ಏನಮ್ಮಾ ಕಂಗನಾ ಇದು? ಮಾತಿನ ಆರ್ಭಟದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯಂಗೇ ಹೀಗೇ ಹೇಳೋದಾ?

By Suvarna News  |  First Published May 5, 2024, 12:02 PM IST

ತಮ್ಮ ಭಾಷಣದಲ್ಲಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ನಟಿ ಕಂಗನಾ ರಣಾವತ್​ ತಮ್ಮದೇ ಪಕ್ಷದ ತೇಜಸ್ವಿ ಸೂರ್ಯ ಅವರನ್ನು ಟೀಕಿಸಿಬಿಟ್ಟಿದ್ದಾರೆ. ಅವರು ಹೇಳಿದ್ದೇನು?
 


ಲೋಕಸಭಾ ಚುನಾವಣೆಯ ಮತದಾನ ಹಲವು ಕ್ಷೇತ್ರಗಳಲ್ಲಿ ಇನ್ನೂ ಬಾಕಿ ಇದ್ದು, ರಾಜಕೀಯ ಮುಖಂಡರ ಭಾಷಣ ಬಿರುಸಿನಿಂದ ಸಾಗುತ್ತಿದೆ. ತಮ್ಮ ವಿರೋಧ ಪಕ್ಷದ ನಾಯಕರ ಮೇಲೆ ವಾಗ್ದಾಳಿ ನಡೆಸುವುದು ಈ ಸಂದರ್ಭದಲ್ಲಿ ಮಾಮೂಲು. ಆದರೆ, ರಾಜಕೀಯ ಮುಖಂಡರಾದವರು ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎನ್ನುವುದು ಅಷ್ಟೇ ನಿಜ. ಇದಾಗಲೇ ಕರ್ನಾಟಕ ಸೇರಿದಂತೆ ಕೆಲವೆಡೆಗಳಲ್ಲಿ ಕಾಂಗ್ರೆಸ್ ಧುರೀಣರು ಭಾಷಣ ಮಾಡುವ ಆರ್ಭಟದಲ್ಲಿ ಖುದ್ದು ಕಾಂಗ್ರೆಸ್​ ಪಕ್ಷವನ್ನೇ ಉಗಿದು, ಬಿಜೆಪಿಗೆ ಮತ ನೀಡಿ ಎಂದು ಹೇಳಿರುವ ಸಾಕಷ್ಟು ವಿಡಿಯೋಗಳು ಸೋಷಿಯಲ್​  ಮೀಡಿಯಾಗಳಲ್ಲಿ ವೈರಲ್​ ಆಗುತ್ತಿವೆ. ಕೆಲವು ನಾಯಕರಿಗೆ ಯಾವ ರೀತಿ ಟೀಕೆ ಮಾಡಬೇಕು ಎಂದೂ ತಿಳಿಯದೇ ಕೇಸ್​ ಹಾಕಿಸಿಯೂಕೊಂಡಿದ್ದಾರೆ. ಇದೀಗ ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ಕಂಗನಾ ರಣಾವತ್​ ಭಾಷಣ ಮಾಡುವ ಆರ್ಭಟದಲ್ಲಿ ತಮ್ಮ ಪಕ್ಷದ ನಾಯಕ, ಕರ್ನಾಟಕದ ತೇಜಸ್ವಿ ಸೂರ್ಯ ಅವರ ವಿರುದ್ಧವೇ ವಾಗ್ದಾಳಿ ನಡೆಸಿ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ​ 

ಹಿಮಾಚಲ ಪ್ರದೇಶದ  ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕಂಗನಾ ರಣಾವತ್​, ಅಲ್ಲಿ ಮಾತನಾಡುತ್ತಾ, ಕಾಂಗ್ರೆಸ್​ ಸೇರಿದಂತೆ ವಿವಿಧ ಪಕ್ಷಗಳ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಪ್ರತಿಪಕ್ಷ ನಾಯಕರಿಗೆ ಏನಾಗಿದೆ? ಒಬ್ಬರು ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯುವ ಬಗ್ಗೆ ಮಾತನಾಡುತ್ತಾರೆ. ಅತ್ತ ತೇಜಸ್ವಿ ಸೂರ್ಯ ನೋಡಿದ್ರೆ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿಬಿಟ್ಟರು! ಅಸಲಿಗೆ ಅವರು ಹೇಳಹೊರಟಿದ್ದು ತೇಜಸ್ವಿ ಯಾದವ್​ ಬಗ್ಗೆ. ಆದರೆ ಯಾದವ್​ ಬದಲು ಸೂರ್ಯ ಎಂದು ಬಾಯಿ ತಪ್ಪಿ ಹೇಳುತ್ತಾ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌(Tejaswi Yadav) ಅವರನ್ನು ಟೀಕಿಸುವ ಭರದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಹೆಸರು ಹೇಳಿ  ಮತ್ತೆ ಟ್ರೋಲ್​ಗೆ ಒಳಗಾಗಿದ್ದಾರೆ. 

