ಪ್ರಧಾನಿ ಮೋದಿ ವಿದೇಶದಿಂದ ಬಂದ ಬಳಿಕ ರಾಜ್ಯದಲ್ಲಿ ಸಂಪುಟ ಸರ್ಜರಿ?

May 4, 2022, 10:18 AM IST

ಬೆಂಗಳೂರು (ಮೇ. 04): ಬಹುನಿರೀಕ್ಷಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಅವರ ಸಂಪುಟ ಕಸರತ್ತಿಗೆ (Cabinet Expansion) ಹೆಚ್ಚೂ ಕಡಮೆ ಇನ್ನೊಂದು ವಾರದಲ್ಲಿ ಮುಕ್ತಿ ಸಿಗುವ ಸಾಧ್ಯತೆಯಿದೆ. ಇಂಥದೊಂದು ಸುಳಿವನ್ನು ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ರಾಜ್ಯ ನಾಯಕರಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಸುಳಿವು, ಕನಸು ಕಾಣಬೇಡಿ ಎಂದ ಆರ್ ಅಶೋಕ್...!

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಪಸಾದ ಬಳಿಕ ಅವರೊಂದಿಗೆ ಮಾತುಕತೆ ನಡೆಸಿ ಸಂಪುಟ ಸರ್ಜರಿಗೆ ಹಸಿರು ನಿಶಾನೆ ತೋರುವ ಸಂಭವವಿದೆ. ಆದರೆ, ಇದು ಸಣ್ಣ ಪ್ರಮಾಣದ ಪುನಾರಚನೆ ಆಗಲಿದೆಯೇ ಅಥವಾ ಗುಜರಾತ್‌ ಮಾದರಿ ಆಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಜ್ಯ ನಾಯಕರ ಪ್ರಕಾರ, ಸಣ್ಣ ಪ್ರಮಾಣದ ಪುನಾರಚನೆ ಮಾಡುವ ಸಾಧ್ಯತೆಯೇ ಹೆಚ್ಚು.