
ಕಾನ್ಪುರ: ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಸರಣಿ ಗೆಲುವಿನೊಂದಿಗೆ 24 ಅಂಕ ಸಂಪಾದಿಸಿದ ಭಾರತ, 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾರತ ಆಡಿ ರುವ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, ಶೇಕಡಾ 74.24 ಗೆಲುವಿನ ಪ್ರತಿಶತದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಇನ್ನು 12 ಪಂದ್ಯಗಳಲ್ಲಿ8ರಲ್ಲಿ ಜಯಭೇರಿ ಬಾರಿಸಿರುವ ಆಸ್ಟ್ರೇಲಿಯಾ ಶೇ.62.50 ಗೆಲುವಿನ ಪ್ರತಿಶತದೊಂದಿಗೆ 2ನೇ, 9 ಪಂದ್ಯಗಳಲ್ಲಿ ಜಯ ಕಂಡಿರುವ ಶ್ರೀಲಂಕಾ (ಶೇ.55.56) 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ (3.42.19), ದಕ್ಷಿಣ ಆಫ್ರಿಕಾ(ಶೇ.38.89), ನ್ಯೂಜಿಲೆಂಡ್ (ಶೇ.37.50), ಬಾಂಗ್ಲಾದೇಶ (ಶೇ. 34.38), ಪಾಕಿಸ್ತಾನ(ಶೇ.19.05), ವೆಸ್ಟ್ ಇಂಡೀಸ್ (ಶೇ.18.52)ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ಬಿಸಿಸಿಐ ಹೊಸ ಐಪಿಎಲ್ ರೂಲ್ಸ್‌ನಿಂದ ಧೋನಿ ಸೇರಿ ಈ ನಾಲ್ವರಿಗೆ ಭರ್ಜರಿ ಲಾಭ!
ಕಿವೀಸ್ ವಿರುದ್ಧ 3-0 ಗೆದ್ರೆ ಭಾರತ ಫೈನಲ್‌ಗೆ
ಭಾರತಕ್ಕೆ ಇನ್ನು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸರಣಿ ಬಾಕಿಯಿದೆ. ಅ.16ರಿಂದ ನ.5ರ ವರೆಗೆ ಕಿವೀಸ್ ವಿರುದ್ಧ 3 ಪಂದ್ಯಗಳ ಸರಣಿಯನ್ನು ಭಾರತ ತನ್ನ ತವರಿನಲ್ಲೇ ಆಡಲಿದೆ. ಈ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದರೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೂ ಮೊದಲೇ ಫೈನಲ್ ಪ್ರವೇಶಿಸಲಿದೆ. ಭಾರತ ಕಳೆದೆರಡೂ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿತ್ತು.
ಟೆಸ್ಟ್ ವಿಶ್ವಕಪ್ ಫೈನಲ್ ರೇಸ್‌ನಲ್ಲಿ ಟೀಂ ಇಂಡಿಯಾ ಸೇರಿ 5 ತಂಡಗಳು
2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಲು ಒಟ್ಟು 5 ತಂಡಗಳ ನಡುವೆ ಪೈಪೋಟಿ ಇದೆ. ಭಾರತ ಫೇವರಿಟ್ ಎನಿಸಿದ್ದು, ಆಸ್ಟ್ರೇಲಿಯಾ ಸಹ ಸುಲಭವಾಗಿ ಫೈನಲ್‌ಗೇರುವ ಲೆಕ್ಕಾಚಾರದಲ್ಲಿದೆ. ಯಾವ ತಂಡಕ್ಕೆ ಇನ್ನೆಷ್ಟು ಪಂದ್ಯ ಬಾಕಿ ಇದೆ, ಎಷ್ಟು ಗೆಲುವು ಬೇಕಿದೆ. ಯಾವ ತಂಡಗಳ ವಿರುದ್ಧ ಪಂದ್ಯಗಳು ಬಾಕಿ ಇವೆ ಎನ್ನುವ ವಿವರ ಇಲ್ಲಿದೆ.
ಮತ್ತೆ ಅಬ್ಬರಿಸಿದ ಜೈಸ್ವಾಲ್; ಕಾನ್ಪುರ ಟೆಸ್ಟ್ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ
ತಂಡ ಬೇಕಿರುವ ಜಯ/ಬಾಕಿ ಪಂದ್ಯ ಯಾವ್ಯಾವ ತಂಡಗಳ ವಿರುದ್ಧ ಪಂದ್ಯ
ಭಾರತ 3/8 ನ್ಯೂಜಿಲೆಂಡ್ ವಿರುದ್ಧ 3, ಆಸ್ಟ್ರೇಲಿಯಾ ವಿರುದ್ಧ 5
ಆಸ್ಟ್ರೇಲಿಯಾ 4/7 ಭಾರತ ವಿರುದ್ಧ 5, ಶ್ರೀಲಂಕಾ ವಿರುದ್ಧ 2
ದ.ಆಫ್ರಿಕಾ 5/6 ಬಾಂಗ್ಲಾ ವಿರುದ್ಧ 2, ಲಂಕಾ ವಿರುದ್ಧ 2, ಪಾಕ್ ವಿರುದ್ಧ 2
ಶ್ರೀಲಂಕಾ 3/4 ದ.ಆಫ್ರಿಕಾ ವಿರುದ್ಧ 2, ಆಸ್ಟ್ರೇಲಿಯಾ ವಿರುದ್ಧ 2
ನ್ಯೂಜಿಲೆಂಡ್ 6/6 ಭಾರತ ವಿರುದ್ಧ 3, ಇಂಗ್ಲೆಂಡ್ ವಿರುದ್ಧ 3
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.