Covid 3rd Wave: ರಾಜ್ಯದಲ್ಲಿ ಸೋಂಕು ಹೆಚ್ಚು, ಸಾವು ಕಡಿಮೆ, ಸಮಾಧಾನ ಕೊಟ್ಟ 3 ನೇ ಅಲೆ

Jan 19, 2022, 5:00 PM IST

ಬೆಂಗಳೂರು (ಜ. 19): ರಾಜ್ಯದಲ್ಲಿ ಕೊರೊನಾ ಸೋಂಕು (Corona Virus) ಹೆಚ್ಚಾಗುತ್ತಿದೆ ಆದರೆ ಸಾವಿನ ಪ್ರಮಾಣ ಕಡಿಮೆ ಇರುವುದು ಸಮಾಧಾನಕರ ವಿಚಾರ. ಕೊರೊನಾ 3 ನೇ ಅಲೆ (Covid 3rd Wave) ಜಾಸ್ತಿ ಪ್ರಾಣ ಹಾನಿ ಮಾಡುತ್ತಿಲ್ಲ. ಐಸಿಯು ಬೆಡ್, ಆಕ್ಸಿಜನ್‌ಗೆ ಪರದಾಟವಿಲ್ಲ. ಹೆಚ್ಚಿನ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ರಾಜ್ಯದಲ್ಲಿ ಸಾವಿನ ಸಂಖ್ಯೆ ಸರಾಸರಿ 15 ಇದೆ. ಆದರೆ ನಿರ್ಲಕ್ಯ ಮಾಡುವಂತಿಲ್ಲ, ಸರಿಯಾಗಿ ಜಾಗ್ರತೆ ವಹಿಸಿದರೆ ಅಪಾಯವನ್ನು ತಡೆಯಬಹುದು. ಇನ್ನು ಭಾರತದಲ್ಲಿ ಕೊರೋನಾ ಸೋಂಕು ಪ್ರಮಾಣ ಇಳಿಮುಖದ ಹಾದಿಯಲ್ಲಿದ್ದು, ಸೋಮವಾರಕ್ಕೆ ಹೋಲಿಸಿದರೆ ಒಂದೇ ದಿನದಲ್ಲಿ ಮಂಗಳವಾರ 20 ಸಾವಿರ ಕಮ್ಮಿ ಕೋವಿಡ್‌ ಪ್ರಕರಣಗಳು ದಾಖಲಾಗಿವೆ.