1200 ಕೋವಿಡ್‌ ಮೃತರಿಗೆ ಕಾವೇರಿ ತಟದಲ್ಲಿ ಅಶೋಕ್‌ರಿಂದ ಸಾಮೂಹಿಕ ಪಿಂಡಪ್ರದಾನ

Oct 9, 2021, 3:50 PM IST

ಬೆಂಗಳೂರು (ಅ. 09): ಕೊರೋನಾ ಸೋಂಕಿನಿಂದ ಮೃತಪಟ್ಟ1200 ಅನಾಥ ಶವಗಳಿಗೆ ಸದ್ಗತಿ ದೊರಕಿಸುವ ಸಲುವಾಗಿ ಶ್ರೀರಂಗಪಟ್ಟಣದ ಗೋಸಾಯ್‌ಘಾಟ್‌ನ ಕಾವೇರಿ ನದಿ ತೀರದಲ್ಲಿ ಕಂದಾಯ ಸಚಿವ ಆರ್‌.ಅಶೋಕ ಅವರು ರಾಜ್ಯ ಸರ್ಕಾರದ ವತಿಯಿಂದ ಸಾಮೂಹಿಕ ಪಿಂಡ ಪ್ರದಾನ ಮಾಡಿದರು.

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೋನಾಗೆ ಬಲಿಯಾದವರ ಶವಗಳನ್ನು ಪಡೆಯಲು ಕುಟುಂಬಸ್ಥರು ಮುಂದೆ ಬಾರದಿದ್ದ ಹಿನ್ನೆಲೆಯಲ್ಲಿ ಜೂನ್‌ 2 ರಂದು ಮಳವಳ್ಳಿಯ ಬೆಳಕವಾಡಿ ಬಳಿಯ ಶಿಂಷಾನದಿ ದಡದಲ್ಲಿ ಸುಮಾರು 1200 ಮೃತದೇಹಗಳ ಅಸ್ಥಿ ವಿಸರ್ಜನೆ ಮಾಡಲಾಗಿತ್ತು. ಅನಾಥವಾಗಿ ಶವಸಂಸ್ಕಾರಕ್ಕೊಳಗಾದವರಿಗೆ ಮೋಕ್ಷ ದೊರಕಿಸಲು ಗೋಸಾಯ್‌ಘಾಟ್‌ನಲ್ಲಿ ಸಾಮೂಹಿಕ ಪಿಂಡ ಪ್ರದಾನ ಕಾರ್ಯಕ್ರಮ ಜರುಗಿತು. ಹಿಂದೂ ಸಂಪ್ರದಾಯದಂತೆ ವೇದಬ್ರಹ್ಮ ಡಾ. ಭಾನುಪ್ರಕಾಶ್‌ಶರ್ಮಾ ನೇತೃತ್ವದಲ್ಲಿ ಎಡೆ ಪೂಜೆ, ಪಿಂಡ ಪ್ರದಾನಗಳನ್ನು ಸಚಿವ ಆರ್‌.ಅಶೋಕ್‌ ಮೃತರ ಕುಟುಂಬಸ್ಥರ ಪರವಾಗಿ ವಿಧಿ-ವಿಧಾನ ನೆರವೇರಿಸಿದರು. ಈ ಬಗ್ಗೆ ಒಂದು ವರದಿ ಇಲ್ಲಿದೆ.