ಜಯಾ ಯಾರ ಜೊತೆ ಶೂಟಿಂಗ್ ಹೋದ್ರೆ ಉರಿದುಕೊಳ್ತಿದ್ರು ಅಮಿತಾಬ್? ಅಮೀರ್ ಖಾನ್ ಪ್ರಶ್ನೆಗೆ ಬಿಗ್ ಬಿ ಶಾಕ್

Published : Oct 03, 2024, 02:36 PM IST
ಜಯಾ ಯಾರ ಜೊತೆ ಶೂಟಿಂಗ್ ಹೋದ್ರೆ ಉರಿದುಕೊಳ್ತಿದ್ರು ಅಮಿತಾಬ್? ಅಮೀರ್ ಖಾನ್ ಪ್ರಶ್ನೆಗೆ ಬಿಗ್ ಬಿ ಶಾಕ್

ಸಾರಾಂಶ

ಬಾಲಿವುಡ್ ನ ಪ್ರಸಿದ್ಧ ಹಾಗೂ ಹಿರಿಯ ಜೋಡಿ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್. ಇವರ ಪ್ರೀತಿ, ಹೊಂದಾಣಿಕೆ ಬಗ್ಗೆ ತಿಳಿಯಲು  ಫ್ಯಾನ್ಸ್ ಯಾವಾಗ್ಲೂ ಆಸಕ್ತರಾಗಿರ್ತಾರೆ. ಈಗ ಅಮೀರ್ ಖಾನ್   ಸೂಪರ್ ಪ್ರಶ್ನಗೆ ಬಿಗ್ ಬಿ ಕನ್ಫ್ಯೂಸ್ ಆಗಿದ್ದಾರೆರ.  

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ (Bollywood Big B Amitabh Bachchan,) ಆಕ್ಟೀವ್ ನಟರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಸಿನಿಮಾ ಜೊತೆ  ಕೌನ್ ಬನೇಗಾ ಕರೋಡ್ಪತಿ (Kaun Banega Crorepati) 16 ರನ್ನು ಯಶಸ್ವಿಯಾಗಿ ನಡೆಸಿಕೊಂಡು ಬರ್ತಿರುವ ಅಮಿತಾಬ್ ಗೆ 82 ವರ್ಷವಾಗ್ತಿದೆ ಎನ್ನಲು ಸಾಧ್ಯವೇ ಇಲ್ಲ. ಅಮಿತಾಬ್ ಬಚ್ಚನ್ ಮಾತು, ಅವರ ತಮಾಷೆ  ರಿಯಾಕ್ಷನ್ ನೋಡಲು ಸದಾ ಫ್ಯಾನ್ಸ್ ಕಾತುರರಾಗಿರ್ತಾರೆ.  ಕೌನ್ ಬನೇಗಾ ಕರೋಡ್ಪತಿಯಲ್ಲಿ ಅಮಿತಾಬ್ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಅವಕಾಶ ಸಿಗುತ್ತೆ. ಈ ಬಾರಿ ಆಸಕ್ತಿಕರ ಪ್ರಶ್ನೆಗೆ ಉತ್ತರ ಸಿಗಲಿದೆ. ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮಿರ್ ಖಾನ್ (Bollywood perfectionist Aamir Khan) ಕೌನ್ ಬನೇಗಾ ಕರೋಡ್ಪತಿಯಲ್ಲಿ ಕಾಣಿಸಿಕೊಳ್ತಿದ್ದಾರೆ. ಅಮಿತಾಬ್ ಜೊತೆ ಸಾಕಷ್ಟು ಆಸಕ್ತಿಕರ ವಿಷ್ಯಗಳನ್ನು ಚರ್ಚಿಸಲಿದ್ದಾರೆ. 

