ಜಮೀರ್ ಮೇಲೆ ಇಡಿ ರೇಡ್: ಸಂಬಂಧಿಸಿದ ದಾಖಲೆ ಕೊಟ್ರೆ ಕೇಸ್ ಮುಗಿಯುತ್ತೆ ಅಷ್ಟೇ ಎಂದ ಎಚ್‌ಡಿಕೆ

Aug 5, 2021, 4:42 PM IST

ಬೆಂಗಳೂರು (ಆ. 05): ಇಡಿ ಅಧಿಕಾರಿಗಳ ಕೆಲಸ ಅವರು ಮಾಡ್ತಾರೆ. ಇಡಿ ರೇಡ್‌ಗೂ, ನನಗೂ ಯಾವುದೇ ಸಂಬಂಧ ಇಲ್ಲ. ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಕೊಟ್ಟರೆ ಅಲ್ಲಿಗೆ ಕೇಸ್ ಮುಗಿಯುತ್ತದೆ' ಎಂದು ಜಮೀರ್ ನಿವಾಸದ ಮೇಲೆ ಇಡಿ ದಾಳಿ ಬಗ್ಗೆ ಮಾಜಿ ಸಿಎಂ ಎಚ್‌ಡಿಕೆ ಪ್ರತಿಕ್ರಿಯಿಸಿದ್ದಾರೆ. 

ಜಮೀರ್ ಅಹ್ಮದ್‌ಗೆ ಇಡಿ ಶಾಕ್, ಆಸ್ತಿಪಾಸ್ತಿ ವಿವರ ನೋಡಿದ್ರೆ, ನೋಡಿದವರೇ ಶಾಕ್..!

'ಇಡಿ, ಐಟಿ ದಾಳಿಗಳು ನಡೆಯುತ್ತಲೇ ಇರುತ್ತವೆ. ಸಂಬಂಧಪಟ್ಟ ದಾಖಲೆ ಕೊಡಬೇಕಾಗುತ್ತದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ' ಎಂದು ಎಚ್‌ಡಿಕೆ ಹೇಳಿದ್ದಾರೆ.