ನಟಿ ರಂಭಾ ದಾಂಪತ್ಯದಲ್ಲಿ ತಮನ್ನಾ ಎಂಟ್ರಿ ? ಈ ವಿಷ್ಯಕ್ಕೆ ಪತಿ ಮೇಲಿದೆ ಕೋಪ !

Published : Nov 30, 2024, 12:33 PM IST
ನಟಿ ರಂಭಾ ದಾಂಪತ್ಯದಲ್ಲಿ ತಮನ್ನಾ ಎಂಟ್ರಿ ? ಈ ವಿಷ್ಯಕ್ಕೆ ಪತಿ ಮೇಲಿದೆ ಕೋಪ !

ಸಾರಾಂಶ

90ರ ದಶಕದ ಪ್ರಸಿದ್ಧ ನಟಿ ರಂಭಾ ಹಾಗೂ ಅವರ ಪತಿ ಮಧ್ಯೆ ತಮನ್ನಾ ಭಾಟಿಯಾ ಬಂದಿದ್ದಾರೆ. ಪತಿಯ ಈ ಕೆಲಸದಲ್ಲಿ ರಂಭಾ ಬೇಸರಗೊಂಡಿದ್ದಾರೆ. ಅದೇನು? ತಮನ್ನಾ ಯಾಕೆ ಬಂದ್ರು ಗೊತ್ತಾ?   

ವಾಟ್ಸ್ ಅಪ್ ಸ್ಟೇಟಸ್ (WhatsApp status) ಗೆ ಫೋಟೋ ಹಾಕಿದಾಗ ಪತಿಯಿಂದ ಲೈಕ್ ಬಂದಿಲ್ಲಾ ಅಂದ್ರೆ ಕೋಪ ನೆತ್ತಿಗೇರುತ್ತೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಂಡತಿ ಬಿಟ್ಟು ಬೇರೆಯವರನ್ನು ಫಾಲೋ ಮಾಡಿದ್ರೆ, ಪತ್ನಿಗೆ ಕೋಪ ಬರದೆ ಇರುತ್ತಾ? ಸೌತ್ ಬ್ಯೂಟಿ ರಂಭಾ (South Beauty Rambha) ಕೂಡ ಇಂಥ ವಿಷ್ಯದಲ್ಲಿ ರಾಜಿ ಆಗೋದಿಲ್ಲ. ಹಾಗಂತ ಇದನ್ನು ನಾವು ಹೇಳ್ತಿಲ್ಲ. ಸ್ವತಃ ರಂಭಾ, ತನ್ನ ಪತಿ ಸೋಶಿಯಲ್ ಮೀಡಿಯಾ (Social Media)ದಲ್ಲಿ ಏನ್ ಮಾಡಿದ್ದಾರೆ, ಅದಕ್ಕೆ ನಾನೇನು ಮಾಡಿದ್ದೇನೆ ಎಂಬುದನ್ನು ಹೇಳಿದ್ದಾರೆ.

ದಕ್ಷಿಣ ಭಾರದತ ಬ್ಯೂಟಿಫುಲ್ ನಟಿ ರಂಭಾ,90ರ ದಶಕದಲ್ಲಿ ಇಂಡಸ್ಟ್ರಿ ಆಳಿದ ನಟಿಯರಲ್ಲಿ ಒಬ್ಬರು. ಅವರ ನಟನೆ, ಡಾನ್ಸ್ ಗೆ ಈಗ್ಲೂ ಅಭಿಮಾನಿಗಳು ಸೋಲ್ತಾರೆ. ಸದ್ಯ ವೃತ್ತಿಗೆ ಬ್ರೇಕ್ ನೀಡಿ ಕುಟುಂಬದ ಜೊತೆ ಬ್ಯುಸಿ ಇರುವ ರಂಭಾ, ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಷ್ಯವನ್ನು ಹಂಚಿಕೊಂಡಿದ್ದಾರೆ. ರಂಭಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತಿಯನ್ನು ಫಾಲೋ ಮಾಡೋದಿಲ್ಲ. ಯಾಕೆ ಅಂತ ನಿರೂಪಕರು ಕೇಳಿದ್ರೆ ಅದಕ್ಕೆ ರಂಭಾ, ತಮನ್ನಾ ಹೆಸರು ಹೇಳಿದ್ದಾರೆ.

ಇನ್ನೆರಡೇಟು…ಭಾಗ್ಯಾ ಕಪಾಳಮೋಕ್ಷಕ್ಕೆ ವೀಕ್ಷಕಕರ ಚಪ್ಪಾಳೆ

ರಂಭಾ – ಪತಿ ಮಧ್ಯೆ ಬಂದ್ರಾ ತಮನ್ನಾ (Tamannaah)? : ರಂಭಾ ಪತಿ, ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್ ಓಪನ್ ಮಾಡಿದ್ದ ಟೈಂನಲ್ಲಿ ರಂಭಾ, ತನ್ನನ್ನು ಮೊದಲು ಫಾಲೋ ಮಾಡುವಂತೆ ಹೇಳಿದ್ದರು. ಆದ್ರೆ ಅವರ ಪತಿ, ರಂಭಾ ಬಿಟ್ಟು, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾರನ್ನು ಫಾಲೋ ಮಾಡಿದ್ರಂತೆ. ಇದ್ರಿಂದ ರಂಭಾಗೆ ಸ್ವಲ್ಪ ಹೊಟ್ಟೆ ಉರಿಯಾಗಿದೆ. ಹಾಗಾಗಿ ಈಗ್ಲೂ ರಂಭಾ ತಮ್ಮ ಪತಿಯ ಸೋಶಿಯಲ್ ಅಕೌಂಟ್ ಫಾಲೋ ಮಾಡ್ತಿಲ್ಲ.

