ಶ್ರದ್ಧಾ ಹತ್ಯೆಗೈದ ಆರೋಪಿ ಆಫ್ತಾಬ್‌ಗೆ ಸಂಕಷ್ಟ, ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಹೆಸರು!

Published : Nov 15, 2024, 05:11 PM IST
ಶ್ರದ್ಧಾ ಹತ್ಯೆಗೈದ ಆರೋಪಿ ಆಫ್ತಾಬ್‌ಗೆ ಸಂಕಷ್ಟ, ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಹೆಸರು!

ಸಾರಾಂಶ

ಪ್ರಿಯಕರ ಅಫ್ತಾಬ್ ಪ್ರೀತಿಯಲ್ಲಿ ಬಲೆಯಲ್ಲಿ ಬಿದ್ದು ನರಳಾಡಿದ ದೆಹಲಿ ಶ್ರದ್ಧಾ ವಾಕರ್ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಶ್ರದ್ಧಾ 35 ತುಂಡುಗಳಾಗಿ ಫ್ರಿಡ್ಜ್ ಸೇರಿಕೊಂಡಿದ್ದಳು. ಶ್ರದ್ಧಾ ಹೈತ್ಯೆಗೈದ ಆರೋಪಿ ಅಫ್ತಾಬ್‌ಗೆ ಹೊಸ ಸಂಕಷ್ಟ ಶುರುವಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಿಟ್‌ಲಿಸ್ಟ್‌ನಲ್ಲಿ ಅಫ್ತಾಬ್ ಹೆಸರಿದೆ.  

ಮುಂಬೈ(ನ.15) ದೆಹಲಿಯ ಶ್ರದ್ಧಾ ವಾಕರ್ ಪ್ರಕರಣ ಯಾರು ಮರೆತಿಲ್ಲ. 2022ರಲ್ಲಿ ಶ್ರದ್ಧಾವಾಕರ್ 35 ತುಂಡುಗಳಾಗಿ ಫ್ರಿಡ್ಜ್‌ ಸೇರಿಕೊಂಡಿದ್ದಳು. ಬಳಿಕ ಒಂದೊಂದೆ ತುಂಡುಗಳು ನಿರ್ಜನ ಪ್ರದೇಶದಲ್ಲಿ ನಾಯಿ, ಕಾಡು ಪ್ರಾಣಿ, ರಣಹದ್ದುಗಳಿಗೆ ಆಹಾರವಾಗಿ ನೀಡಿದ ರಣಭೀಕರ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಪ್ರಕರಣ ಸಂಬಂಧ ಪ್ರಿಯಕರ ಅಫ್ತಾಬ್ ಪೂನಾವಾಲ ಅರೆಸ್ಟ್ ಆಗಿದ್ದಾನೆ. ಈತನೇ ಶ್ರದ್ಧಾ ಹೈತ್ಯೆ ಮಾಡಿದ್ದಾನೆ ಅನ್ನೋದು ಗಂಭೀರ ಆರೋಪ. ಶ್ರದ್ಧಾ ವಾಕರ್ ಘಟನೆ ಹಲವರನ್ನು ಆತಂಕಕ್ಕೆ ತಳ್ಳಿದ್ದು ಸುಳ್ಳಲ್ಲ, ಇಷ್ಟೇ ಅಲ್ಲ ಇದೇ ಪ್ರಕರಣ ಹಲವರ ಆಕ್ರೋಶ ಹೆಚ್ಚಿಸಿತ್ತು. ಈ ಪೈಕಿ ಲಾರೆನ್ಸ್ ಬಿಷ್ಣೋಯ್ ಕೂಡ ಒಬ್ಬ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶ್ರದ್ಧಾಳನ್ನು ಭೀಕರವಾಗಿ ಹತ್ಯೆಗೈದ ಆರೋಪಿ ಅಫ್ತಾಬ್, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಿಟ್‌ಲಿಸ್ಟ್‌ನಲ್ಲಿದ್ದಾನೆ ಅನ್ನೋ ಮಾಹಿತಿಯನ್ನು ಮುಂಬೈ ಪೊಲೀಸರ ವಿಚಾರಣೆ ಬಹಿರಂಗವಾಗಿದೆ ಎಂದು ಮೂಲಗಳು ಹೇಳಿವೆ.

ಮುುಂಬೈ ಪೊಲೀಸರ ಮೂಲಗಳ ಪ್ರಕಾರ ಲಾರೆನ್ಸ್ ಬಿಷ್ಣೋಯ್ ಟಾರ್ಗೆಟ್ ಲಿಸ್ಟ್‌ನಲ್ಲಿ ಹಲವರ ಹೆಸರಿದೆ. ಈ ಪೈಕಿ ಒಂದು ಹೆಸರು ಅಫ್ತಾಬ್. ಮೊದಲಿಗೆ ಈ ಹೆಸರು ಕೇಳಿದಾಗ ತಕ್ಷಣಕ್ಕೆ ಯಾರು ಈತ ಅನ್ನೋದು ಪೊಲೀಸರಿಗೆ ಗೊತ್ತಗಾಲಿಲ್ಲ. ಆದರೆ ಆಫ್ತಾಬ್ ಪೂನಾವಾಲ ಎಂದಾಗ ಘಟನೆ ಚಿತ್ರವಣವೇ ಕಣ್ಣಮುಂದೆ ಬಂದಿದೆ. ಹೌದು, ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಆರೋಪಿಗಳನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆಯಲ್ಲಿ ಕೆಲ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ತಿಹಾರ್ ಜೈಲಿನಲ್ಲಿರುವ ಅಫ್ತಾಬ್ ಪೂನವಾಲಗೆ ಭದ್ರತೆ ಹೆಚ್ಚಿಸಲಾಗಿದೆ. 

