vuukle one pixel image

ಬಾಗಲಕೋಟೆ ಜಿಲ್ಲಾ ಪೋಲಿಸ್‌ ಇಲಾಖೆಗೆ ಮುಧೋಳ ಶ್ವಾನ

Jan 23, 2021, 3:03 PM IST

ಬಾಗಲಕೋಟೆ (ಜ. 23): ಭಾರತೀಯ ಸೇನೆ,ಬಿ ಎಸ್ ಎಫ್ ಸೇರಿದಂತೆ ವಿವಿಧ ರಕ್ಷಣಾ ಪಡೆಯಲ್ಲಿ ಕಮಾಲ್ ಮಾಡಿರುವ  ಮುಧೋಳ ಶ್ವಾನ ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲೂ  ಮಿಂಚಲಿದೆ‌. ಮುಧೋಳ ಶ್ವಾನ ಸಂವರ್ಧನಾ ಕೇಂದ್ರದಿಂದ ಶ್ವಾನ ಪಡೆದು ಕ್ರಿಶ್ ಎಂದು ಶ್ವಾನಕ್ಕೆ  ಎಸ್ ಪಿ ಲೋಕೇಶ್ ಜಗಲಾಸರ್ ನಾಮಕರಣ ಮಾಡಿದ್ದಾರೆ. 

ಬಾರ್‌, ಪೆಟ್ರೋಲ್ ಬಂಕ್ ಕ್ಯಾಶಿಯರ್‌ಗಳೇ ಇವರ ಟಾರ್ಗೆಟ್, ಫೀಲ್ಡಿಗಿಳಿದ್ರೆ ಮಿಸ್ಸೇ ಇಲ್ಲ..!

ಒಂದುವರೆ ತಿಂಗಳ  ಶ್ವಾನ ಇದಾಗಿದ್ದು, ಮೊದಲು ಪ್ರಾಯೋಗಿಕವಾಗಿ ಶ್ವಾನಕ್ಕೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಶ್ವಾನ ಯಶಸ್ವಿಯಾದರೆ ಜಿಲ್ಲೆಯ ಶ್ವಾನದಳಕ್ಕೆ ಅಧಿಕೃತ ಸೇರ್ಪಡೆ ಮಾಡಿಕೊಳ್ಳಲಾಗುವುದು. ಶ್ವಾನದ ಪರ್ಪಾರ್ಮನ್ಸ್ ಮೇಲೆ ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಯ ಪೊಲೀಸ್ ಶ್ವಾನದಳಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಎಸ್ ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.