ನಾಳೆಯಿಂದ ಸಿಗಲಿದೆ ತಿರುಪತಿ ದರ್ಶನ; ಆದರೆ ಈ ಶರತ್ತುಗಳು ಅನ್ವಯ..!

Jun 7, 2020, 12:22 PM IST

ಬೆಂಗಳೂರು (ಜೂ 06): ದೇಶದಲ್ಲಿ ಸೋಮವಾರದಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಳ್ಳುತ್ತಿವೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಜೂನ್ 08 ಹಾಗೂ 09 ರಂದು ಟಿಟಿಡಿ ಸಿಬ್ಬಂದಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜೂನ್ 10 ರಂದು ತಿರುಪತಿ ಸ್ಥಳೀಯರಿಗೆ ಅವಕಾಶ ನೀಡಲಾಗಿದೆ. ಜೂನ್ 11 ರಿಂದ ಹೊರ ಜಿಲ್ಲೆ, ಹೊರ ರಾಜ್ಯದವರಿಗೆ ಅವಕಾಶ ನೀಡಲಾಗಿದೆ. ಪ್ರತಿದಿನ ಬೆಳಿಗ್ಗೆ 6.30 ರಿಂದ 500 ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಪ್ರತಿದಿನ 6 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಿಗ್ಗೆ 5 ರಿಂದ ರಾತ್ರಿ 8 ರವರೆಗೆ ಬೆಟ್ಟ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. 

ನಾಳೆಯಿಂದ ದರುಶನ ಕೊಡಲಿದ್ದಾಳೆ ಚಾಮುಂಡೇಶ್ವರಿ; ಆದ್ರೆ ನೀವು ಈ ನಿಯಮ ಪಾಲಿಸಲೇಬೇಕು..!