Tap to resize

Latest Videos

ಮೇಲಿಂದೆಲ್ಲಾ ತೋರಿಸ್ತಿರೋದು ಓಕೆ... ಪದೇ ಪದೇ ಕೈ ಅಲ್ಲಿ ಹೋಗ್ತಿರೋದ್ಯಾಕೆ ಎಂದು ಪೂನಂಗೆ ಕೇಳಿದ ಫ್ಯಾನ್ಸ್​!

ಸಂಪೂರ್ಣವಾಗಿ ಹಾಳಾದ ರಾಜಕುಮಾರರನ್ನು ಹೊಂದಿರುವ ಪಕ್ಷಗಳಿವೆ. ಅಲ್ಲಿ ಚಂದ್ರನ ಮೇಲೆ ಆಲೂಗೆಡ್ಡೆ ಬೆಳೆಯುವ ರಾಹುಲ್‌ ಗಾಂಧಿ, ಗೂಂಡಾಗಿರಿ ಮಾಡುವ ಮತ್ತು ಮೀನು ತಿನ್ನುವ ತೇಜಸ್ವಿ ಸೂರ್ಯ ಮತ್ತು ಅಸಂಬದ್ದ ಹೇಳಿಕೆ ನೀಡುವ ಅಖಿಲೇಶ್‌ ಯಾದವ್‌ ಇದ್ದಾರೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಅರ್ಥ ಮಾಡಿಕೊಳ್ಳದಿರುವ ಇಂತಹ ನಾಯಕರು ಹೇಗೆ ತಾನೇ ದೇಶವನ್ನು ನಡೆಸಬಲ್ಲರು ಎಂದು ಅವರು ವ್ಯಂಗ್ಯವಾಡಿದ್ದಾರೆ.   

ಅಂದಹಾಗೆ, ತೇಜಸ್ವಿ ಯಾದವ್​ ಅವರ ವಿರುದ್ಧ ನಟಿ ಹೇಳಲು ಹೊರಟಿದ್ದು ಏಕೆಂದರೆ, ಅವರು ಮೀನು ತಿನ್ನುವ ಫೋಟೋ ಶೇರ್​ ಮಾಡಿ ಟ್ರೋಲ್​ಗೆ ಒಳಗಾಗಿದ್ದರು. ಏ.9ರಂದು ನವರಾತ್ರಿಯ ದಿನ ಈ ರೀತಿಯ ಫೋಟೋ ಶೇರ್ ಮಾಡಿದ್ದ ತೇಜಸ್ವಿ ಯಾದವ್‌ ಟೀಕೆಗೆ ಗುರಿಯಾಗಿದ್ದರು. ಇದನ್ನೇ ತಮ್ಮ ಭಾಷಣದಲ್ಲಿಯೂ ಹೇಳಹೊರಟಿದ್ದರು ಕಂಗನಾ. ಆದರೆ ಯಾದವ್​ ಬದ್ಲು ಸೂರ್ಯ ಆಗಿ ಹೀಗೆಲ್ಲಾ ಎಡವಟ್ಟು ಆಗಿಬಿಟ್ಟಿದೆ.  ರಾಹುಲ್‌, ಅಖಿಲೇಶ್‌ ಯಾದವ್‌ ಮತ್ತು ತೇಜಸ್ವಿ ಯಾದವ್‌ ವಿರುದ್ಧ ವಾಗ್ದಾಳಿ ನಡೆಸೋ ಭರದಲ್ಲಿ ಚಿಕ್ಕ ಎಡವಟ್ಟಿನಿಂದ ಸಕತ್​ ಟ್ರೋಲ್​ ಅನುಭವಿಸುತ್ತಿದ್ದಾರೆ.  

ಅಯ್ಯೋ ಆಂಟಿನಾ...? ಬಾಲಕ 'ಆಂಟಿ' ಎಂದಾಗ ನಟಿ ಮಾಧುರಿ ದೀಕ್ಷಿತ್​ ರಿಯಾಕ್ಷನ್​ ಹೇಗಿತ್ತು ನೋಡಿ- ವಿಡಿಯೋ ವೈರಲ್
 

click me!