Jul 25, 2022, 1:35 PM IST
ಏಷ್ಯಾನೆಟ್ ಸುವರ್ಣ ನ್ಯೂಸ್ ಚರ್ಚಾ ಕಾರ್ಯಕ್ರಮ 'ನ್ಯೂಸ್ ಅವರ್'ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಮಿಸಿದ್ದರು. ಇತ್ತೀಚಿಗೆ ನಡೆದ ಬೇರೆ ಬೇರೆ ಹಗರಣದ ವಿಚಾರವಾಗಿ ನೀಡಿದ ಹೇಳಿಕೆಯಿಂದ ಸುದ್ದಿಯಲ್ಲಿರುವ ಮಂತ್ರಿ. ಪಿಎಸ್ಐ ಅಕ್ರಮ ಹಗರಣ ಗೃಹ ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗೃಹ ಇಲಾಖೆಯನ್ನು ನಡೆಸಲು ಆರಗ ಜ್ಞಾನೇಂದ್ರ ಅಸಮರ್ಥರು ಎಂದು ವಿಪಕ್ಷಗಳು ಆರೋಪಿಸಿವೆ. ಈ ಎಲ್ಲಾ ವಿವಾದದ ಬಗ್ಗೆ ಆರಗ ಅವರು ಸ್ಪಷ್ಟನೆ ನೀಡಿದ್ದಾರೆ.