Omicron Variant: ದುಡ್ಡು, ಪ್ರಭಾವ ಇದ್ರೆ ಬೆಡ್ ಸಿಗಲ್ಲ, ಬೆಡ್ ಬುಕಿಂಗ್ ದಂಧೆಗೆ ಬ್ರೇಕ್

Dec 28, 2021, 1:16 PM IST

ಬೆಂಗಳೂರು (ಡಿ. 28): ರಾಜ್ಯದಲ್ಲಿ ಒಮಿಕ್ರೋನ್‌ (Omicron) ನಿರೀಕ್ಷೆಗೂ ಮೀರಿ ವೇಗವಾಗಿ ಹರಡುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಐಸಿಯು (ICU) ಬೆಡ್‌ಗಳ ಸಂಖ್ಯೆಯನ್ನು 3860ರಿಂದ 7,051ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ 30 ಸಾವಿರ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ (Dr Sudhakar) ಹೇಳಿದ್ದಾರೆ.

Karnataka Bandh: ಡಿ. 31 ಕ್ಕೆ ಬಂದ್ ಯಶಸ್ವಿ ಎಂದ ವಾಟಾಲ್, ಸಮಸ್ಯೆಗೆ ಬಂದ್ ಪರಿಹಾರನಾ? ಸುಮಲತಾ

ಇನ್ನು 2 ನೇ ಅಲೆಯಲ್ಲಾದ ಎಡವಟ್ಟುಗಳು ಮರುಕಳಿಸದಂತೆ ಆರೋಗ್ಯ ಇಲಾಖೆ (Health Department) ಮುಂಜಾಗ್ರತೆ ವಹಿಸಿದೆ. ಈ ಬಾರಿ ಪ್ರಭಾವಿತರ ಬೆಡ್ ಬ್ಲಾಕಿಂಗ್ ದಂಧೆಗಳಿಗೆ ಬ್ರೇಕ್ ಹಾಕಿದೆ. ದುಡ್ಡು, ಪ್ರಭಾವ ಇದ್ದ ಮಾತ್ರಕ್ಕೆ ಆಸ್ಪತ್ರೆ ಬೆಡ್ ಸಿಗುವುದಿಲ್ಲ. ವೈದ್ಯರು ಸಮ್ಮತಿಸಿದ್ರೆ ಮಾತ್ರ ಆಕ್ಸಿಜನ್, ಐಸಿಯು, ಬೆಡ್ ಸಿಗುತ್ತೆ. ಇದಕ್ಕಾಗಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಟ್ರಯಾಜ್ ಪ್ಲ್ಯಾನ್ ಮಾಡಿಕೊಂಡಿವೆ.