ವಿನಾಯಕನಿಗಿಲ್ಲ ವಿಘ್ನ : ಗಣೇಶೋತ್ಸವಕ್ಕೆ ಆಚರಣೆ ನಿಯಮ ಸಡಿಲಿಸಿದ ಸರ್ಕಾರ

Aug 18, 2020, 4:13 PM IST

ಬೆಂಗಳೂರು (ಆ. 18): ಗಣೇಶ ಚತುರ್ಥಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಗಣೇಶೋತ್ಸವಕ್ಕೆ ಆಚರಣೆ ನಿಯಮವನ್ನು ಸರ್ಕಾರ ಸಡಿಲಿಸಿದೆ. ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ 4 ಅಡಿ ಎತ್ತರ ಮೀರದಂತೆ ಗಣೇಶ ವಿಗ್ರಹ ಪ್ರತಿಷ್ಠಾಪಿಸಬೇಕು. ಮನೆಯೊಳಗೆ 2 ಅಡಿ ಎತ್ತರದ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕು. ಗಣೇಶೋತ್ಸವ ಸಮಿತಿ, ಸ್ಥಳೀಯ ಆಡಳಿತದ ಅನುಮತಿ ಪಡೆದಿರಬೇಕು. 20 ಕ್ಕಿಂತ ಹೆಚ್ಚು ಜನ ಸೇರಬಾರದು.

ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೂಡಾ ಮೆರವಣಿಗೆ ಮಾಡುವಂತಿಲ್ಲ. ಬೇಕಾಬಿಟ್ಟಿಯಾಗಿ ಜನ ಸೇರುವುದು, ಡ್ಯಾನ್ಸ್ ಮಾಡುವುದು, ಮೆರವಣಿಗೆ ಮಾಡುವುದು ಇದಕ್ಕೆಲ್ಲಾ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.!

'ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಇಲ್ಲ'