೆಂಟ್ ಸೀರೆಯುಟ್ಟು ಬೇಬಿ ಬಂಪ್ ಹೈಲೈಟ್ ಆಗುವಂತೆ ನಟಿ ಫೋಟೊ ತೆಗೆಸಿಕೊಂಡಿದ್ದು, ಕೊನೆಯ ತಿಂಗಳು, ತುಂಬಾನೆ ಎಕ್ಸೈಟ್ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆ, (Last month and I’m super excited!!) ಅಂದ್ರೆ ಇದೀಗ ನೇಹಾ ಗೌಡ ಒಂಭತ್ತನೇ ತಿಂಗಳ ಗರ್ಭಿಣಿಯಾಗಿದ್ದು, ತಮ್ಮ ಗರ್ಭಾವಸ್ಥೆಯ ಕೊನೆಯ ತಿಂಗಳನ್ನು ಈ ರೀತಿಯಾಗಿ ಫೋಟೊಶೂಟ್ ಮಾಡಿಸಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ. 
 

55

ನೇಹಾ ಗೌಡ ನೇರಳೆ ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದು, ಪ್ರೆಗ್ನೆನ್ಸಿ ಗ್ಲೋ ಮುಖದಲ್ಲಿ ಎದ್ದು ಕಾಣುತ್ತಿದೆ. ನೇಹಾ ಮುಖದಲ್ಲಿ ಹೆಚ್ಚಿದ ಕಳೆಯನ್ನು ನೋಡಿ ಜನ ನಿಮಗೆ ಹೆಣ್ಣು ಮಗು ಆಗೋದು ಗ್ಯಾರಂಟಿ ಎನ್ನುತ್ತಿದ್ದಾರೆ. ನವದುರ್ಗೆಯರ ಆಶೀರ್ವಾದ ಹಾಗೂ ದುರ್ಗೆಯರ ಎನರ್ಜಿ, ನಿಮಗೂ ಹಾಗೂ ಹುಟ್ಟಲಿರುವ ಮಗುವಿಗೂ ಸಿಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಆರೋಗ್ಯಯುತ ಹಾಗೆ ಸುರಕ್ಷಿತವಾಗಿ ಹೆರಿಗೆ ಆಗಲಿ ಎಂದು ಹರಸಿದ್ದಾರೆ. 
 

Read more Photos on
click me!

Recommended Stories