ಅಮೀರ್ ಖಾನ್,  ತಮ್ಮ ಮಗ ಜುನೈದ್ ಖಾನ್ (Junaid Khan) ಜೊತೆ ಕೌನ್ ಬನೇಗಾ ಕರೋಡ್ಪತಿ 16ಗೆ ಆಗಮಿಸಿದ್ದಾರೆ. ಈ ಸಂಚಿಕೆ ಅಕ್ಟೋಬರ್ 11 ರಂದು ಬಿಗ್ ಬಿ ಅವರ 82 ನೇ ಹುಟ್ಟುಹಬ್ಬದಂದು ಪ್ರಸಾರವಾಗಲಿದೆ. ಅಮೀರ್ ಮತ್ತು ಜುನೈದ್ ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರೊಮೋ ಬಿಡುಗಡೆಯಾಗಿದೆ. ಮೊದಲ ಪ್ರೋಮೋದಲ್ಲಿ, ಬಿಗ್ ಬಿಗೆ ಗೊತ್ತಿಲ್ಲದೆ ಕಾರ್ಯಕ್ರಮಕ್ಕೆ ಎಂಟ್ರಿ ಆಗ್ತಿದ್ದೇವೆ ಎನ್ನುತ್ತಾರೆ ಅಮೀರ್. ಎರಡನೇ ಪ್ರೋಮೋದಲ್ಲಿ ಕುತೂಹಲಕಾರಿ ಪ್ರಶ್ನೆಯೊಂದನ್ನು ಅಮಿತಾಬ್ ಬಚ್ಚನ್ ಗೆ ಕೇಳಿದ್ದಾರೆ ಅಮೀರ್. 

ಸಮಂತಾ-ಚೈತನ್ಯ ಡಿವೋರ್ಸ್: ಮೂರನೇಯವರ ಮಾತಿಗೆ ಒಗ್ಗಟ್ಟಾಗಿ ಕುಟುಂಬದ ವಿರೋಧ!

ಬಾಲಿವುಡ್ ನ ಪ್ರಸಿದ್ಧ ಹಾಗೂ ಹಿರಿಯ ಜೋಡಿ ಅಮಿತಾಬ್ ಮತ್ತು  ಜಯಾ. ಅನೇಕ ಹೊಸ ಕಲಾವಿದರಿಗೆ ಮಾದರಿಯಾಗಿರುವ ಈ ಜೋಡಿಗೆ ವಯಸ್ಸಾದ್ರೂ ಅವರ ಪ್ರೀತಿ, ಮದುವೆ, ಕೌಟುಂಬಿಕ ಜೀವನದ ಬಗ್ಗೆ ತಿಳಿಯಲು ಫ್ಯಾನ್ಸ್ ಈಗ್ಲೂ ಉತ್ಸುಕರಾಗಿದ್ದಾರೆ. ಅದ್ರಲ್ಲಿ ನಟ ಅಮಿರ್ ಖಾನ್ ಕೂಡ ಸೇರಿದ್ದಾರೆ.   

