ಕೊರೊನಾ ಕರಾಳತೆ ಮಧ್ಯೆ ಮಾದರಿಯಾದ ಎಂ ಬಿ ಪಾಟೀಲ್, ಮಾಡಿದ್ಧೇನು ನೋಡಿ..!

Apr 24, 2021, 3:39 PM IST

ಬೆಂಗಳೂರು (ಏ. 24): ಕೊರೊನಾ ಕರಾಳತೆ ನಡುವೆ ಮಾದರಿಯಾದ ಎಂ ಬಿ ಪಾಟೀಲ್. ಕೊರೊನಾ ಸೋಂಕಿತರಿಗೆ ಎಂ ಬಿ ಪಾಟೀಲ್ ಒಡೆತನದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಕಡಿಮೆ ದರ ನಿಗದಿಪಡಿಸಿದ್ಧಾರೆ. 10 ಸಾವಿರ ವಿಧಿಸುತ್ತಿದ್ದ ವಾರ್ಡ್‌ಗೆ ಕೇವಲ 3 ಸಾವಿರ ವಿಧಿಸಲಾಗಿದೆ. 300 ಆಕ್ಸಿಜನ್ ಬೆಡ್, 200 ಐಸೋಲೇಷನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ವ್ಯವಸ್ಥೆ ಹೇಗಿದೆ ಎಂದು ಸ್ವತಃ ಎಂಬಿ ಪಾಟೀಲ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.