ಗೋವಿನಕೊಪ್ಪ ಗ್ರಾಮಕ್ಕೆ ನುಗ್ಗಿದ ನೀರು; ಸುರಕ್ಷಿತ ಸ್ಥಳಕ್ಕೆ ಗ್ರಾಮಸ್ಥರು

Aug 18, 2020, 1:25 PM IST

ಬೆಳಗಾವಿ (ಆ. 18): ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಮಲಪ್ರಭಾ ನದಿ ಒಳ ಹರಿವು ಹೆಚ್ಚಾಗಿದೆ. ಬೆಳಗಾವಿಯ 20 ಕ್ಕೂ ಹೆಚ್ಚು ಗ್ರಾಮಕ್ಕೆ ನೀರು ನುಗ್ಗಿದೆ. ಗೋವಿನ ಕೊಪ್ಪ ಗ್ರಾಮಕ್ಕೆ ನೀರು ನುಗ್ಗಿದ್ದು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಬೆಳ್ಳಂಬೆಳಿಗ್ಗೆ ನೀರು ನುಗ್ಗಿರುವುದನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ಕೂಡಲೇ ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು. 

ಕೃಷ್ಣೆಯಲ್ಲಿ ತೆಪ್ಪ ಮುಳುಗಿ ನಾಲ್ವರು ನಾಪತ್ತೆ: ಮುಂದುವರೆದ ಶೋಧ ಕಾರ್ಯ