Jan 19, 2022, 12:32 PM IST
ಬೆಂಗಳೂರು(ಜ.19): ರಾಜ್ಯದಲ್ಲಿ ಪ್ರತಿದಿನ ಒಂದು ಲಕ್ಷ ಕೊರೋನಾ ಪ್ರಕರಣಗಳು ದಾಖಲಾಗುತ್ತವೆ ಅಂತ ವರದಿಯೊಂದು ಹೇಳುತ್ತಿದೆ. ಜನವರಿ ಅಂತ್ಯದ ಹೊತ್ತಿಗೆ ರಾಜ್ಯದಲ್ಲಿ ಕೊರೋನಾ ರಣಾರ್ಭಟ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಜನವರಿ ಅಂತ್ಯದಲ್ಲಿ ನಿತ್ಯ ಲಕ್ಷ ಕೋವಿಡ್ ಕೇಸ್‌ಗಳು ದಾಖಲಾಗುತ್ತವೆ. ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ ಹಾಗೂ ಐಐಎಸ್‌ಸಿಯ ಪ್ರೊ. ಶಿವ ಆತ್ರೇಯ, ಪ್ರಪ ಪ್ರೊ. ರಾಜೇಶ್ ಸುಂದರೇಶನ್ ಅವರ ವರದಿ ಇದಾಗಿದೆ. ಕೊರೋನಾ ಅತ್ಯಂತ ಕೆಟ್ಟ ಸನ್ನಿವೇಶವಾದ್ರೆ ದಿನಕ್ಕೆ 1,20,000 ಕೇಸ್‌ಗಳು ದಾಖಲಾಗುತ್ತವೆ. ಸಾಧಾರಣ ಸ್ಥಿತಿ ನಿರ್ಮಾಣವಾದರೆ ನಿತ್ಯ 80000 ಪ್ರಕರಣಗಳು ದಾಖಲಾಗುತ್ತವೆ ಅಂತ ವರದಿಯಿಂದ ತಿಳಿದು ಬಂದಿದೆ.
Weekend Curfew: ಕಠಿಣ ರೂಲ್ಸ್ ಬಗ್ಗೆ ಚರ್ಚಿಸಲು ಶುಕ್ರವಾರ ಸಿಎಂ ಮಹತ್ವದ ಸಭೆ