ಅಮೀರ್ ಖಾನ್, ಅಮಿತಾಬ್ ಬಚ್ಚನ್ ಜೊತೆ ಮಾತನಾಡುತ್ತಾ,  ನನಗೊಂದು ಸೂಪರ್ ಡ್ಯೂಪರ್ ಪ್ರಶ್ನೆ ಇದೆ ಎನ್ನುತ್ತಾರೆ. ಇದಕ್ಕೆ ಅಮಿತಾಬ್ ಹೇಳಿ ಎನ್ನುತ್ತಾರೆ. ಮಾತು ಮುಂದುವರೆಸುವ ಅಮೀರ್, ಜಯಾ ಜಿ ಅವರು ಬೇರೆ ಹೀರೋ ಜೊತೆ ಶೂಟಿಂಗ್‌ಗೆ ಹೋಗುತ್ತಿದ್ದ ಸಮಯದಲ್ಲಿ, ಅವರು ಯಾವ ಹೀರೋ ಜೊತೆ ಹೋದಾಗ ನಿಮಗೆ ಹೊಟ್ಟೆ ಕಿಚ್ಚಾಗ್ತಿತ್ತು, ಓಹೋ, ಓಕೆ ಎನ್ನುವ ರಿಯಾಕ್ಷನ್ ಬರ್ತಾ ಇತ್ತು ಎಂದು ಅಮೀರ್ ಖಾನ್ ಕೇಳ್ತಾರೆ. ಸಡನ್ ಆಗಿ ಬಂದ ಈ ಪ್ರಶ್ನೆಗೆ ಅಮಿತಾಬ್ ಶಾಕ್ ಆಗ್ತಾರೆ. ಆದ್ರೆ ಪ್ರೋಮೋದಲ್ಲಿ, ಈ ಪ್ರಶ್ನೆಗೆ ಅಮಿತಾಬ್ ಏನು ಉತ್ತರ ನೀಡಿದ್ದಾರೆ ಎಂಬುದನ್ನು ತೋರಿಸಿಲ್ಲ. ಅದನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ಅಮಿತಾಬ್ ಆನ್ಸರ್ ಕೇಳಲು ಎಲ್ಲ ಫ್ಯಾನ್ಸ್ ಅಕ್ಟೋಬರ್ 11ರಂದು ಪ್ರಸಾರವಾಗುವ ಶೋ ನೋಡ್ಬೇಕಾಗುತ್ತದೆ. 

 ಅಕ್ಟೋಬರ್ 11ರಂದು  ರಾತ್ರಿ 9 ಗಂಟೆಗೆ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ  ಈ ಸಂಚಿಕೆ ಪ್ರಸಾರವಾಗಲಿದೆ. ಅಮಿತಾಬ್ ಬಚ್ಚನ್‌ಗೆ ಸಂಬಂಧಿಸಿದ ಕೆಲವು ಹಳೆಯ ಮತ್ತು ತಮಾಷೆಯ ಕಥೆಗಳನ್ನೂ ಅಮೀರ್ ಈ ಶೋನಲ್ಲಿ ಹಂಚಿಕೊಂಡಿದ್ದಾರೆ. 

ಸಮಂತಾ – ನಾಗ ಚೈತನ್ಯ ವಿಚ್ಛೇದನ ವಿವಾದ, ಕ್ಷಮೆ ಕೇಳಿದ ಕೊಂಡ ಸುರೇಖಾ

ಕೌನ್ ಬನೇಗಾ ಕರೋಡ್ಪತಿ ಈ ವಿಶೇಷ ಸಂಚಿಕೆ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ಬಳಕೆದಾರರ ಕಮೆಂಟ್ ಶುರುವಾಗಿದೆ. ಫ್ಯಾನ್ಸ್, ಅಮಿತಾಬ್ ಬಚ್ಚನ್ ಉತ್ತರವನ್ನು ಗೆಸ್ ಮಾಡಲು ಶುರು ಮಾಡಿದ್ದಾರೆ. ಆಗಿನ ಸೂಪರ್ ಸ್ಟಾರ್ಸ್ ಧರ್ಮೇಂದ್ರ, ವಿನೋದ್ ಕುಮಾರ್ ಸೇರಿದಂತೆ ಕೆಲ ಹೆಸರುಗಳನ್ನು ಫ್ಯಾನ್ಸ್ ಗೆಸ್ ಮಾಡಿದ್ದಾರೆ. ಯಾರ ಜೊತೆ ಶೂಟಿಂಗ್ ಗೆ ಹೋದ್ರೂ ಅಮಿತಾಬ್ ಬಚ್ಚನ್ ಗೆ ಹೊಟ್ಟೆಕಿಚ್ಚಾಗ್ತಿರಲಿಲ್ಲ. ಕಾರಣ ಅವರು, ಮದುವೆ ಸಮಯದಲ್ಲಿ ಜಯಾ ಅವರನ್ನು ಪ್ರೀತಿಸಿಯೇ ಇರಲಿಲ್ಲ ಎನ್ನುವ ಕಮೆಂಟ್ ಕೂಡ ಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?