ನಾನು ನಿಮ್ಮನ್ನು ಮೊದಲು ಫಾಲೋ ಮಾಡ್ತೇನೆ ಹಾಗೇ ನೀವು ನನ್ನನ್ನು ಫಾಲೋ ಮಾಡಿ ಅಂತ ರಂಭಾ ಹೇಳಿದ್ದರಂತೆ. ಆದ್ರೆ ಪತಿ ಮಾತು ಕೇಳಲಿಲ್ಲ. ಹಾಗಾಗಿ ಇನ್ಸ್ಟಾದಲ್ಲಿ ನನ್ನ ಪತಿಯನ್ನು ನಾನು ಫಾಲೋ ಮಾಡ್ತಿಲ್ಲ. ನಿಮಗೆ ತಮನ್ನಾ ಇಷ್ಟವಲ್ಲ ಬಿಡಿ ಅಂದೆ ಎಂದ ರಂಭಾ, ಜನರು ತಪ್ಪಾಗಿ ತಿಳಿಬಹುದು ಅಂತ ತಮ್ಮ ಮಾತನ್ನು ಸರಿಪಡಿಸಿಕೊಂಡಿದ್ದಾರೆ. ತಮನ್ನಾ ಫಾಲೋ ಮಾಡೋದು ಬೇಡ ಅಂತ ನಾನು ಹೇಳಲ್ಲ. ನನಗೆ ಅದ್ರಿಂದ ಖುಷಿ ಇದೆ. ಆದ್ರೆ ಪತ್ನಿಯಾಗಿ ನನಗೆ ಮೊದಲ ಆದ್ಯತೆ ನೀಡ್ಬೇಕಲ್ವಾ ಎಂದಿದ್ದಾರೆ. ರಂಭಾ ಪತಿ, ರಂಭಾ ಇನ್ಸ್ಟಾ ಖಾತೆಯನ್ನು ಫಾಲೋ ಮಾಡ್ತಿದ್ದಾರಂತೆ. 

ರಂಭಾ ಮಾತು ಕೇಳಿದ ಬಳಕೆದಾರರು ಸಾಕಷ್ಟು ಕಮೆಂಟ್ ನೀಡಿದ್ದಾರೆ. ಅನೇಕ ಮಹಿಳೆಯರು ನಾವು ಕೂಡ ನಮ್ಮ ಪತಿ ಖಾತೆಯನ್ನು ಫಾಲೋ ಮಾಡ್ತಿಲ್ಲ ಎಂದಿದ್ದಾರೆ. ಪ್ರೀತಿಸುವ ಮತ್ತು ಸ್ವಲ್ಪ ಭಾವನಾತ್ಮಕ ಪುರುಷ ಅಥವಾ ಮಹಿಳೆ ತಮ್ಮ ಪಾಲುದಾರರ ಆದ್ಯತೆಯಾಗಲು ಬಯಸುತ್ತಾರೆ. ಇದನ್ನು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಹಾಗಂತ ಬೇರೆಯವರನ್ನು ಬದಲಿಸಲು ಸಾಧ್ಯವಿಲ್ಲ. ನಿಮ್ಮನ್ನು ನಾವು ಮೆಚ್ಚಿಕೊಂಡಿದ್ದೇವೆ. ನಿಮ್ಮನ್ನು ನಾವು ಫಾಲೋ ಮಾಡ್ತೇವೆ ಎಂದಿದ್ದಾರೆ ಕೆಲ ಫ್ಯಾನ್ಸ್.

ಬಟ್ಟೆ ಬಿಚ್ಚುವ ಮಾತನಾಡಿ ಪೇಚಿಗೆ ಸಿಲುಕಿದ ಸನಾ ಖಾನ್‌! ಜಾಲತಾಣದಲ್ಲಿ ನಟಿ ಇನ್ನಿಲ್ಲದ ಟ್ರೋಲ್‌..

ರಂಭಾ ಕನ್ನಡ, ತೆಲುಗು, ತಮಿಳು ಸೇರಿದಂತೆ ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ಮಿಂಚಿದ ಬೆಡಗಿ. 100ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ರಂಭಾ, ಕನ್ನಡದಲ್ಲಿ ರವಿಚಂದ್ರನ್ ಜೊತೆ ಮಿಂಚಿದ್ದರು.  ಅವರು 201೦ರಲ್ಲಿ ಕೆನಡಾ ಮೂಲದ ಉದ್ಯಮಿ ಇಂದ್ರಕುಮಾರ್ ಪದ್ಮನಾಥನ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಮೂವರು ಮಕ್ಕಳು. ಕೆಲ ದಿನಗಳ ಹಿಂದೆ ರಂಭಾ ಹಾಗೂ ಇಂದ್ರಕುಮಾರ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ವದಂತಿ ಹಬ್ಬಿತ್ತು. ಅದಕ್ಕೆ ರಂಭಾ ಬೇಸರವ್ಯಕ್ತಪಡಿಸಿದ್ದರು. ಅಲ್ಲದೆ ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂಬ ಸ್ಪಷ್ಟನೆಯನ್ನು ನೀಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?