ಸಾಕಷ್ಟು ದಿನಗಳ ಕಾಲ ಸೀಕ್ರೆಟ್ ಆಗಿ ಲವ್ ಮಾಡ್ತಿದ್ದ ಈ ಜೋಡಿ, ಇತ್ತೀಚೆಗೆ ತಮ್ಮ ಸಂಬಂಧವನ್ನು ಬಹಿರಂಗ ಪಡಿಸಿದರು. ಇಬ್ಬರು ಒಟ್ಟಿಗೆ ಸುತ್ತಾಡಿ, ಖುಷಿಯಾಗಿ ರಿಲೇಷನ್ ಶಿಪ್ ಮುಂದುವರೆಸುತ್ತಿದ್ದಾರೆ. ಆದರೆ ಮದುವೆ ಬಗ್ಗೆ ಮಾತ್ರ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ವರ್ಷ ಮದುವೆ ಆಗಬಹುದು ಎಂಬ ಗಾಳಿ ಸುದ್ದಿ ಹಬ್ಬಿತ್ತು. ಆದರೆ ಅದು ಕೇವಲ ವದಂತಿಯಾಗಿತ್ತು.
ಮದುವೆ ಬಗ್ಗೆ ಮಾಧ್ಯಮಗಳು ಹಲವು ಬಾರಿ ತಮನ್ನಾ ಮತ್ತು ವಿಜಯ್ ಅವರನ್ನು ಮದುವೆ ಕುರಿತು ಪ್ರಶ್ನಿಸಿದ್ದರು.. ಆದರೆ ಅವರಿಬ್ಬರು ಯಾವುದಕ್ಕೂ ಸ್ಪಷ್ಟ ಉತ್ತರ ನೀಡಲಿಲ್ಲ. ಇದೀಗ ತಮನ್ನಾ ತಮ್ಮ ಪ್ರಿಯಕರ ವಿಜಯ್ ಗೆ ಶಾಕ್ ನೀಡಿದ್ದಾರೆ ಎನ್ನಲಾಗುತ್ತಿದೆ. ಮದುವೆ ಬಗ್ಗೆ ಅವರ ಉತ್ತರ ವಿಚಿತ್ರವಾಗಿದೆ ಎನ್ನಲಾಗುತ್ತಿದೆ.