ಎಚ್‌ಡಿ ದೇವೇಗೌಡರು ಈ ದೇಶದ ಪ್ರಧಾನಿಯಾಗಿ ಈಗಾಗಲೇ ಸಾಧನೆ ಮಾಡಿದ್ದಾರೆ. ಮುಂದೆ ಅಂತಹ ಅವಕಾಶ ಒದಗಿಬಂದರೆ ಎಚ್‌ಡಿ ಕುಮಾರಸ್ವಾಮಿಯವರು ಮುಂದೆ ದೇಶದ ಪ್ರಧಾನಿ ಆಗಬಹುದು ಎಂದು ಜಿಟಿ ದೇವೇಗೌಡ ಭವಿಷ್ಯ ನುಡಿದರು.
ಬೆಂಗಳೂರು (ಜೂ.14) ಎಚ್‌ಡಿ ದೇವೇಗೌಡರು ಈ ದೇಶದ ಪ್ರಧಾನಿಯಾಗಿ ಈಗಾಗಲೇ ಸಾಧನೆ ಮಾಡಿದ್ದಾರೆ. ಮುಂದೆ ಅಂತಹ ಅವಕಾಶ ಒದಗಿಬಂದರೆ ಎಚ್‌ಡಿ ಕುಮಾರಸ್ವಾಮಿಯವರು ಮುಂದೆ ದೇಶದ ಪ್ರಧಾನಿ ಆಗಬಹುದು ಎಂದು ಜಿಟಿ ದೇವೇಗೌಡ ಭವಿಷ್ಯ ನುಡಿದರು.
ಹೆಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ ಹಿನ್ನೆಲೆ ಜೆಪಿ ಭವನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಎಚ್‌ಡಿ ದೇವೇಗೌಡರಂತೆ ಕುಮಾರಸ್ವಾಮಿಯವರು ಸಹ ಪ್ರಧಾನಿ ಆಗಬಹುದು. ಅವರು ಕೂಡ ತಂದೆಯ ರೀತಿ ಸಾಧನೆ ಮಾಡಬೇಕು. ಅದಕ್ಕೆ ನಿಮ್ಮೆಲ್ಲರ ಸಹಕಾರ, ಶ್ರಮ, ತ್ಯಾಗ ಅಗ್ಯವಿದೆ ಎಂದರು.
ದೇವೇಗೌಡರನ್ನು ಸೋಲಿಸಿದ್ದು ನಾನೇ, ಅದರಲ್ಲಿ ಅನುಮಾನ ಏನು ಇಲ್ಲ: ಸಚಿವ ರಾಜಣ್ಣ
ಈ ಬಾರಿ ನಾವು ಬಿಜೆಪಿಯೊಂದಿಗೆ ಒಂದಾಗಿ ಕೆಲಸ ಮಾಡಿದೆವು. ಮೈಸೂರಿನಲ್ಲಿ ಯದುವೀರ್ ಗೆದ್ದಿದ್ರೆ ಅದು ಜೆಡಿಎಸ್ ಓಟಿನಿಂದ ಹಾಗೇ ಕೋಲಾರದಲ್ಲಿ ಮಲ್ಲೇಶ್ ಬಾಬು ಗೆದ್ದಿದ್ರೆ ಅದಕ್ಕೆ ಬಿಜೆಪಿ ಓಟುಗಳೇ ಕಾರಣ. ಅದೇ ರೀತಿ ಚಿಕ್ಕಬಳ್ಳಾಪುರ ಸೇರಿ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಕೊಡುಗೆ ನೀಡಿದೆ ಎಂದರು.
ಜೆಡಿಎಸ್‌ನವರದ್ದು ಕುಟುಂಬ ರಾಜಕಾರಣ ಅಂತಾರೆ. ದೇವೇಗೌಡರು, ಕುಮಾರಸ್ವಾಮಿಯವರು ಇಲ್ಲದಿದ್ರೆ ಪಕ್ಷ ಉಳಿತಿತ್ತಾ? ಮತ್ತೆ ಈಗ ಮತ್ತೊಂದು ಹುಲಿ ಬರ್ತಿದೆ(ನಿಖಿಲ್ ಕುಮಾರಸ್ವಾಮಿ). ಕುಮಾರಸ್ವಾಮಿ ನಮಗೆ ಆಶಾಕಿರಣವಾಗಿದ್ದಾರೆ. ಕುಮಾರಸ್ವಾಮಿ, ರೇವಣ್ಣ ಇಬ್ಬರೂ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಾವು ಮೂಲೆಯಲ್ಲಿ ಕುಳಿತಿದ್ದೆವು ದೇವರು ಒಂದು ಅವಕಾಶ ಕೊಟ್ಟಿದ್ದಾನೆ. ಹೀಗಾಗಿ ಬಿಜೆಪಿ ಪಕ್ಷದೊಂದಿಗೆ ಸೇರಿ ಮುಂದೆ ಹೋಗಬೇಕಿದೆ. ಎಷ್ಟೇ ಕಷ್ಟ ಬಂದ್ರೂ ಒಂದಾಗಿ ಹೋರಾಟ ಮಾಡಿ ಸರ್ಕಾರ ರಚನೆ ಮಾಡಬೇಕು. ನೀವೇ ಕುಮಾರಸ್ವಾಮಿ ಆಗಬೇಕು. ಇಡೀ ದೇಶವನ್ನು ಕುಮಾರಸ್ವಾಮಿ ಸುತ್ತಬೇಕಿದೆ, ಸಂಘಟನೆ ಮಾಡಬೇಕಿದೆ ಎಂದರು.
ಬಿಎಸ್‌ವೈ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರ? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದೇನು?
ನಮಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ ಚುನಾವಣೆಯಲ್ಲಿ ಗೂಳಿಗೆ ಕಡಿವಾಣ ಹಾಕಬೇಕು. ಗೂಳಿಗೆ ಕಡಿವಾಣ ಹಾಕಲಿಲ್ಲ ಅಂದ್ರೆ ನಮಗೆ ಉಳಿಗಾಲವಿಲ್ಲ. ನಮ್ಮ ಮೆಂಬರ್‌ಶಿಪ್ ಜುಲೈ 30 ಒಳಗೆ ಮುಗಿಬೇಕು. ನಾವು ಮತ್ತೆ ಅಧಿಕಾರಕ್ಕೆ ಬರಬೇಕು. ದೇವೇಗೌಡರು ಇರುವಾಗಲೇ ನಮ್ಮ ಪಕ್ಷ ಬೆಳೆಯಬೇಕು. ಜಿಟಿ ಹೋದ್ರು, ಮಂಜಣ್ಣ ಹೋದ್ರು ಅಂದರು. ಆದರೆ ಯಾರಾದ್ರೂ ಹೋದರಾ? ಇಲ್ಲ, ನಾವೆಲ್ಲ ಕುಮಾರಸ್ವಾಮಿ, ದೇವೇಗೌಡರ ಜೊತೆ ಇದ್ದೇವೆ ಎಂದರು.