Apr 20, 2022, 11:28 AM IST
ಬೆಂಗಳೂರು (ಏ. 20): ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ (Hubballi Riot) ಶನಿವಾರ ಸಂಭವಿಸಿದ ಗಲಭೆ ವೇಳೆ ಉದ್ರಿಕ್ತ ಜನರ ಗುಂಪು ಪ್ರಚೋದನಾಕಾರಿ ಘೋಷಣೆ ಕೂಗಿರುವ ಮತ್ತೆರಡು ವಿಡಿಯೋ ಇದೀಗ ವೈರಲ್ ಆಗಿವೆ. ಇದು ಇದೀಗ ಮತ್ತಷ್ಟುಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.
ಸುವರ್ಣ ನ್ಯೂಸ್ನಲ್ಲಿ ಮತ್ತೊಂದು ಸ್ಫೋಟಕ ವಿಡಿಯೋ ಲಭ್ಯವಾಗಿದೆ. ಪೊಲೀಸ್ ವಾಹನ ಅಡ್ಡಗಟ್ಟಿ, ಪಲ್ಟಿ ಹೊಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಗಲಭೆ ಬಳಿಕ ಮಾಸ್ಟರ್ ಮೈಂಡ್ಗಳಾದ ವಾಸೀಂ ಪಠಾಣ್, ಆರಿಫ್ ಎಸ್ಕೇಪ್ ಆಗಿದ್ದಾರೆ.