VIP Duty: ಗಣ್ಯರ ಮನೆಗೆ ಭದ್ರತೆ ಒದಗಿಸುವಾಗ ಎಚ್ಚರಿಕೆ ವಹಿಸಿ, ಅಧಿಕಾರಿಗಳಿಗೆ ಸೂಚನೆ

Jan 21, 2022, 11:22 AM IST

ಬೆಂಗಳೂರು (ಜ. 21): ಗಾಂಜಾ ದಂಧೆಯಲ್ಲಿ ಮುಖ್ಯಮಂತ್ರಿಗಳ (CM Bommai) ಮನೆ ಭದ್ರತೆಗೆ ನಿಯೋಜಿತರಾಗಿದ್ದ ಕೋರಮಂಗಲ ಪೊಲೀಸ್‌ ಠಾಣೆಯ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ ಪ್ರಕರಣದ ತನಿಖೆಯನ್ನು ಸಿಸಿಬಿಗೆ (CCB) ವಹಿಸಿ ಆಯುಕ್ತ ಕಮಲ್‌ ಪಂತ್‌ (Kamal Panth) ಆದೇಶಿಸಿದ್ದಾರೆ.

Bengaluru: ಸಿಎಂ ಮನೆಯಂಗಳದಲ್ಲೇ ಪೊಲೀಸರಿಂದ ಗಾಂಜಾ ದಂಧೆ, ಇಬ್ಬರು ಅರೆಸ್ಟ್

ಗಣ್ಯರ ಭದ್ರತೆಗೆ ಪ್ರಾಮಾಣಿಕ ಅಧಿಕಾರಿ, ಸಿಬ್ಬಂದಿಗಾಗಿ ಇಲಾಖೆ ಹುಡುಕಾಟ ನಡೆಸುತ್ತಿದೆಯಾ.? ಪೊಲೀಸ್ ಸಿಬ್ಬಂದಿಗೆ ನೀಡಿದ್ದ ವೈಯರ್‌ಲೆಸ್ ಮೆಸೇಜ್ ಲೀಕ್ ಆಗಿದೆ. ಸಿಎಂ, ರಾಜ್ಯಪಾಲರು, ನ್ಯಾಯಾಧೀಶರ ಮನೆಗಳಿಗೆ ಭದ್ರತೆ ಒದಗಿಸುವಾಗ ಅಧಿಕಾರಿಗಳು ಎಚ್ಚರ ವಹಿಸಬೇಕು. ಮದ್ಯವ್ಯಸನಿ, ಮಾನಸಿಕ ಅಸಮತೋಲನ ಹೊಂದಿರುವವರು ಬೇಡ, ಕ್ಲೀನ್ ಹ್ಯಾಂಡ್ ಇರುವ ಅಧಿಕಾರಿಗಳ ನಿಯೋಜನೆಗೆ ಸೂಚನೆ ನೀಡಿದ್ದಾರೆ.