2 ದಿನದಿಂದ ನಾಪತ್ತೆಯಾದ ಬ್ಯೂಟಿಶಿಯನ್ ಮೃತದೇಹ 6 ತುಂಡುಗಳಾಗಿ ಪತ್ತೆ!

ಬಾಬಾ ಸಿದ್ದಿಕಿ ಹತ್ಯೆ ಬಾಲಿವುಡ್ ರಂಗನ್ನೇ ತಲ್ಲಣಿಸಿತ್ತು. ಈ ಹತ್ಯೆ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊಣೆ ಹೊತ್ತುಕೊಂಡಿತ್ತು. ಬಾಬಾ ಸಿದ್ದಿಕಿ ಹೆಚ್ಚಾಗಿ ಸಲ್ಮಾನ್‌ ಖಾನ್‌ಗೆ ನೆರವು ನೀಡುತ್ತಿದ್ದಾರೆ ಅನ್ನೋ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿತ್ತು. ಸಲ್ಮಾನ್ ಖಾನ್ ಹತ್ಯೆಗೂ ಹಲವು ಪ್ರಯತ್ನಗಳು ನಡೆದಿತ್ತು. ಹೀಗಾಗಿ ಬಾಬಾ ಸಿದ್ದಿಕಿ ಹತ್ಯೆ ಅತಂಕ ಹೆಚ್ಚಿಸಿದೆ. ಇತ್ತ ಮುಂಬೈ ಪೊಲೀಸರು ತನಿಖೆಯಲ್ಲಿ ಹಲವು ಆರೋಪಿಗಳು ಅರೆಸ್ಟ್ ಆಗಿದ್ದರು. ಶೂಟರ್ ಸೇರಿದಂತೆ ಬಿಷ್ಣೋಯ್ ಗ್ಯಾಂಗ್ ಸದಸ್ಯರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.

ತನಿಖೆ ವೇಳೆ ಬಿಷ್ಣೋಯ್ ಗ್ಯಾಂಗ್ ಸದಸ್ಯರು ತಮ್ಮ ಹಿಟ್ ಲಿಸ್ಟ್ ಬಹಿರಂಗಪಡಿಸಿದ್ದಾರೆ. ಈ ಪೈಕಿ ಅಫ್ತಾಬ್ ಪೂನವಾಲ ಹೆಸರು ಕೂಡ ಇದೆ ಎಂದು ಮುಂಬೈ ಪೊಲೀಸರ ಮೂಲಗಳು ಹೇಳಿದೆ. 

ನವೆಂಬರ್ 2022ರಲ್ಲಿ ಶ್ರದ್ಧಾವಾಕರ್ ಪ್ರಕರಣ ಬೆಳೆಕಿಗೆ ಬಂದಿತ್ತು. ಪ್ರೀತಿಯ ನಾಟಕವಾಡಿದ್ದ ಅಫ್ತಾಬ್ ಲೀವಿಂಗ್ ರಿಲೇಶನ್‌ಶಿಪ್ ಬೆಳೆಸಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿ ಸಂಬಂಧ ಬೆಳೆಸಿದ್ದ. ಆದರೆ ಮದುವೆ ಮಾತ್ರ ಆಗಲೇ ಇಲ್ಲ. ಹೀಗಾಗಿ ಶ್ರದ್ಧಾ ಮದುವೆಯಾಗಲು ಒತ್ತಾಯಿಸಿದ್ದಳು. ಇಷ್ಟೇ ನೋಡಿ, ಶ್ರದ್ಧಾ ಹತ್ಯೆ ಮಾಡಿದ ಅಫ್ತಾಬ್ 35ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ್ದ. ಬಳಿಕ 20ಕ್ಕೂ ಹೆಚ್ಚು ದಿನ ಫ್ರಿಡ್ಜ್‌ನಲ್ಲಿಟ್ಟಿದ್ದ ಅಫ್ತಾಬ್ ಬಳಿಕ ದೆಹಲಿಯ ಹೊರವಲಯದಲ್ಲಿರುವ ಮೆಹ್ರೌಲಿ ಕಾಡಿಗೆ ಎಸೆದಿದ್ದ. ಶ್ರದ್ಧಾ ವಾಕರ್ ತಂದೆ ನೀಡಿದ ನಾಪತ್ತೆ ಪ್ರಕರಣದ ಜಾಡು ಹಿಡಿದು ಹೊರಟಿದ್ದ ದೆಹಲಿ ಪೊಲೀಸರಿಗೆ ಬೆಚ್ಚಿ ಬೀಳಿಸುವ ಮಾಹಿತಿ ಸಿಕ್ಕಿತ್ತು. 

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈಗಾಗಲೇ ಹಲವು ಹತ್ಯೆ ಪ್ರಕರಣಗಳ ಹೊಣೆ ಹೊತ್ತುಕೊಂಡಿದೆ. ಈ ಪೈಕಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲ ಪ್ರಕರಣ ಕೂಡ ಒಂದಾಗಿದೆ.
 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