Botswana Variant : ವೇಗವಾಗಿ ಹರಡುತ್ತೆ, ಲಸಿಕೆಗೂ ಬಗ್ಗದು, ಆತಂಕ ಸೃಷ್ಟಿಸಿದೆ ಬೋಟ್ಸ್‌ವಾನಾ.!

Nov 27, 2021, 11:24 AM IST

ಬೆಂಗಳೂರು (ನ. 27):  ಅತ್ಯಂತ ವೇಗವಾಗಿ ಹಬ್ಬುವ, ಲಸಿಕೆಗೂ ಬಗ್ಗದ, ಡೆಲ್ಟಾಗಿಂತಲೂ (Delta Varient) ಅಪಾಯಕಾರಿ ಎಂದು ಬಣ್ಣಿತವಾದ ಕೋವಿಡ್‌ನ ಹೊಸ ರೂಪಾಂತರಿ ‘ಬೋಟ್ಸ್‌ವಾನಾ ತಳಿ’ (Botswana Variant)  ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. ಇನ್ನೂ ಡೆಲ್ಟಾವೈರಸ್‌ನ ಆಘಾತದಿಂದಲೇ ಚೇತರಿಸಿಕೊಳ್ಳದ ಆಫ್ರಿಕಾ ಮತ್ತು ಯುರೋಪ್‌ ದೇಶಗಳಲ್ಲೇ ಈ ಹೊಸ ತಳಿ ಕಾಣಿಸಿಕೊಂಡಿರುವುದು ಆತಂಕವನ್ನು ಮತ್ತಷ್ಟುಹೆಚ್ಚಿಸಿದೆ.

Controversy: 'ದಲಿತ ಕಾಲೋನಿಯಲ್ಲಿ ಪಾನಕ, ಮಜ್ಜಿಗೆ ಕುಡಿಯದವರು, ಪಾದಯಾತ್ರೆ ಮಾಡೋದು ಬೂಟಾಟಿಕೆ'

ಇದು ಅತ್ಯಂತ ವೇಗವಾಗಿ ಹಬ್ಬುತ್ತದೆ. ಲಸಿಕೆಗೂ ಬಗ್ಗದು. ವೈರಸ್‌ನಲ್ಲಿ ಸ್ಪೈಕ್‌ ಪ್ರೋಟೀನ್‌ಗಳು ಈಗಾಗಲೇ 10 ಬಾರಿ ರೂಪಾಂತರ ಕಂಡಿವೆ. ಇದು ಡೆಲ್ಟಾ, ಬೀಟಾ ಸೇರಿದಂತೆ ಯಾವುದೇ ರೂಪಾಂತರಿಗಿಂತ ಹೆಚ್ಚಿನ ಬದಲಾವಣೆ. ಹೀಗಾಗಿಯೇ ಜಗತ್ತಿನೆಲ್ಲೆಡೆ ಈ ಹೊಸ ತಳಿಯ ಬಗ್ಗೆ ಭಾರೀ ಆತಂಕ ವ್ಯಕ್ತವಾಗಿದೆ.