ಚಂದ್ರಯಾನ 3 ಸುಮಾರು 500 ವಿಜ್ಞಾನಿಗಳ ಪರಿಶ್ರಮದ ಫಲ: ಸಿಎಂ ಸಿದ್ದರಾಮಯ್ಯ

Aug 24, 2023, 1:15 PM IST

ಬೆಂಗಳೂರು: ಇಸ್ರೋ ಕಚೇರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಇಸ್ರೋ(ISRO) ಸಾಧನೆ ಐತಿಹಾಸಿಕವಾಗಿದೆ. ಇಡೀ ಜಗತ್ತು ಭಾರತದ ಕಡೆ ನೋಡುವಂಥ ಸಾಧನೆಯಾಗಿದೆ. ರಷ್ಯಾ, ಅಮೆರಿಕ, ಚೀನಾ ಬಿಟ್ಟು ಬೇರಾರು ಈ ಸಾಧನೆ ಮಾಡಿಲ್ಲ. ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟಿದ್ದು ವಿಶೇಷವಾಗಿದೆ. ನಾವೆಲ್ಲರೂ ಇಸ್ರೋ ಸಾಧನೆಯನ್ನು ಮೆಚ್ಚಲೆಬೇಕು ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಹೇಳಿದ್ದಾರೆ. ಇಸ್ರೋ ವಿಜ್ಞಾನಿಗಳಿಗೆ( ISRO scientists) ಅಧಿಕೃತವಾಗಿ ಗೌರವಿಸಲು ಚಿಂತನೆ ಮಾಡಲಾಗುತ್ತಿದೆ. ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಜ್ಞಾನಿಗಳನ್ನು ಗೌರವಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಾನೂ ವಿಕ್ರಮ್ ಲ್ಯಾಂಡಿಂಗ್(Vikram Landing) ವೀಕ್ಷಿಸಿದ್ದೇನೆ. ನನಗೂ ಖುಷಿ ಆಯ್ತು, ಬಹಳ ಹೆಮ್ಮೆ ಅನಿಸ್ತು. ಇದೊಂದು ದೊಡ್ಡ ಸಾಧನೆ ಹಲವು ವರ್ಷಗಳಿಂದ ವಿಜ್ಞಾನಿಗಳು ಶ್ರಮ ಪಡ್ತಿದ್ದಾರೆ. ಸುಮಾರು 500 ವಿಜ್ಞಾನಿಗಳ ಪರಿಶ್ರಮದ ಫಲವಿದು ಎಂದು ಸಿಎಂ ಹೇಳಿದರು. 

ಇದನ್ನೂ ವೀಕ್ಷಿಸಿ:  ಚಂದ್ರಲೋಕದಲ್ಲಿ ಭಾರತದ ಐತಿಹಾಸಿಕ ಸಾಧನೆ: ಚಂದ್ರನ ದಕ್ಷಿಣ ಧ್ರುವದಲ್ಲಿ ಹೇಗಿತ್ತು ವಿಕ್ರಮನ ಪರಾಕ್ರಮ..?