ದಕ್ಷಿಣ ದೆಹಲಿಯ ಸೈನಿಕ ಫಾರ್ಮ್ ನಲ್ಲಿ ಮನೆ ಹೊಂದಿರುವ ಪೀಟರ್ ಸಿಂಗ್ ಮತ್ತು ನಿನೋ ಕೌರ್ ದಂಪತಿ ಇಂಥದ್ದೊಂದು ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ಇವರ ಮನೆಯಲ್ಲಿನ ಪರಿಸರ ದೇಶದ ಯಾವುದೇ ಅತ್ಯುತ್ತಮ ವಾಯುಗುಣಮಟ್ಟಕ್ಕೆ ಸಮ ಎಂಬುದು ಅಚ್ಚರಿಯ ವಿಷಯ.
ನವದೆಹಲಿ(ನ.30): ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಎಕ್ಯುಐ (ವಾಯುಗುಣಮಟ್ಟ ಸೂಚ್ಯಂಕ) 350 ದಾಟಿ ಜನತೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ, ದೆಹಲಿಯ ತಮ್ಮ ಮನೆಯೊಳಗಿನ ಎಕ್ಯುಐ ಪ್ರಮಾಣವನ್ನು ಕೇವಲ 10-15 ರೊಳಗೆ ಕಾಪಾಡುವ ಮೂಲಕ ದಂಪತಿ ಇಡೀ ಸಮಾಜಕ್ಕೆ ಮಾದರಿಯಾಗಿ ಹೊರಹೊಮ್ಮಿದ್ದಾರೆ.
ನಿಜ. ದಕ್ಷಿಣ ದೆಹಲಿಯ ಸೈನಿಕ ಫಾರ್ಮ್ ನಲ್ಲಿ ಮನೆ ಹೊಂದಿರುವ ಪೀಟರ್ ಸಿಂಗ್ ಮತ್ತು ನಿನೋ ಕೌರ್ ದಂಪತಿ ಇಂಥದ್ದೊಂದು ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ಇವರ ಮನೆಯಲ್ಲಿನ ಪರಿಸರ ದೇಶದ ಯಾವುದೇ ಅತ್ಯುತ್ತಮ ವಾಯುಗುಣಮಟ್ಟಕ್ಕೆ ಸಮ ಎಂಬುದು ಅಚ್ಚರಿಯ ವಿಷಯ.
ಒಂದು ವಾರದಿಂದ ಬೆಳಗ್ಗೆಯೂ ಲುಧಿಯಾನದಲ್ಲಿ ಕತ್ತಲು, ಕೇಡುಗಾಲದ ಸೂಚನೆ ನೀಡಿತಾ ಸೂರ್ಯ?
ಪರಿಸರ ಸ್ನೇಹಿ ಜೀವನ:
ದಂಪತಿಯ ಈ ಸಾಹಸದ ಹಿಂದೆ ಒಂದು ಕಥೆ ಇದೆ. ಕೆಲ ವರ್ಷಗಳ ಹಿಂದೆ ನಿನೋ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಅದಕ್ಕೆ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ದೆಹಲಿತೊರೆಯುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ದಂಪತಿ ಗೋವಾಕ್ಕೆ ಬಂದು ನೆಲೆಸಿದ್ದರು. ನಂತರ ಆರ್ಯುವೇದ ವೈದ್ಯರ ಸಲಹೆ ಮತ್ತು ಪುತ್ರನ ಸಹಕಾರದೊಂದಿಗೆ ದೆಹಲಿಯಲ್ಲಿ ಪರಿಸರ ಸ್ನೇಹಿ ಮನೆ ಕಟ್ಟಿದ್ದರು. ಮನೆ ಗೋಡೆಗೆ ಪ್ಲಾಸ್ಟರ್ ಹಾಕದೇ, ಬಣ್ಣ ಬಳಿಯದೇ ಉಳಿಸಿ ಕೊಂಡಿದ್ದಾರೆ. ವಿದ್ಯುತ್ ಅಗತ್ಯಕ್ಕೆ ಪೂರ್ಣ ಸೌರಶಕ್ತಿ ಅವಲಂಬಿಸಿದ್ದಾರೆ. ನೀರಿಗೆ ಮಳೆ ಕೊಯ್ದು ವ್ಯವಸ್ಥೆ ಮಾಡಿದ್ದಾರೆ. ಇದರ ಮೂಲ ಕ ವರ್ಷವಿಡೀ ತಮಗೆ ಬೇಕಾದ ತರಕಾರಿ ಮನೆಯಲ್ಲೇ ಬೆಳೆಯುತ್ತಾರೆ. ಇದರ ಜೊತೆಗೆ ಮನೆಯ ಒಳಗೆ ಮತ್ತು ಹೊರಗೆ ಅಂದಾಜು 150000 ಮರ, ಗಿಡ ಬೆಳೆಸಿದ್ದಾರೆ. ಇವು ಮನೆಯ ಹೊರಗೆ ಮತ್ತು ಒಳಗಿನ ಗಾಳಿಯನ್ನು ನಿರಂತರ ಶುದ್ದೀಕರಿಸುವ ಪರಿ ಣಾಮ ಮನೆಯ ಒಳಗಿನ ಎಕ್ಯುಐ ಪ್ರಮಾಣ ಸದಾ 10-15ರ ವ್ಯಾಪ್ತಿಲೀ ದಾಖಲಾಗುತ್ತಿದೆ.
