ಇತಿಹಾಸದಲ್ಲೇ ಲೋಕಾಯುಕ್ತ ತಂಡದ ಮಹಾ ಬೇಟೆ! ಲೋಕಾಯುಕ್ತರ ತನಿಖೆ ಶಾಸಕರನ್ನ ಜೈಲಿಗಟ್ಟುತ್ತಾ?

Mar 4, 2023, 3:40 PM IST

ಬೆಂಗಳೂರು (ಮಾ.4): ಮೈ ತೊಳೆಯೋ ಸೋಪನ್ನೂ ಬಿಟ್ಟಿಲ್ಲ ಈ ಹಣ ಬಾಕರು. ನಮ್ಮ ಹೆಮ್ಮೆ ಮೈಸೂರ್ ಸ್ಯಾಂಡಲ್ ಸೋಪ್ನ ಇಟ್ಟುಕೊಂಡು ಡೀಲ್ ಮಾಡಲು ಮುಂದಾದ ಮಾಡಳ್ ಈಗ ತಗ್ಲಾಕಿಕೊಂಡಿದ್ದಾನೆ. ಅವನನ್ನ ಜೈಲಿಗೂ ಕಳಿಸಲಾಗುತ್ತೆ. 8 ಕೋಟಿಗೂ ಅಧಿಕ ದುಡ್ಡು ಲೋಕಾಯುಕ್ತ ವಶದಲ್ಲಿದೆ. ಮುಂದೆ ಏನು? ಈ ತನಿಖೆ ಹೇಗೆ ಸಾಗುತ್ತೆ? A1 ಆಗಿರೋ ಶಾಸಕ ಬಂಧನ ಆಗ್ತಾನ?  ಶಾಸಕನ ಮಗ A2 ಆತನೇ ಅರೆಸ್ಟ್ ಆಗಿದ್ದಾನೆ. ಆದ್ರೆ A1 ಆರೋಪಿಯಾಗಿರೋ ಮಾಡಾಳ್ ವಿರೂಪಾಕ್ಷಪ್ಪರ ಬಂಧನ ಇನ್ನೂ ಆಗಿಲ್ಲ. ಹಾಗಾದ್ರೆ ಇದೂ ಕೂಡ ಮಾಮೂಲಿ ತನಿಖೆಯಂತೆ ಉಳ್ಳವರ ಪರ ಆಗಿಬಿಡುತ್ತಾ? ಇದೊಂದು ಪ್ರಶ್ನೆ ಎಲ್ಲರನ್ನ ಕಾಡ್ತಿದೆ.