ವಾಯು ಮಾಲಿನ್ಯದಿಂದ ದೆಹಲಿಯಲ್ಲಿ ಆತಂಕ ಹೆಚ್ಚಿಸಿದ ಹೊಸ ಸಮಸ್ಯೆ; ಏನಿದು ‘ವಾಕಿಂಗ್ ನ್ಯುಮೋನಿಯಾ’?
ನವದೆಹಲಿ: ಕಳೆದ ಕೆಲ ದಿನಗಳಿಂದ ವಾಯುಮಾಲಿನ್ಯದೊಂದಿಗೆ ಸೆಣಸುತ್ತಿರುವ ದೆಹಲಿಯ ಜನ ಇದೀಗ ಹೊಸ ರೀತಿಯ ಉಸಿರಾಟ ಸಂಬಂಧಿತ ಕಾಯಿಲೆಯೊಂದಕ್ಕೆ ತುತ್ತಾಗುತ್ತಿದ್ದಾರೆ. ಕಲುಷಿತ ಗಾಳಿಯ ಸೇವನೆಯಿಂದಾಗಿ ಹಲವರಲ್ಲಿ ‘ವಾಕಿಂಗ್ ನ್ಯುಮೋನಿಯಾ’ ಎಂಬ ಸಮಸ್ಯೆ ಕಾಣಿಸಿಕೊಳ್ಳತೊಡಗಿದೆ.
ಮೈಕೋಪ್ಲಾಸ್ಮಾ ನ್ಯುಮೋನಿಯಾ ಎಂಬ ಬ್ಯಾಕ್ಟೀರಿಯಾದಿಂದ ಉದ್ಭವಿಸುವ ಈ ಕಾಯಿಲೆಯ ತೀವ್ರತೆಯು ಮಾಮೂಲಿ ನ್ಯುಮೋನಿಯಾಗಿಂತ ಕಡಿಮೆಯಾಗಿದ್ದರೂ, ಇದು ಉಸಿರಾಟದಲ್ಲಿ ತೊಂದರೆ ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ದೈಹಿಕ ಪರೀಕ್ಷೆ ಅಥವಾ ಎಕ್ಸರೇ ಮೂಲಕ ಪತ್ತೆ ಮಾಡಬಹುದು. ಸಾಮಾನ್ಯವಾಗಿ ಸ್ವಾಸ್ಥ್ಯ ಹದಗೆಟ್ಟಾಗ ಬೇಕೆನಿಸುವ ವಿಶ್ರಾಂತಿ, ವಾಕಿಂಗ್ ನ್ಯುಮೋನಿಯಾ ಪೀಡಿತರಲ್ಲಿ ಕಾಣಿಸದ ಕಾರಣ ಇದಕ್ಕೆ ಈ ಹೆಸರಿಡಲಾಗಿದೆ.ವಾಕಿಂಗ್ ನ್ಯುಮೋನಿಯಾ ಹರಡುವಿಕೆ, ಲಕ್ಷಣ.
ವಿಶ್ವದ ಅತಿ ಕಲುಷಿತ ನಗರ ಲಾಹೋರ್, 1900 ದಾಟಿದ ವಾಯು ಗುಣಮಟ್ಟ, ಭಾರತದ ಮೇಲೆ ಪಾಕ್ ಆರೋಪ!
ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಕಣಗಳೊಂದಿಗೆ ಸಂಪರ್ಕದಲ್ಲಿ ಬಂದಾಗ ವಾಕಿಂಗ್ ನ್ಯುಮೋನಿಯಾ ಹರಡುತ್ತದೆ. ಸಾಮಾನ್ಯವಾಗಿ ಜನಸಂದಣಿ ಇರುವ ಸ್ಥಳಗಳಲ್ಲಿ ಇದರ ಹರಡುವಿಕೆಯ ಪ್ರಮಾಣ ಅಧಿಕವಾಗಿರುತ್ತದೆ. ವಾಕಿಂಗ್ ನ್ಯುಮೋನಿಯಾದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಜ್ವರ, ಕೆಮ್ಮು, ಗಂಟಲು ನೋವಿನ ಲಕ್ಷಣಗಳು ಕಂಡುಬರುತ್ತವೆ. ಅಂಥವರು ಉಸಿರಾಡಲು ಕಷ್ಟ ಪಡುತ್ತಾರೆ. ಇದು 3ರಿಂದ 5 ದಿನಗಳ ವರೆಗೆ ಮುಂದುವರೆಯುವ ಸಾಧ್ಯತೆ ಇರುತ್ತದೆ.
ಕಳಪೆ ವಾಯುಗುಣಮಟ್ಟ: 3 ದಿನ ಗ್ರಾಪ್-4 ಮುಂದುವರಿಕೆಗೆ ಸುಪ್ರೀಂ ಸೂಚನೆ
ಕಳಪೆ ವಾಯುಗುಣಮಟ್ಟದಿಂದ ಉಸಿರುಗಟ್ಟುತ್ತಿರುವ ರಾಷ್ಟ್ರರಾಜಧಾನಿ ದೆಹಲಿ ಹಾಗೂ ಸುತ್ತಲಿನ ವಲಯಗಳಲ್ಲಿ ಜಾರಿಗೊಳಿಸಲಾಗಿರುವ 4ನೇ ಹಂತದ ಮಾಲಿನ್ಯ ವಿರೋಧಿ ಗ್ರಾಪ್ ಅನ್ನು ಇನ್ನೂ 3 ದಿನ ಮುಂದುವರೆಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.